ಜಿಲ್ಲೆ

ಪ್ರಕಾಶ, ಗಣೇಶಗೆ ಮುಖ್ಯಮಂತ್ರಿ ಪದಕ

Dharwada - Vikram Nadiger

ಧಾರವಾಡ: ಜಿಲ್ಲಾ ಗೃಹರಕ್ಷಕ ದಳದಲ್ಲಿ ಸ್ಟಾಫ್ ಆಫೀಸರ್ ಆಗಿರುವ ಡಾ. ಪ್ರಕಾಶ ಪಿ. ಪವಾಡಶೆಟ್ಟಿ ಹಾಗೂ ಹುಬ್ಬಳ್ಳಿ ಘಟಕದ ಗಣೇಶ ಬಿ. ಬಾಲೇಸೂರ ಗೃಹ ರಕ್ಷಕದಳ ಇಲಾಖೆಯಲ್ಲಿ ಸಲ್ಲಿಸಿದ ಉತ್ತಮ ಸೇವೆ ಪರಿಗಣಿಸಿ 2022ನೇ ಸಾಲಿಗೆ ಮುಖ್ಯ ಮಂತ್ರಿಗಳ ಚಿನ್ನದ ಪದಕ ನೀಡಿ ಗೌರವಿಸಲಾಗುತ್ತಿದೆ.
ಡಾ. ಪ್ರಕಾಶ ಪವಾಡಶೆಟ್ಟಿ ಹಾಗೂ ಗಣೇಶ ಬಾಲೇಸೂರ ಮುಖ್ಯಮಂತ್ರಿ ಚಿನ್ನದ ಪದಕ ಪಡೆದು ಧಾರವಾಡ ಜಿಲ್ಲೆಗೆ ಮತ್ತು ಗೃಹ ರಕ್ಷಕದಳ ಇಲಾಖೆಗೆ ಕೀರ್ತಿ ತಂದಿದ್ದಾರೆ. ಸಾಧಕರ ಸಾಧನೆಗೆ ಜಿಲ್ಲಾ ಗೃಹ ರಕ್ಷಕದಳದ ಸಮಾದೇಷ್ಟ ಸುನೀಲ ಸರೂರ ಮತ್ತು ಕಚೇರಿ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದೆ.