ಜಿಲ್ಲೆ

ಪ್ರಜಾಪ್ರಭುತ್ವ ವ್ಯವಸ್ಥೆಗೆ ಮತದಾರರೇ ಬೇರುಗಳು

ಸಕಲೇಶಪುರ: ಪ್ರಜಾಪ್ರಭುತ್ವಕ್ಕೆ ಮತದಾರ ಬೇರುಗಳಿದ್ದಂತೆ ಎಂದು ತಹಸೀಲ್ದಾರ್ ವಿ.ಮಂಜುನಾಥ್ ಹೇಳಿದರು.

ಶನಿವಾರ ತಾಲೂಕು ಆಡಳಿತ ಪಟ್ಡಣದ ಪುರಭವನದಲ್ಲಿ ಹಮ್ಮಿಕೊಂಡಿದ್ದ ಮತದಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಪ್ರಪಂಚದಲ್ಲೆ ನಮ್ಮ ದೇಶದ ಚುನಾವಣಾ ವ್ಯವಸ್ಥೆ ವಿಶಿಷ್ಟವಾಗಿದ್ದು ನಮ್ಮ ಚುನಾವಣೆಯಲ್ಲಿ ಯಾವ ಲೋಪದೋಷಗಳು ಬಾರದಂತೆ ಬಾರತೀಯ ಚುನಾವಣಾ ಅಯೋಗ ಕೆಲಸ ಮಾಡುತ್ತಿದೆ.

ದೇಶಕ್ಕೆ ಉತ್ತಮ‌ ನಾಯಕರನ್ನು ನೀಡುವುದು ಮತದಾರರ ಕೈಯಲ್ಲಿದೆ. ಹಣ, ಹೆಂಡಕ್ಕೆ ಮತ ಮಾರಿಕೊಳ್ಳುವ ಮತದಾರರಿಂದ ಉತ್ತಮ ದೇಶ ನಿರ್ಮಾಣ ಅಸಾಧ್ಯ.

ಪ್ರಜಾಪ್ರಭುತ್ವ ದೇಶದ ಭವಿಷ್ಯ ಅಲ್ಲಿಯ ಮತದಾರನ ಮೇಲೆ ಆಧರಿತವಾಗಿದೆ. ಮತದಾನ ಹಾಗೂ ಚುನಾವಣೆಯ ಬಗ್ಗೆ ಯಾವುದೆ ಮಾಹಿತಿ ಪಡೆಯಲು 1950 ಟೋಲ್ ಫ್ರೀ ನಂ ನೀಡಲಾಗಿದೆ ಎಂದರು.