ಬೇಲೂರು : ಪ್ರತಿಯೊಬ್ಬರೂ ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯವಾಗಿ ಇರಬೇಕಾದರೆ ಪೌಷ್ಟಿಕಾಂಶದ ಆಹಾರ ಪದ್ಧತಿ ಅತಿ ಮುಖ್ಯವಾಗಿದೆ ಎಂದು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಪ್ರಕಾಶ್ ನಾಯಕ್ ಹೇಳಿದರು.
ಮಹಿಳಾ ಮತ್ತು ಕಲ್ಯಾಣ ಅಭಿವೃದ್ಧಿ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಲಾಖೆಯಿಂದ ಬೇಲೂರು ಪಟ್ಟಣದ ಚನ್ನಕೇಶವ ದಾಸೋಹ ಭವನದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಪೋಷಣ್ ಅಭಿಯಾನ ಹಾಗೂ ಮಾತೃ ವಂದನಾ ಸಪ್ತಾಹ, ಉಚಿತ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ಕಾರದ ಸಮೀಕ್ಷೆ ಪ್ರಕಾರ ಹಲವಾರು ದೇಶಗಳು ಹಸಿವಿನಿಂದ ಬಳಲುತ್ತಿವೆ. ಹಸಿವಿನಿಂದಿರುವ ಪ್ರಪಂಚಕ್ಕೆ ಅನ್ನ ನೀಡುವ ನಮ್ಮ ಭಾರತ ದೇಶವು, ಇಂದು ವಿಜ್ಞಾನ ಹಾಗೂ ತಾಂತ್ರಿಕತೆಯಲ್ಲಿ ಮುಂದಿದ್ದರೂ ಪೌಷ್ಟಿಕಾಂದ ಕೊರತೆ ಹಾಗೂ ಹಸಿವಿನಿಂದ ವಿಶ್ವದಲ್ಲೇ 94 ನೇ ಸ್ಥಾನದಲ್ಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಪ್ರತಿ ಅಂಗನವಾಡಿ ಕೇಂದ್ರದ ಮೂಲಕ ಗ್ರಾಮೀಣ ಭಾಗದ ಬಾಣಂತಿ ಮತ್ತು ಮಕ್ಕಳಿಗೆ ಆಶಾ ಕಾರ್ಯಕರ್ತರ ನೆರವಿನೊಂದಿಗೆ ಯಾರಿಗೂ ಹಸಿವು, ಪೋಷಕಾಂಶದ ಕೊರತೆ ಉಂಟಾಗದಂತೆ ಎಚ್ಚರಿಕೆ ವಹಿಸುತ್ತಿದೆ. ಅಲ್ಲದೆ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಎಷ್ಟು ಕಡಿಮೆ ಇದೆ. ಈ ಬಗ್ಗೆ ನಮ್ಮ ಇಲಾಖೆಯಿಂದ ಪ್ರತಿಯೊಬ್ಬರಿಗೂ ಮಾಹಿತಿ ನೀಡುವ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದರು.
ತಾಲೂಕು ಶಿಶು ಅಭಿವೃದ್ಧಿ ಇಲಾಖೆ ಯೋಜನಾಧಿಕಾರಿ ದಿಲೀಪ್ ಮಾತನಾಡಿ, ದೇಶದಲ್ಲಿ ಶಿಶು ಬಾಣಂತಿಯರ ಮರಣ ಪ್ರಮಾಣ ಇಳಿಕೆ ಮಾಡುವ ಉದ್ದೇಶದಿಂದ ಹಾಗೂ ಯಾರೂ ಅಪೌಷ್ಟಿಕತೆಯಿಂದ ಬಳಲಬಾರದು ಎಂದು ಮಾತೃ ವಂದನಾ ಕಾರ್ಯಕ್ರಮದ ಮೂಲಕ ರಾಜ್ಯದ 66 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಏಕಕಾಲಕ್ಕೆ ಚಾಲನೆ ನೀಡಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಮಹಿಳೆಯರಲ್ಲಿನ ರಕ್ತ ಹೀನತೆ ಹೊಗಲಾಡಿಸುವಲ್ಲಿ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರತಿ ಮನೆಗೂ ಭೇಟಿನೀಡಿ ಗರ್ಭಿಣಿ ಬಾಣಂತಿಯರ ಪೋ?ಣೆ ಬಗ್ಗೆ ಹೆಚ್ಚು ಒತ್ತು ಕೊಡುವಂತೆ ಕಾರ್ಯಕರ್ತೆಯರಿಗೆ ಕರೆ ನೀಡಿದ್ದು, ಸಾರ್ವಜನಿಕರು ಇದರ ಸದೂಪಯೋಗ ಪಡೆದುಕೊಳ್ಳಬೇಕು ಎಂದರು.
ಇದೇ ಸಂದರ್ಭ ಪೋ?ಕಾಂಶ ನೀಡುವ ಆಹಾರ ಪದ್ದತಿ ಬಗ್ಹೆ ಹಲವು ಬಗೆಯ ಹಸಿ ತರಕಾರಿ ಹಾಗೂ ವಿವಿಧ ಬಗೆಯ ತಿಂಡಿಗಳನ್ನು ಪ್ರದರ್ಶನಕ್ಕಿಟ್ಟು ನೆರೆದಿದ್ದವರಿಗೆ ಮಾಹಿತಿ ನೀಡಲಾಯಿತು.
ಕಿರಿಯ ಸಿವಿಲ್ ನ್ಯಾಯಾಧೀಶ ಪ್ರಸನ್ನ ಕುಮಾರ್, ತಹಶೀಲ್ದಾರ್ ರಮೇಶ್, ತಾಪಂ ಇಓ ಸುನೀತ, ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್, ಶಿಶು ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಉಸ್ಮಾನ್, ವಕೀಲರ ಸಂಘದ ಅಧ್ಯಕ್ಷ ಮಹೇಶ್, ಉಪಾಧ್ಯಕ್ಷ ರವಿ, ಕಾರ್ಯದರ್ಶಿ ಪ್ರಕಾಶ್, ಸರ್ಕಾರಿ ಅಭಿಯೋಜಕಿ ಶಶಿಕಲಾ, ವಕೀಲರಾದ ಶ್ರೀನಿಧಿ, ಪುಟ್ಟಸ್ವಾಮಿಗೌಡ, ತೇಜಸ್ವಿನಿ ಇದ್ದರು.