ಜಿಲ್ಲೆ

ಪ್ರಗತಿಪಥದಲ್ಲಿ ಗೌರಿ ಗಣೇಶ ಮಹಿಳಾ ಸೊಸೈಟಿ

ಬೋರಗಾಂವ: ಸದಸ್ಯರ ವಿಶ್ವಾಸ, ನಿರ್ದೇಶಕರ ಮಂಡಳಿ ಮತ್ತು ಸಿಬ್ಬಂದಿ ಪ್ರಯತ್ನದಿಂದ ನಮ್ಮ ಸಂಸ್ಥೆ ಪ್ರಗತಿಪಥದಲ್ಲಿ ಮುನ್ನಡೆಯುತ್ತ್ತಿದ್ದು, ಸಂಸ್ಥೆಯ ಆರ್ಥಿಕ ಪ್ರಗತಿಗೆ ಠೇವಣಿದಾರರು ಮತ್ತು ಸಾಲ ಪಾವತಿದಾರರೇ ಕಾರಣ ಎಂದು ಬೋರಗಾಂವ ಶ್ರೀ ಗೌರಿ ಗಣೇಶ ಮಹಿಳಾ ಕೋ ಆಪ್​ ಕ್ರೆಡಿಟ್​ ಸೊಸೈಟಿ ಅಧ್ಯೆ ಅಶ್ವಿನಿ ಮಗದುಮ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂಸ್ಥೆಯ 7ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಮಹಿಳೆಯರ ಸರ್ವತೋಮುಖ ಅಭಿವದ್ಧಿಗೆ ಮಹಿಳೆಯರೇ ಸ್ಥಾಪಿಸಿರುವ ಸಂಸ್ಥೆ 760 ಸದಸ್ಯೆಯರು, 5.62 ಲ ರೂ. ಷೇರು ಬಂಡವಾಳ, 8.71 ಕೋಟಿ ರೂ. ಠೇವಣಿ ಹೊಂದಿದ್ದು, 4.50 ಕೋಟಿ ರೂ. ಸಾಲ ವಿತರಿಸಿದೆ. 6.89 ಲ ರೂ. ನಿವ್ವಳ ಲಾಭ ಗಳಿಸಿದೆ ಎಂದರು.

ನಿರ್ದೇಶಕಿ ಶೋಭಾ ಹವಲೆ ಮಾತನಾಡಿ, ಮಹಿಳೆಯರು ಆರ್ಥಿಕ ಸಬಲೀಕರಣದ ಮೂಲಕ ಉತ್ತಮ ಕುಟುಂಬ ನಿರ್ಮಿಸಲು ಗೌರಿ ಗಣೇಶ ಸಂ ಶ್ರಮಿಸುತ್ತಿದೆ ಎಂದರು. ಪಪಂ ಸದಸ್ಯ ಅಭಯಕುಮಾರ ಮಗದುಮ, ಉಪಾಧ್ಯೆ ಸುಜಾತಾ ಪಾಟೀಲ, ನಿರ್ದೇಶಕಿ ಶೋಭಾ ಹವಲೆ, ಪ್ರೀತಿ ಪಾಟೀಲ, ಆಶಾರಾಣಿ ಪಾಟೀಲ, ವಿನಯಶ್ರೀ ಬಸಣ್ಣವರ, ಜಾಸ್ಮಿನ್​ ಮುಜಾವರ್​, ರೇವತಿ ಪಾಟೀಲ, ಮೀನಾ ರೊಡ್ಡ, ಉಷಾ ಪಾಟೀಲ, ಲಕ್ಷಿ$್ಮ ಕಾಂಬಳೆ, ಕಲಾವತಿ ಖೋತ, ವಿದ್ಯಾ ಪಾಟೀಲ, ಸುಷ್ಮಾ ಮಗದುಮ, ವಿದ್ಯಾ ಪಾಟೀಲ, ಸರೋಜನಿ ಪಾಟೀಲ, ಶಿರಗಾಂವವಾಡಿ, ಅಕ್ಕೋಳ, ಗಳತಗಾ ಶಾಖೆಯ ನಿರ್ದೇಶಕರು ಮತ್ತು ಸದಸ್ಯರಿದ್ದರು.