ಕಂಪ್ಲಿ: ಮಹಿಳೆಯರು ಪೌಷ್ಟಿಕ ಆಹಾರ ಸೇವಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವ ಅಗತ್ಯ ಇದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ತಾಲೂಕು ಅಧ್ಯಕ್ಷೆ ರಬಿಯಾ ಟಿ.ನಿಸಾರ್ ಅಹ್ಮದ್ ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 75ನೇ ಹುಟ್ಟುಹಬ್ಬದ ನಿಮಿತ್ತ ನಂ.3 ಸಣಾಪುರ ಗ್ರಾಮದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಹಾಗೂ ಮಂಡಲದಿಂದ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರದಲ್ಲಿ ಭಾನುವಾರ ಮಾತನಾಡಿದರು. ಡಾ.ಅರುಣಾ ಕಾಮಿನೇನಿ, ಡಾ.ಪ್ರಣೀತಾ ಅಜಯ್, ಡಾ.ಅನುಪಮಾ ಸಂಡೂರು, ಡಾ.ಕೆ.ಚಂದು, ಡಯಾಲಿಸೀಸ್ ಥೆರಾಪಿಸ್ಟ್ ವಿನೋದ್ ಕುಮಾರ್ ರೋಗಿಗಳ ಆರೋಗ್ಯ ತಪಾಸಣೆ ನಡೆಸಿದರು.
ಮಂಡಲ ಅಧ್ಯಕ್ಷ ಸಿ.ಡಿ.ಮಹಾದೇವ, ಪ್ರಧಾನ ಕಾರ್ಯದರ್ಶಿ ಟಿ.ವಿ.ಸುದರ್ಶನರೆಡ್ಡಿ, ಪ್ರಶಾಂತಕುಮಾರ್, ಪ್ರಮುಖರಾದ ಮಂಜುಳಾ, ಲಲಿತಾ, ವೈ.ಮುರಳಿಮೋಹನರೆಡ್ಡಿ, ವೈ.ರಮಣಯ್ಯ, ವೆಂಕಟರಾಮರಾಜು, ಕೃಷ್ಣಂರಾಜು, ಭಾಸ್ಕರರೆಡ್ಡಿ, ಕುರುಗೋಡು ಬಸವರಾಜ, ವೈ.ಮಹಾಂತೇಶ, ಒಂಟೆ ವಿನೋದಕುಮಾರ್, ವಿ.ಸತ್ಯನಾರಾಯಣ, ಪ್ರಭು ಇತರರಿದ್ದರು.