ಜಿಲ್ಲೆ

ಪ್ರಗತಿ ಕಾರ್ಯಕ್ಕೆ ಕೈಜೋಡಿಸಲಿ

ಅಥಣಿ: ಮೂಲಸೌಕರ್ಯ, ಆರೋಗ್ಯ ಕ್ಷೇತ್ರ, ಪರಿಸರ ಸೇರಿ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಮುಂದಾಗಿದ್ದೇವೆ ಎಂದು ಯುವ ಮುಖಂಡ ಚಿದಾನಂದ ಸವದಿ ಹೇಳಿದರು.

ಪಟ್ಟಣದಲ್ಲಿ ಮನರೇಗಾ ಯೋಜನೆಯಡಿ ವಿವಿಧ ಶಾಲೆಗಳಲ್ಲಿ ಹೈಟೆಕ್ ಶೌಚಗೃಹ ಹಾಗೂ ಗರಡಿಮನೆ ನಿರ್ಮಾಣ ಕಾಮಗಾರಿಗಳಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ವಿವಿಧ ಕಾಮಗಾರಿಗೆ ಭೂಮಿಪೂಜೆ: ಪಟ್ಟಣದ ವಿಕ್ರಮಪುರದಲ್ಲಿರುವ ಕನ್ನಡ ಸರ್ಕಾರಿ ಪ್ರಾಥಮಿಕ ಶಾಲೆಗೆ ೧೨.೦೧ ಲಕ್ಷ ರೂ., ಗವಿಸಿದ್ದಮಡ್ಡಿಯಲ್ಲಿರುವ ಉರ್ದು ಪ್ರಾಥಮಿಕ ಶಾಲೆಗೆ ೧೦.೧೧ ಲಕ್ಷ ರೂ., ಕೃಷ್ಣಾ ಬಡಾವಣೆಯಲ್ಲಿರುವ ಕನ್ನಡ ಹಾಗೂ ಉರ್ದು ಕಿರಿಯ ಪ್ರಾಥಮಿಕ ಶಾಲೆಗೆ ೭.೦೯ ಲಕ್ಷ ರೂ., ಅಥಣಿ ಪಟ್ಟಣದ ಶಾಲೆ ನಂ.೧ರಲ್ಲಿ ೧೦.೨೧ ಲಕ್ಷ ರೂ., ಮೋಟಗಿತೋಟದ ಶಾಲೆಯಲ್ಲಿ ಹೈಟೆಕ್ ಶೌಚಗೃಹ ನಿರ್ಮಾಣಕ್ಕೆ ೧೦.೫೩ ಲಕ್ಷ ರೂ., ಶ್ರೀ ಸಿದ್ಧೇಶ್ವರ ದೇವಸ್ಥಾನದ ಹತ್ತಿರದಲ್ಲಿ ಗರಡಿಮನೆ ನಿರ್ಮಾಣಕ್ಕೆ ೧೦ ಲಕ್ಷ ರೂ. ಮಂಜೂರಾಗಿದೆ. ಈ ಎಲ್ಲ ಕಾಮಗಾರಿಗಳಿಗೆ ಪುರಸಭೆ ಸದಸ್ಯರೊಂದಿಗೆ ಭೂಮಿಪೂಜೆ ನೆರವೇರಿಸಲಾಗಿದೆ ಎಂದು ತಿಳಿಸಿದರು.

ಬಿಇಒ ಎಂ.ಆರ್.ಮುಂಜೆ, ಕಾರ್ಯನಿರ್ವಾಹಕ ಅಭಿಯಂತ ವಿ.ಎ.ವಾಲಿ, ಗೌಡಪ್ಪ ಖೋತ, ಜಾಫರಷರಿಫ್ ಚಬನೂರ,ನಿಂಗಯ್ಯ ಹಿರೇಮಠ, ರಾಜು ಹಳ್ಳದಮಳ, ಶ್ರೀಶೈಲ ಹಳ್ಳದಮಳ, ವೀರೇಶ ಶೇಡಬಾಳ, ಪುರಸಭೆ ಸದಸ್ಯರಾದ ಕಲ್ಮೇಶ ಮಡ್ಡಿ, ಮಲ್ಲಿಕಾರ್ಜುನ ಬುಟಾಳೆ, ಸಂತೋಷ ಸಾವಡಕರ, ಬಿರಪ್ಪ ಯಂಕಚ್ಚಿ, ಬಸವರಾಜ ಹಳ್ಳದಮಳ, ಸೈಯದಅಮೀನ್ ಗದ್ಯಾಳ, ಮಲ್ಲೇಶ ಹುದ್ದಾರ, ರಾಜು ಗುಡೋಡಗಿ, ರಿಯಾಜ್ ಸನದಿ ಇತರರು ಇದ್ದರು.