ಬೆಲಹೊಂಗಲ: ಸಕಲ ಜೀವರಾಶಿಗಳಿಗೂ ಆಹಾರವೇ ಜೀವ. ಸೇವಿಸಿದ ಆಹಾರವು ಬಲ, ಉತ್ಸಾಹ, ಕಾಂತಿ, ಬುದ್ಧಿ ನೀಡುತ್ತದೆ. ಹೀಗಾಗಿ ವೇದ&ಉಪನಿಷತ್ತುಗಳು ಅನ್ನವನ್ನು ಬ್ರಹ್ಮನ್ ಎಂದೇ ವರ್ಣಿಸಿವೆ ಎಂದು ಆಹಾರ ತ ಡಾ.ಶಿವಶಂಕರ ಪ್ರಸಾದ ದೇವಲಾಪುರ ಹೇಳಿದರು.
ಪಟ್ಟಣದ ಕೆಆರ್ಸಿಇಎಸ್ ಸಂಸ್ಥೆಯ ಎಚ್.ವಿ. ಕೌಜಲಗಿ ಕಾನೂನು ಮಹಾವಿದ್ಯಾಲಯ ನಯಾನಗರ ಗ್ರಾಮದ ಸುಖದೇವಾನಂದ ಪುಣ್ಯಾಶ್ರಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಾತನಾಡಿ, ಮಾನವನು ಆರೋಗ್ಯವಂತನಾಗಿ ಬಾಳಲು ದೇಹಕ್ಕೆ ಅವಶ್ಯಕವಾಗಿರುವ ಪೋಷಕಾಂಶಗಳಾದ ಪ್ರೋಟಿನ್, ಶರ್ಕರ, ಕೊಬ್ಬು, ಜೀವಸತ್ವ, ಖನಿಜ ಲವಣಗಳು ಮತ್ತು ನೀರು ಅವಶ್ಯವಾಗಿವೆ. ಊಟ ಬಲ್ಲವನಿಗೆ ರೋಗವಿಲ್ಲ. ಎಲ್ಲರೂ ಆಹಾರದ ಮಹತ್ವ ಅರಿಯಬೇಕೆಂದರು.
ಡಾ. ಎಸ್.ಎಸ್.ದೇವಲಾಪುರ ಅವರ ಸಾಮಾಜಿಕ, ಶೆಣಿಕ, ಆರೋಗ್ಯ ಮತ್ತು ಸಾಹಿತ್ಯ ಸೇವೆ ಪರಿಗಣಿಸಿ ಸತ್ಕರಿಸಲಾಯಿತು.
ದಿವ್ಯಾ ಕಟ್ಟಿ ಅಧ್ಯತೆ ವಹಿಸಿದ್ದರು. ಪ್ರಾಚಾರ್ಯ ಪ್ರಕಾಶ ಪಾಟೀಲ, ಉಪನ್ಯಾಸಕರಾದ ಡಿ.ಬಿ.ನರಗುಂದ, ಎಂ.ಎಸ್.ಪಟ್ಟಣಶೆಟ್ಟಿ, ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.