ಮುರಗೋಡದಲ್ಲಿ ಹಮ್ಮಿಕೊಂಡಿದ್ದ ಪಿಕೆಪಿಎಸ್ ವಾರ್ಷಿಕ ಸಭೆಯನ್ನು ಅಧ್ಯಕ್ಷೆ ಗೀತಾ ದೇಸಾಯಿ ಉದ್ಘಾಟಿಸಿದರು. ನೀಲಕಂಠ ಸ್ವಾಮೀಜಿ, ದಿವಾಕರ ದೀಕ್ಷಿತ ಸ್ವಾಮೀಜಿ ಇತರರು ಇದ್ದರು. 
ಜಿಲ್ಲೆ

ಪ್ರಗತಿ ಪಥದತ್ತ ಮುರಗೋಡ ಪಿಕೆಪಿಎಸ್

ಮುರಗೋಡ: ರೈತ ಸದಸ್ಯರ ಸಹಕಾರದಿಂದ ಮುರಗೋಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ 41 ಲಕ್ಷ ರೂ. ಲಾಭ ಗಳಿಸಿ ಪ್ರಗತಿಯತ್ತ ಮುನ್ನಡೆಯುತ್ತಿದೆ ಎಂದು ಪಿಕೆಪಿಎಸ್ ಅಧ್ಯಕ್ಷೆ ಗೀತಾ ದೇಸಾಯಿ ಹೇಳಿದರು.

ಸ್ಥಳೀಯ ಪಿಕೆಪಿಎಸ್ ಆವರಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಪಿಕೆಪಿಎಸ್ ಸೊಸೈಟಿಯ 75ನೇ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ಲಾಭಾಂಶದಲ್ಲಿ ಶೇ.10 ಡಿವಿಡೆಂಡ್ ನೀಡಲಾಗುತ್ತದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಮಹಾಂತ ದುರದುಂಡೇಶ್ವರ ಮಠದ ಪೀಠಾಧಿಪತಿ ನೀಲಕಂಠ ಸ್ವಾಮೀಜಿ, ಕೆಂಗೇರಿ ಶಿವಚಿದಂಬರೇಶ್ಚರ ದೇವಸ್ಥಾನದ ಪೀಠಾಧಿಕಾರಿ ದಿವಾಕರ ದೀಕ್ಷಿತ ಸ್ವಾಮೀಜಿ ಆಶೀರ್ವಚನ ನೀಡಿದರು.
ಸೋಮೇಶ್ವರ ಸಕ್ಕರೆ ಕಾರ್ಖಾನೆ ನಿರ್ದೇಶಕ ಪ್ರಕಾಶ ಮೂಗಬಸವ ಅವರನ್ನು ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಸಾಧಕರನ್ನು ಸನ್ಮಾನಿಸಲಾಯಿತು.

ಉಪಾಧ್ಯಕ್ಷ ಸಂತೋಷ ಶೆಟ್ಟರ, ಪರಮಾನಂದ ಹಿರೇಮಠ, ಡಾ. ಅಮಿತ ದೇಸಾಯಿ, ಸಚೀನ ದೇಸಾಯಿ, ನಿರ್ದೇಶಕರಾದ ಸುನೀಲ ತಿವಾರಿ, ಯಶವಂತಗೌಡ ಪಾಟೀಲ, ಸುರೇಶ ಮ್ಯಾಕಲ, ಚಂದ್ರಪ್ಪ ಕಾರಜೋಳ, ಶಿವಾನಂದ ಕಟ್ಟಿಮನಿ, ಈರಪ್ಪ ಕುರಬೇಟ, ಯಲ್ಲಪ್ಪ ಬಂಡಗಿ, ಲಕ್ಷ್ಮಣ ಕೇಳಗೇರಿ, ಸೋಮಶೇಖರ ಕುರಬೇಟ, ಚಿದಂಬರ ತೊರಗಲ್ಲ, ಮಹಾಂತೇಶ ಮ, ಕುಮಾರ ಪೂಜೇರಿ, ಈರಣ್ಣ ಸಿದ್ದನಗೌಡರ, ಚಂದ್ರು ಕಾಳಣ್ಣವರ, ರಮೇಶ ಬೆಳಗಾವಿ, ಮಹಾಂತೇಶ ಮಡಿವಾಳರ ಇದ್ದರು.