ಗುಂಡ್ಲುಪೇಟೆ: ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಮೊಳ್ಳಯ್ಯನಹುಂಡಿ ಪ್ರಕಾಶ್, ಉಪಾಧ್ಯಕ್ಷರಾಗಿ ಶಿಂಡನಪುರ ಚಾಮಪ್ಪ ಅವಿರೋಧ ಆಯ್ಕೆಯಾದರು.
ಆಂತರಿಕ ಒಪ್ಪಂದದಂತೆ ಅಧ್ಯಕ್ಷ ನಂಜುಂಡಸ್ವಾಮಿ ಹಾಗೂ ಉಪಾಧ್ಯಕ್ಷ ಗುರುಮಲ್ಲಪ್ಪ ರಾಜೀನಾಮೆ ಸಲ್ಲಿಸಿದ್ದರಿಂದ ಶನಿವಾರ ಚುನಾವಣಾ ಪ್ರಕ್ರಿಯೆ ನಡೆಯಿತು. ಪ್ರಕಾಶ್ ಹಾಗೂ ಚಾಮಪ್ಪ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಸಹಕಾರ ಇಲಾಖೆಯ ಸುರೇಶ್ ಅವಿರೋಧ ಆಯ್ಕೆ ಘೋಷಿಸಿದರು.
ಮುಖಂಡರಾದ ನಾಗಮಲ್ಲಪ್ಪ, ಎಸ್.ಟಿ.ಮಂಜುನಾಥ್, ಎಸ್.ಟಿ.ಮಹದೇವಸ್ವಾಮಿ, ಚಂದ್ರು ಇತರರು ಇದ್ದರು.