ಜಿಲ್ಲೆ

ಪೌರಾಯುಕ್ತ ಭಜಕ್ಕನವರ ವರ್ಗಾವಣೆ

ಕೊಪ್ಪಳ: ನಗರಸಭೆ ಪೌರಾಯುಕ್ತ ಎಚ್.ಎನ್.ಭಜಕ್ಕನವರ ವರ್ಗಾವಣೆ ಆಗಿದ್ದು, ಅವರ ಸ್ಥಾನಕ್ಕೆ ಗಣಪತಿ ಪಾಟೀಲ್ ನೇಮಿಸಿ ನಗರಾಭಿವೃದ್ಧಿ ಇಲಾಖೆ ಶುಕ್ರವಾರ ಆದೇಶಿಸಿದೆ.

ಮೂಲತಃ ಕಚೇರಿ ವ್ಯವಸ್ಥಾಪಕರಾಗಿದ್ದ ಭಜಕ್ಕನವರ್ ಪೌರಾಯುಕ್ತರಾಗಿ ಮುಂದುವರೆದಿದ್ದರು. ನಗರಸಭೆ ನವೀಕರಣ ಹಾಗೂ ಆಡಳಿತ ವಿಷಯದಲ್ಲಿ ಸದಸ್ಯರು ಹಾಗೂ ಅಧಿಕಾರಿಗಳ ನಡುವೆ ಹೊಂದಾಣಿಕೆ ಕೊರತೆ ಕಂಡುಬಂದಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಭಜಕ್ಕನವರ ವರ್ಗಾವಣೆಯಾಗಿದೆ. ಕಂಪ್ಲಿ ಪುರಸಭೆ ಕಚೇರಿ ವ್ಯವಸ್ಥಾಪಕ ಹುದ್ದೆಗೆ ನಿಯೋಜಿಸಲಾಗಿದೆ.

ಇನ್ನು ಭಾಗ್ಯನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಆಳಂದ ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಹುದ್ದೆಗೆ ವರ್ಗಾವಣೆಯಾಗಿದ್ದು, ಇವರ ಸ್ಥಾನಕ್ಕೆ ಆಳಂದ ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಸುರೇಶ ಬಬಲಾದ ವರ್ಗಾವಣೆಗೊಂಡಿದ್ದಾರೆ. ಈ ಮೊದಲು ಇವರಿಬ್ಬರು ಭಾಗ್ಯನಗರದಲ್ಲಿ ಕರ್ತವ್ಯ ನಿರ್ವಹಿಸಿದ್ದು, ಸದ್ಯ ಮೊದಲಿನ ಸ್ಥಾನಕ್ಕೆ ತೆರಳಿರುವುದು ವಿಶೇಷ. ಭಾಗ್ಯನಗರ ಕೊಪ್ಪಳ ಜಿಲ್ಲೆಯಲ್ಲಿದ್ದರೂ ಅಧಿಕಾರಿಗಳ ಯಡವಟ್ಟಿನಿಂದ ಬಾಗಲಕೋಟೆ ಜಿಲ್ಲೆ ಎಂದಾಗಿದೆ.

ಇನ್ನು ಕೊಪ್ಪಳ ನಗರಸಭೆ ಎಇಇ ಮಧುರ ಬಿ ಅವರನ್ನು ಕೊಪ್ಪಳದಲ್ಲಿಯೇ ಮುಂದುವರೆಸಲಾಗಿದೆ.