ಬೆಳಗಾವಿ: ಜರ್ಮನಿಯ ಬರ್ಲಿನ್‌ನಲ್ಲಿ ಮಾರ್ಚ್ 30ರಿಂದ ಏ.3ರ ವರೆಗೆ ಜರುಗಲಿರುವ ಪ್ಯಾರಾ ಸ್ವಿಮ್ಮಿಂಗ್ ವರ್ಲ್ಡ್ ಸಿರೀಸ್-2022ಗೆ ಲಿಂಗರಾಜ ಕಾಲೇಜಿನ ವಿದ್ಯಾರ್ಥಿಗಳಾದ ಸಿಮ್ರಾನ್ ಗೌಂಡ್ಲಕರ್, ಶಾಹಿಲ್ ಜಾಧವ, ಶ್ರೀಧರ ಮಾಳಗಿ ಆಯ್ಕೆಯಾಗಿದ್ದಾರೆ. ಭಾರತ ಸರ್ಕಾರದ ಖೇಲೋ ಇಂಡಿಯಾ ಮೂಲಕ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಕ್ರೀಡಾಪಟುಗಳಿಗೆ ಉಮೇಶ ಕಲಘಟಗಿ, ಪ್ರಸಾದ ತೆಂಡೂಲ್ಕರ್, ಅಕ್ಷಯ ಶೇರೆಜನ್, ಅಜಿಂಕೆ ಮೆಡಕೆ, ನಿತೀಶ್ ಕುಡಚ್ಕರ್ ಮತ್ತು ಗೋವರ್ಧನ ಕಾಕತ್ಕರ್ ತರಬೇತಿ ನೀಡಿದ್ದಾರೆ. ವಿದ್ಯಾರ್ಥಿಗಳನ್ನು ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅಭಿನಂದಿಸಿದರು. ಜಯಾನಂದ ಮುನವಳ್ಳಿ, ಎಂ.ಸಿ.ಕೊಳ್ಳಿ ಇತರರಿದ್ದರು.