ಜಿಲ್ಲೆ

ಪೌರಕಾರ್ಮಿಕರು ಜನರ ಆರೋಗ್ಯ ರಕ್ಷಕರು

ಚಿತ್ರದುರ್ಗ: ನಿತ್ಯ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೌರಕಾರ್ಮಿಕರ ಶ್ರಮವೇ ಜನರ ಆರೋಗ್ಯ ರಕ್ಷಣೆಗೆ ಪ್ರಮುಖ ಕಾರಣ ಎಂದು ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ಹೇಳಿದರು.

ಬಿ.ಆರ್.ಅಂಬೇಡ್ಕರ್ ಕಲ್ಯಾಣ ಮಂಟಪದಲ್ಲಿ ನಗರಸಭೆಯಿಂದ ಶನಿವಾರ ಹಮ್ಮಿಕೊಂಡಿದ್ದ 2023ನೇ ಸಾಲಿನ ಪೌರಕಾರ್ಮಿಕರ ದಿನಾಚರಣೆ ಹಾಗೂ ಕ್ರೀಡಾಕೂಟ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪೌರಕಾರ್ಮಿಕರು ಇಲ್ಲದೆ ಯಾವುದೇ ಊರಿನ ಪರಿಸರ ಸ್ವಚ್ಛವಾಗಿರಲು ಸಾಧ್ಯವಿಲ್ಲ. ನಗರ, ಪಟ್ಟಣ, ಗ್ರಾಮಗಳ ಸೌಂದರ್ಯ ಕಾಪಾಡುವಲ್ಲಿ ನಿಮ್ಮಗಳ ಸೇವೆ ಅನನ್ಯ ಎಂದು ಬಣ್ಣಿಸಿದರು.

ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಪೌರಕಾರ್ಮಿಕರ ಪೈಕಿ ಹಲವರು ಸ್ವಚ್ಛತೆ ವೇಳೆ ತಮ್ಮ ಆರೋಗ್ಯ ರಕ್ಷಿಸುವಂತ ಪರಿಕರಗಳನ್ನು ಬಳಸುತ್ತಿಲ್ಲ. ದಯವಿಟ್ಟು ಈ ರೀತಿ ಮಾಡಬೇಡಿ. ಎಲ್ಲರ ಜೀವಗಳು ಅಮೂಲ್ಯವಾದುದು ಎಂದು ಸಲಹೆ ನೀಡಿದರು.

ಕ್ರೀಡಾಕೂಟದ ಪುರುಷ-ಮಹಿಳಾ ಪ್ರತ್ಯೇಕ ವಿಭಾಗದಲ್ಲಿ ವಿಜೇತರು ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದಿದ್ದಾರೆ. ಶಾಟ್‌ಪುಟ್: ಉಮೇಶ್, ರವಿಕುಮಾರ್, ಎಲ್.ಎಸ್.ರಮೇಶ್, ಪ್ರಮೀಳಾ, ವಿಜಯಲಕ್ಷ್ಮಿ, ಪದ್ಮಾವತಿ. ಲೇಮೆನ್ ಅಂಡ್ ಸ್ಪೂನ್: ಎಲ್.ಎಸ್.ರಮೇಶ್, ಮರಿಸ್ವಾಮಿ, ಮಾರುತಿ, ಮಹಾಲಕ್ಷ್ಮಿ, ಪದ್ಮಾವತಿ, ಪವಿತ್ರಾ. ಮಡಿಕೆ ಹೊಡೆಯುವುದು: ಮರಿಸ್ವಾಮಿ, ದೇವೇಂದ್ರ, ಎಂ.ರಂಗಸ್ವಾಮಿ, ಪದ್ಮಾವತಿ, ಪ್ರಮೀಳಾ, ಮಹಾಲಕ್ಷ್ಮಿ. ಮ್ಯೂಸಿಕಲ್ ಛೇರ್: ರವಿಕುಮಾರ್, ದೇವೇಂದ್ರ, ಕಿರಣ್‌ಕುಮಾರ್. ಗೋಣಿ ಚೀಲ ಓಟ: ಎಲ್.ಎಸ್.ರಮೇಶ್, ಮಾರುತಿ, ವಿಜಯ್.

ಪೌರಾಯುಕ್ತೆ ಎಂ.ರೇಣುಕಾ, ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಎಂ.ಮಹೇಂದ್ರಕುಮಾರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಜು, ಸಫಾಯಿ ಕರ್ಮಚಾರಿ ರಾಜ್ಯ ಸಮಿತಿ ಸದಸ್ಯ ರಾಜಣ್ಣ, ನಗರಸಭೆ ಮಾಜಿ ಉಪಾಧ್ಯಕ್ಷ ದುರುಗೇಶಪ್ಪ, ಸದಸ್ಯರಾದ ಸೈಯದ್ ನಸ್ರುಲ್ಲಾ, ಜೈಲಾಲುದ್ದೀನ್, ಹರೀಶ್, ದಾವೂದ್, ಪೂಜಾಯೋಗಿ, ಭಾಗ್ಯಮ್ಮ, ನಾಗಮ್ಮ, ವೇದಪ್ರಕಾಶ್, ತಾರಕೇಶ್ವರಿ, ಅನುರಾಧ ರವಿಕುಮಾರ್, ಮುಖಂಡ ಜಗದೀಶ್ ಇತರರಿದ್ದರು.