ಬಸವಕಲ್ಯಾಣದ ತಾಳಂಪಳ್ಳಿ ಜನ ಸಂಪರ್ಕ ಕಾರ್ಯಾಲಯದಲ್ಲಿ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಧನರಾಜ ತಾಳಂಪಳ್ಳಿ, ದಿಲೀಪಕುಮಾರ ಉತ್ತಮ, ಅರ್ಜುನ ಕನಕ, ಮನೋಹರ್ ಮೈಸೆ ಇತರರಿದ್ದರು 
ಜಿಲ್ಲೆ

ಪ್ರಗತಿಯಲ್ಲಿ ಸರ್ಕಾರಿ ನೌಕರರ ಪಾತ್ರ ಅನನ್ಯ

ಬಸವಕಲ್ಯಾಣ: ಸಾಮಾಜಿಕ, ಶೈಕ್ಷಣಿಕ ಕ್ಷೇತ್ರ ಸೇರಿ ಯಾವುದೇ ಕ್ಷೇತ್ರದ ಪ್ರಗತಿಯಲ್ಲಿ ಸರ್ಕಾರಿ ನೌಕರರ ಪಾತ್ರ ಅನನ್ಯವಾಗಿದೆ ಎಂದು ಉದ್ಯಮಿ, ಕಾಂಗ್ರೆಸ ಮುಖಂಡ ಧನರಾಜ ತಾಳಂಪಳ್ಳಿ ಹೇಳಿದರು.

ನಗರದ ಅವರ ಜನ ಸಂಪರ್ಕ ಕಾರ್ಯಾಲಯದಲ್ಲಿ ಶನಿವಾರ ಆಯೋಜಿಸಿಗಿದ್ದ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ಯೋಜನೆ ಜನರಿಗೆ ತಲುಪಿಸುವಲ್ಲಿ ಮುಖ್ಯ ಪಾತ್ರ ವಹಿಸುವ ಜತೆಗೆ ಸರ್ಕಾರ ಮತ್ತು ಜನರ ನಡುವೆ ಸೇತುವೆಯಾಗಿ ನೌಕಕರು ಕಾರ್ಯನಿರ್ವಹಿಸುತ್ತಾರೆ ಎಂದರು.

ಸಂಘಟನೆಯ ಮೂಲಕ ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಹಕ್ಕುಗಳನ್ನು ಪಡೆಯಲು ಅನುಕೂಲವಾಗುತ್ತದೆ. ಸಂಘದ ಚುನಾವಣೆಯಲ್ಲಿ ಒಬ್ಬರ ವಿರುದ್ಧ ಒಬ್ಬರು ಸ್ಫರ್ಧಿಸಿದರೂ ಚುನಾವಣೆ ಮುಗಿದ ನಂತರ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ಸರ್ಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸುವಲ್ಲಿ ಎಲ್ಲರೂ ಕಾಳಜಿ ವಹಿಸಿ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.

ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ, ಸಮಾಜ ಕಲ್ಯಾಣ ಇಲಾಖೆ ಎಡಿ ದೀಲಿಪಕುಮಾರ ಉತ್ತಮ ಮಾತನಾಡಿ, ಸರ್ಕಾರಿ ನೌಕರರ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರಿ ನೌಕರರ ಸಂಘ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದರು.

ಸಂಘದ ಕಾರ್ಯದರ್ಶಿ ಅಂಬಣ್ಣ ಘಾಂಘ್ರೆ, ಖಜಾಂಚಿ ಸುಭಾಷ ಕಾಮಶೆಟ್ಟಿ, ರಾಜ್ಯ ಪರಿಷತ್ ಸದಸ್ಯ ಸಂತೋಷಕುಮಾರ ಚವ್ಹಾಣ್, ನಿರ್ದೇಶಕ ಶಿವಕುಮಾರ ಜಡಗೆ ಹಾಗೂ ಉಪನ್ಯಾಸಕರ ಸಂಘದ ರಾಜ್ಯ ಕಾರ್ಯದರ್ಶಿ ನರಸಿಂಗರೆಡ್ಡಿ ಗದಲೇಗಾಂವ ಮಾತನಾಡಿದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಅರ್ಜುನಕ ಕನಕ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪ್ರಮುಖರಾದ ಮನೋಹರ ಮೈಸೆ, ರಾಜನ ಚೌಧರ, ರಮೇಶ ಉಮ್ಮಾಪುರೆ, ಅಲ್ಲಾವೂದ್ದೀನ್ ಪಟೇಲ್, ನಾಗರಾಜ ಬಿರಾದಾರ, ರೀತಾ, ರೂಪಾದೇವಿ, ಅಬ್ದುಲ್ ವಹೀದ್, ಬಂಡೆಪ್ಪ ಮೇತ್ರೆ, ಕವಿರಾಜ, ಬಸವಣ್ಣ ನೆಲ್ಲಗಿ ಇತರರಿದ್ದರು.