ಮುರಗೋಡ: ರೈತ ಸದಸ್ಯರ ಸಹಕಾರದಿಂದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಉತ್ತಮ ಕಾರ್ಯ ವೈಖರಿಯಿಂದ ಕಡಿಮೆ ಅವಧಿಯಲ್ಲಿ ಮುರಗೋಡ ಕಲ್ಪತರು ಪಿಕೆಪಿಎಸ್ 18 ಲಕ್ಷ ರೂ.ಗೂ ಅಧಿಕ ಲಾಭ ಗಳಿಸಿದೆ ಎಂದು ಸಂಘದ ಸಂಸ್ಥಾಪಕ ಬಿ.ಎಂ.ಗೌಡತಿ ಹೇಳಿದರು.
ಸ್ಥಳೀಯ ಕಲ್ಪತರು ಪಿಕೆಪಿಎಸ್ 10ನೇ ವಾರ್ಷಿಕ ಸಭೆಯನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ಸಾಲ ಪಡೆದ ಎಲ್ಲ ಸದಸ್ಯರು ಸಕಾಲಕ್ಕೆ ಮರುಪಾವತಿ ಮಾಡಬೇಕು. ಸರ್ಕಾರದಿಂದ ಬರುವ ಸವಲತ್ತು ಬಳಸಿಕೊಂಡು ರೈತರು ಆರ್ಥಿಕವಾಗಿ ಬೆಳೆಯಬೇಕು ಎಂದರು.
ಜಿಲ್ಲಾ ಯೂನಿಯನ್ ನಿರ್ದೇಶಕ ಮಲ್ಲನಗೌಡ ಗೌಡತಿ ಮಾತನಾಡಿ, ಕಲ್ಪತರು ಪಿಕೆಪಿಎಸ್ ಈ ಭಾಗದ ರೈತರ ಅನುಕೂಲಕ್ಕಾಗಿ ಮುಂಗಾರು ಮತ್ತು ಹಿಂಗಾರು ಬೀಜ ವಿತರಣೆ, ಹೆಸರು, ಕಡಲೆ ಖರೀದಿ ಕೇಂದ್ರ ಪ್ರಾರಂಭ ಮಾಡಿದೆ. ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಅಧ್ಯಕ್ಷ ಫಕೀರಪ್ಪ ಕೊಗನವರ, ಉಪಾಧ್ಯಕ್ಷ ಜಗದೀಶ ಕಾರಜೋಳ, ಆಡಳಿತ ಮಂಡಳಿಯ ನೀಲಕ್ಕ ಗೌಡತಿ, ಶಿಲ್ಪ ಕಾಮಗಾರ, ಮಹಾದೇವಿ ಕೊಪ್ಪದ, ಶಂಕರಗೌಡ ಗೌಡತಿ, ಸುಭಾಷ ಅಗರವಾಲ, ಸಿದ್ದಪ್ಪ ಬಿಜ್ಜೋರ, ಬಸವರಾಜ ಬಿರಾದರಗೌಡರ, ತುಕಾರಾಮ ಲಮಾಣಿ, ಬಸನಗೌಡ ಪಾಟೀಲ, ರಾಘವೇಂದ್ರ ರುದ್ರಪ್ಪನವರ, ಮಹಾಂತೇಶ ಕಪರಿ, ಶಿವಪ್ಪ ಸಣಕಲ್ಲ, ಮಹಾಂತೇಶ ಭಜಂತ್ರಿ ಇತರರು ಇದ್ದರು.