ಯರಗಟ್ಟಿ: ಪಟ್ಟಣದ ಅರ್ಬನ್ ಬ್ಯಾಂಕ್ ಪ್ರಗತಿಯತ್ತ ಮುನ್ನಡೆಯುತ್ತಿದ್ದು, ಗ್ರಾಹಕರ ಹಾಗೂ ಸದಸ್ಯರ ಸಹಕಾರವೇ ಪ್ರಮುಖ ಕಾರಣವಾಗಿದೆ ಎಂದು ಯರಗಟ್ಟಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಜಕಾತಿ ಹೇಳಿದರು.
ಇಲ್ಲಿನ ಯರಗಟ್ಟಿ ಅರ್ಬನ್ ಬ್ಯಾಂಕ್‌ನ 62ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, ಭಾರತೀಯ ರಿಸರ್ವ್ ಬ್ಯಾಂಕ್ ನಿಯಮಾನುಸಾರ ಸಹಕಾರಿ ಬ್ಯಾಂಕ್‌ಗಳನ್ನು ಮುನ್ನಡೆಸುವುದು ಬಹಳಷ್ಟು ಕಷ್ಟದ ಕಾರ್ಯವಾಗಿದೆ. ನಮ್ಮ ಬ್ಯಾಂಕ್‌ನ ಗ್ರಾಹಕರು ಸರಿಯಾದ ಸಮಯದಲ್ಲಿ ಸಾಲ ಮರುಪಾವತಿ ಮಾಡಿರುವುದರಿಂದ ಕಟಬಾಕಿ ಸಾಲದ ಪ್ರಮಾಣದಲ್ಲಿ ಇಳಿಕೆಯಾದ ಕಾರಣ ಸಾಕಷ್ಟು ಲಾಭಾಂಶವಾಗಿದ್ದು, ಪ್ರಸಕ್ತ ವರ್ಷದಲ್ಲಿ 63 ಲಕ್ಷ ರೂ. ನಿವ್ವಳ ಲಾಭವಾಗಿದೆ ಎಂದರು.
ಬ್ಯಾಂಕ್ ನಿವತ್ತ ವ್ಯವಸ್ಥಾಪಕ ಬಿ.ಎಂ. ರಾಯರ ಮಾತನಾಡಿ, ದಿನದಿಂದ ದಿನಕ್ಕೆ ರಿಸರ್ವ್ ಬ್ಯಾಂಕ್ ನಿಯಮಗಳು ಬಹಳಷ್ಟು ಬಿಗಿಯಾಗುತ್ತಿದೆ. ಗ್ರಾಹಕರಿಂದ ಸಾಕಷ್ಟು ದಾಖಲಾತಿ ಪಡೆದು ಸಾಲ ನೀಡಬೇಕು. ಕಟಬಾಕಿ ಸಾಲ ಆಗದಂತೆ ನೋಡಿಕೊಳ್ಳಲು ಸೂಚಿಸುತ್ತದೆ. ಇದರ ನಡುವೆಯೂ ಬ್ಯಾಂಕ್ ಸಾಕಷ್ಟು ಲಾಭದಲ್ಲಿ ಮುನ್ನಡೆಯುತ್ತಿದೆ. ಇದಕ್ಕೆ ಅಧ್ಯಕ್ಷ ಮಹಾಂತೇಶ ಜಕಾತಿ ಹಾಗೂ ಎಲ್ಲ ನಿರ್ದೇಶಕರ ಸಹಕಾರ ಕಾರಣವಾಗಿದೆ ಎಂದರು.
ಎಚ್.ಎಸ್. ಗಂಗರಡ್ಡಿ, ಎಂ.ಡಿ. ಜಕಾತಿ, ಎಸ್.ಎಸ್. ಬಾಳಿ, ಸಿ.ಸಿ. ಹಾದಿಮನಿ, ಯು.ವಿ.ಇಟ್ನಾಳ, ಎಂ.ಜಿ. ತಾಂವಶಿ, ಬಿ.ಎಸ್. ತಡಸಲೂರ, ಎಸ್.ಬಿ. ಬೆಲ್ಲದ, ಎಸ್.ಬಿ. ಪಟ್ಟಣಶೆಟ್ಟಿ, ಎನ್.ಬಿ. ಚೌವಡಪ್ಪನವರ, ಎಸ್.ಎ. ದಂಡೆನ್ನವರ, ಎ್.ಎಚ್. ಕಾಮೋಶಿ, ಎಸ್.ಎಸ್.ಯರಗಣವಿ, ಆರ್.ಆರ್ ವಾಲಿ, ಎಸ್.ವಿ. ಕಳ್ಳಿಗುದ್ದಿ, ರಾಜೇಂದ್ರ ವಾಲಿ, ಸದಾನಂದ ಹಣಬರ, ಪೈಗಂಬರ ನದ್ಾ ಇತರರು ಇದ್ದರು.