ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ
ರೈನ್‌ಟ್ರಸ್ಟ್ ವಿಶ್ವ ಪರಿಸರದ ದಿನದ ಅಂಗವಾಗಿ ಹನುಮಂತ ನಗರದ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯ ಆವರಣದಲ್ಲಿ ಸಸಿ ನೆಡಲಾಯಿತು. ಟ್ರಸ್ಟ್ ಅಧ್ಯಕ್ಷ ಕಸವನಹಳ್ಳಿ ರಮೇಶ್ ಮಾತಾನಾಡಿ,ಪ್ರಕೃತಿ ವಿಕೋಪಗಳಿಗೆ ಕಾಡಿನ ನಾಶ ಮೂಲ ಕಾರಣವಾಗಿದೆ ಎಂದರು. ವಿಶ್ರಾಂತ ಪ್ರಾಧ್ಯಾಪಕ ಡಾ.ನಟರಾಜ್, ಜಾಗತಿಕ ತಾಪಮಾನ ತಗ್ಗಿಸ ಬೇಕಾದರೆ ಹೆಚ್ಚಿನ ಪ್ರಮಾಣದಲ್ಲಿ ಮರಗಿಡಗಳನ್ನು ಬೆಳೆಸಬೇಕಿದೆ ಎಂ ದರು.
ಮಠದಹಟ್ಟಿ ಗ್ರಾಪಂ ಅಧ್ಯಕ್ಷ ಗಣೇಶ್ ಮಾತನಾಡಿದರು. ಪಿಡಿಒ ಸಂತೋಷ್,ಪರಿಸರವಾದಿ ಎಚ್‌ಕೆಎಸ್ ಸ್ವಾಮಿ, ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟ ದಾವಣಗೆರೆ ಜಿಲ್ಲಧ್ಯಕ್ಷ ಬಸವರಾಜ್,ಪರಿಸರವಾದಿ ಎಚ್‌ಕೆಎಸ್ ಸ್ವಾಮಿ,ದೇವಾಲಯ ಸಮಿತಿ ಮುಖಂಡ ಹನು ಮಂತಪ್ಪ,ಮಾರಗಟ್ಟ ತಿಪ್ಪೇಸ್ವಾಮಿ,ಲಲಿತಾಕೃಷ್ಣಮೂರ್ತಿ,ಶ್ರೀದೇವಿ,ಎಂ.ಬಿ.ರಾಜಪ್ಪ,ಡಿ.ವಿ.ಪ್ರಕಾಶ್,ಸುಶೀಲಮ್ಮ ಮತ್ತಿತರ ಪ್ರಮುಖರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು,ಸದಸ್ಯರು,ಸ್ಥಳೀಯ ನಿವಾಸಿಗಳು,ಟ್ರಸ್ಟ್ ಕಾರ‌್ಯಕರ್ತರು ಇದ್ದರು. ಟ್ರಸ್ಟ್ ಕಾರ‌್ಯದರ್ಶಿ ಎಂ.ಮಂಜುನಾಥ್ ಕಳ್ಳಿಹಟ್ಟಿ ನಿರೂಪಿಸಿದರು.
--