ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ (ಎಚ್‌ಕೆಇ) ಕಳೆದ ಆರು ವರ್ಷದಲ್ಲಿ ಹಲವು ಮೈಲುಗಲ್ಲು ಸ್ಥಾಪಿಸಿದ್ದು, ಅದನ್ನು ಮುಂದುವರಿಸಿ ಪ್ರಗತಿ ಪಥದಲ್ಲಿ ಕೊಂಡ್ಯೊಯ್ಯಲಾಗುವುದು ಎಂದು ಸಂಸ್ಥೆ ಆಡಳಿತ ಮಂಡಳಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಸಂತೋಷ ಬಿಲಗುಂದಿ ಭರವಸೆ ನೀಡಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಸೋಮವಾರ ಏರ್ಪಡಿಸಿದ್ದ ಪ್ರಣಾಳಿಕೆ ಬಿಡುಗಡೆ ಸಭೆಯಲ್ಲಿ ಮಾತನಾಡಿ, ನಮ್ಮ ಪೆನಾಲ್‌ನಲ್ಲಿ ಹಿರಿಯರು, ಯುವಕರ ತಂಡವಿದ್ದು, ಸಂಸ್ಥೆಯ ಉನ್ನತಿಗೆ ಕೆಲಸ ಮಾಡುತ್ತೇವೆ. ಆಶೀರ್ವದಿಸಬೇಕು ಎಂದು ವಿನಂತಿಸಿದರು.
ಮಾಜಿ ಅಧ್ಯಕ್ಷ ಭೀಮಾಶಂಕರ ಬಿಲಗುಂದಿ ಮಾತನಾಡಿ, ಆರು ವರ್ಷದಲ್ಲಿ ಆಡಳಿತದಲ್ಲಿ ಪಾರದರ್ಶಕತೆ ತಂದಿz್ದÉÃನೆ. ಕಟ್ಟಡಗಳನ್ನು ನಿರ್ಮಿಸಿ, ಸೌಲಭ್ಯ ಕಲ್ಪಿಸಲಾಗಿದೆ. ಕೋವಿಡ್‌ನಲ್ಲೂ ವೇತನ ನೀಡಿz್ದÉÃನೆ. ಸದಸ್ಯತ್ವ ವಿಷಯ ಕೋರ್ಟ್ನಲ್ಲಿದೆ. ಪೇಪರ್ ನೋಟಿಫಿಕೇಷನ್ ಆಗಿನ ಅಧ್ಯಕ್ಷರೆ ನೀಡಿ, ಕೋರ್ಟ್ ಆದೇಶವಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಕೋರ್ಟ್ ವಿಷಯ ಬಗೆಹರಿಸಲು ನಿರಂತರವಾಗಿ ಶ್ರಮಿಸಿz್ದÉÃನೆ ಎಂದು ನಮೋಶಿ ವಿರುದ್ಧ ಹರಿಹಾಯ್ದರು.
ಶಾಸಕ ಅಲ್ಲಮಪ್ರಭು ಪಾಟೀಲ್, ಬಸವರಾಜ ನಂದ್ಯಾಳ, ವಿಶ್ವನಾಥ ಹಾಲಪ್ಪ, ಅಪ್ಪಾರಾವ ಪಾಟೀಲ್ ಅತನೂರ, ಸುಶೀಲ ಕೊಠಾರಿ, ಸೂರ್ಯಕಾಂತ ರಘೋಜಿ, ಮಹ್ಮದ್ ಪಾಷಾಮಿಯ್ಯಾ, ಪೆನಾಲ್‌ನಿಂದ ಸ್ಪರ್ಧಿಸಿರುವ ಆರ್.ಎಸ್.ಹೊಸಗೌಡ, ಡಾ.ಜಗನ್ನಾಥ ಬಿಜಾಪುರ, ಡಾ.ಮಹಾದೇವಪ್ಪ ರಾಂಪುರೆ, ಡಾ.ಅನೀಲಕುಮಾರ ಪಟ್ಟಣ, ಆನಂದ ದಂಡೋತಿ, ದೀಪಕ ಗಿಲ್ಡಾ, ಸಂಜೀವ ಮಹಾಜನ್, ಸೋಮನಾಥ ನಿಗುಡಗಿ, ಡಾ.ನಾಗೇಂದ್ರ ಮಂಠಾಳೆ, ಸಾಯಿನಾಥ ಪಾಟೀಲ್, ಡಾ.ಕಿರಣ ದೇಶಮುಖ, ಡಾ.ಶರಣಬಸಪ್ಪ ಗುಬ್ಬಿ, ಎನ್.ಗಿರಿಜಾ ಶಂಕರ (ರಾಯಚೂರು), ಅರವಿಂದ ಪಾಟೀಲ್ (ಬೀದರ್) ಇತರರಿದ್ದರು.