ಬಸವಕಲ್ಯಾಣದಲ್ಲಿ ತಾಲೂಕು ಆಡಳಿತದಿಂದ ಬುಧವಾರ ಆಯೋಜಿಸಿದ್ದ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಉದ್ಘಾಟನಾ ಸಮಾರಂಭದಲ್ಲಿ ತಹಸೀಲ್ದಾರ್ ಡಾ.ದತ್ತಾತ್ರೇಯ ಗಾದಾ, ಇಒ ರಮೇಶ ಸುಲ್ಫಿ, ದಿಲೀಪಕುಮಾರ ಉತ್ತಮ, ಸಿದ್ದವೀರಯ್ಯ ರುದ್ನೂರ, ಸಿಪಿಐ ಅಲಿಸಾಬ್, ಸದಾನಂದ ಬಿರಾದಾರ, ಡಾ.ರವೀಂದ್ರನಾಥ, ವಿ.ಬಿ.ಹಿರೇಗೌಡರ, ಅನೀಲಕುಮಾರ ಚಾಂದೆ, ರಾಜು ಭೋಸ್ಲೆ ಇದ್ದರು. 
ಜಿಲ್ಲೆ

ಪ್ರಜಾಪ್ರಭುತ್ವಕ್ಕೆ ಅಡಿಪಾಯ ಹಾಕಿದ ಶಿವಾಜಿ ಮಹಾರಾಜರು

ಬಸವಕಲ್ಯಾಣ: ಸ್ವರಾಜ್ಯ ಸ್ಥಾಪನೆ ಮಾಡಿದ ಛತ್ರಪತಿ ಶಿವಾಜಿ ಮಹಾರಾಜರು ಪ್ರಜಾಪ್ರಭುತ್ವಕ್ಕೆ ಅಡಿಪಾಯ ಹಾಕಿದ್ದರು. ಯುದ್ಧದಲ್ಲಿಯೂ ಮಾನವೀಯ ಮೌಲ್ಯಗಳನ್ನು ಪಾಲನೆ ಮಾಡಿದ ಅವರು ವಿಶ್ವ ಶ್ರೇಷ್ಠ ಮಹಾರಾಜರಾಗಿದ್ದರು ಎಂದು ಶ್ರೀ ಛತ್ರಪತಿ ಶಾಹು ಮಹಾರಾಜ ಮರಾಠಾ ಸೇವಾ ಸಂಘದ ಅಧ್ಯಕ್ಷ ಸದಾನಂದ ಬಿರಾದಾರ ಹೇಳಿದರು.

ನಗರದ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ತಾಲೂಕು ಆಡಳಿತದಿಂದ ಬುಧವಾರ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಶಿವಾಜಿ ಮಹಾರಾಜರು ಸ್ಥಾಪಿಸಿದ್ದ ಸ್ವರಾಜ್ಯದಲ್ಲಿ ಪ್ರಜಾಪ್ರಭುತ್ವದ ಸಿದ್ಧಾಂತ ಅಡಗಿದೆ. ಅವರು ಸಾಮಾಜಿಕ ನ್ಯಾಯದ ಚಿಂತಕರಾಗಿದ್ದರು. ಅವರ ಚರಿತ್ರೆ, ಅವರ ಯುದ್ಧ ಕೌಶಲ್ಯ ವಿಶ್ವಮಾನ್ಯ ಎಂದು ಬಣ್ಣಿಸಿದರು.

ತಹಸೀಲಾರ್ ಡಾ.ದತ್ತಾತ್ರೇಯ ಗಾದಾ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರ ಚರಿತ್ರೆಯನ್ನು ಪ್ರತಿಯೊಬ್ಬರೂ ತಿಳಿದುಕೊಂಡು ಜೀವನದಲ್ಲಿ ಪ್ರೇರಣೆ ಪಡೆಯಬೇಕಾದ ಅವಶ್ಯಕತೆ ಇದೆ ಎಂದರು.

ತಾಪಂ ಕಾರ್ಯನಿರ್ವಾಹಕ ಆಧಿಕಾರಿ ರಮೇಶ ಸುಲ್ಫಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿದೇರ್ಶಕ ದಿಲೀಪಕುಮಾರ ಉತ್ತಮ, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದ್ನೂರ, ಸಿಪಿಐ ಅಲಿಸಾಬ್, ಬಿಸಿಎಂ ಅಧಿಕಾರಿ ವಿ.ಬಿ. ಹಿರೇಗೌಡರ, ಶಿರಸ್ತೇದಾರ್ ಅನೀಲಕುಮಾರ ಚಾಂದೆ, ರಾಜು ಭೋಸ್ಲೆ ಇತರರಿದ್ದರು.

ಪಶು ಸಂಗೋಪನಾ ಇಲಾಕೆ ಸಹಾಯಕ ನಿರ್ದೇಶಕ ಡಾ.ರವೀಂದ್ರನಾಥ ನಿರೂಪಣೆ ಮಾಡಿದರು. ಛತ್ರಪತಿ ಶಿವಾಜಿ ಮಹಾರಾಜರ ಕುರಿತು ಜೀಜಾಮಾತಾ ಶಾಲೆ ವಿದ್ಯಾರ್ಥಿನಿ ವರ್ಷಾ ಮಾಡಿದ ಭಾಷಣ ಗಮನ ಸೆಳೆಯಿತು.

ಕಾರ್ಯಕ್ರಮಕ್ಕೂ ಮುನ್ನ ಕೋಟೆಯಿಂದ ಅಂಬೇಡ್ಕರ್ ವೃತ್ತದವರೆಗೆ ಶಿವಾಜಿ ಮಹಾರಾಜರ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಿತು.