ಶ್ರೀರಂಗಪಟ್ಟಣ: ಕರ್ತವ್ಯದಲ್ಲಿದ್ದ ಪೌರಕಾರ್ಮಿಕ ಹೃದಯಾಘಾತದಿಂದ ಮೃತಪಟ್ಟಿದ್ದು, ಮೃತನ ಸಾವಿಗೆ ನ್ಯಾಯ ಒದಗಿಸುವುದರ ಜತೆಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಸಹೋದ್ಯೋಗಿಗಳು ಹಾಗೂ ಆದಿದ್ರಾವಿಡ ಸಮುದಾಯದವರು ಶನಿವಾರ ಪ್ರತಿಭಟನೆ ನಡೆಸಿದರು.
ಪಟ್ಟಣ ಪುರಸಭೆ ಮುಂಭಾಗ ಪೌರಕಾರ್ಮಿಕರು ಶನಿವಾರ ಮೃತ ಕಾರ್ಮಿಕ ಬಿ.ನಾಗರಾಜು(32) ಶವ ಇರಿಸಿ ಅಕಾರಿಗಳು ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಮುದಾಯದ ಮುಖಂಡರಾದ ಆರ್.ಕೃಷ್ಣ, ಆರ‌್ಮುಗಂ ಕಿಶೋರ್ ಹಾಗೂ ಕುಮಾರ್ ಮಾತನಾಡಿ, ಪಟ್ಟಣದ ಗಾಂನಗರದ ನಿವಾಸಿ ನಾಗರಾಜು 11 ವರ್ಷದಿಂದ ಪುರಸಭೆಯಲ್ಲಿ ನೇರಪಾವತಿ ಕಾರ್ಮಿಕನಾಗಿ ಶುಚಿತ್ವದ ಕೆಲಸ ಮಾಡುತ್ತಿದ್ದಾನೆ. ಹಲವು ದಿನಗಳಿಂದ ಘನತ್ಯಾಜ್ಯ ನಿರ್ವಹಣೆಗೆ ಈತನನ್ನು ನೇಮಕಗೊಳಿಸಲಾಗಿತ್ತು, ಆದರೆ ಈತನಿಗೆ ತ್ಯಾಜ್ಯ ವಿಲೇವಾರಿ ಮಾಡುವ ಯಾವುದೇ ಸುರಕ್ಷಿತ ಸಲಕರಣೆ, ಸಾಧನಗಳನ್ನು ನೀಡಲಾಗಿರಲಿಲ್ಲ. ಅಕ ಕೆಲಸದ ಒತ್ತಡ ಮತ್ತು ಅನಾರೋಗ್ಯದಿಂದಾಗಿ ನಾಗರಾಜು ಮೃತಪಟ್ಟಿದ್ದಾನೆ. ಹಾಗಾಗಿ ಸ್ಥಳಕ್ಕೆ ಜಿಲ್ಲಾಕಾರಿ ಆಗಮಿಸಿ ನ್ಯಾಯ ಒದಗಿಸುವಂತೆ ಪಟ್ಟು ಹಿಡಿದರು.
ವಿಷಯ ತಿಳಿದು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ, ಪ್ರತಿಭಟನಾನಿರತರ ಸಮಸ್ಯೆ ಆಲಿಸಿದರು. ಈ ವೇಳೆ ಪುರಸಭಾ ಮುಖ್ಯಾಕಾರಿ ಸಂದೀಪ್ ಮಾತನಾಡಿ, ಮೃತ ನಾಗರಾಜು ಪುರಸಭೆಯಲ್ಲಿ ಇಎಸ್‌ಐ, ಪಿಎ್ ಕಡಿತದೊಂದಿಗೆ ನೇರಪಾವತಿ ಸಿಬ್ಬಂದಿಯಾಗಿರುವ ಕಾರಣ ಸರ್ಕಾರದ ಸೌಲಭ್ಯಕ್ಕೆ ಒಳಪಡುವುದಿಲ್ಲ. ಈ ಕುರಿತು ಇಲಾಖೆಯ ಮೇಲ್ಮಟ್ಟದ ಅಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಸರ್ಕಾರದಿಂದ ನಿರ್ದೇಶನ ಬರಬೇಕಿದೆ ಎಂದರು.
ಬಳಿಕ ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ ನಗರಾಭಿವೃದ್ದಿ ಇಲಾಖೆಯ ಆಯುಕ್ತ ಡಾ.ಅಜಯ್ ನಾಗಭೂಷಣ್ ಅವರೊಂದಿಗೆ ದೂರವಾಣಿಯಲ್ಲಿ ಚರ್ಚಿಸಿ ಪರಿಸ್ಥಿತಿಯನ್ನು ಗಮನಕ್ಕೆ ತಂದರು.
ಪುರಸಭೆಯ ಜನಪ್ರನಿಗಳು, ಅಕಾರಿಗಳು ಹಾಗೂ ಮುಖ್ಯಾಕಾರಿ ಸಮ್ಮುಖದಲ್ಲಿ ವಿಶೇಷ ಸಭೆ ನಡೆಸಿ ಕೈಗೊಳ್ಳುವ ತೀರ್ಮಾನವನ್ನು ಇಲಾಖೆಗೆ ಕಳುಹಿಸಿಕೊಡುವಂತೆ ಹಿರಿಯ ಅಕಾರಿ ಸೂಚನೆ ನೀಡಿದ್ದಾರೆ. ಅಲ್ಲದೆ ಶೀಘ್ರ ಮೃತನ ಕುಟುಂಬಕ್ಕೆ 5 ಲಕ್ಷ ರೂ.ಪರಿಹಾರ ಹಾಗೂ ಆತನ ಪತ್ನಿಗೆ ಕೆಲಸ ಕೊಡುವ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು ಎಂದು ರಮೇಶ ಬಂಡಿಸಿದ್ದೇಗೌಡ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಅಂತ್ಯವಾಯಿತು.
ಟೌನ್ ಠಾಣೆ ಇನ್ಸ್‌ಪೆಕ್ಟರ್ ಬಿ.ಎಸ್. ಪ್ರಕಾಶ್, ಪಿಎಸ್‌ಐ ರೇಖಾ, ಪುರಸಭಾ ಅಧ್ಯಕ್ಷೆ ನಿರ್ಮಲಾ, ಉಪಾಧ್ಯಕ್ಷ ನರಸಿಂಹೇಗೌಡ, ಸದಸ್ಯರಾದ ಶ್ರೀನಿವಾಸ್, ಎಂ.ಎಲ್.ದಿನೇಶ್, ದಯಾನಂದ್, ಎಸ್.ಪ್ರಕಾಶ್, ಗಂಜಾಂ ಶಿವು, ಎಸ್.ಟಿ.ರಾಜು, ಮುಖಂಡರಾದ ಎಂ.ಲೋಕೇಶ್, ಕಾಯಿ ವೆಂಕಟೇಶ್, ಶಿವು, ಚಂದನ್ ಇತರರು ಉಪಸ್ಥಿತರಿದ್ದರು.