ಕುಶಾಲನಗರ: ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ, ದಿಗ್ವಿಜಯ ಸುದ್ದಿವಾಹಿನಿ ಹಾಗೂ ಕುಶಾಲನಗರದ ಜೀವಿತ ಡಯಾಗ್ನೋಸ್ಟಿಕ್ ಲ್ಯಾಬ್ ವತಿಯಿಂದ ಪೌರಕಾರ್ಮಿಕರ ದಿನದ ಅಂಗವಾಗಿ ಗುರುವಾರ ಪಟ್ಟಣದ ಪೌರಕಾರ್ಮಿಕರಿಗೆ ಆಯೋಜಿಸಿದ್ದ ಉಚಿತವಾಗಿ ರಕ್ತ ಪರೀಕ್ಷೆಗೆ ಪಪಂ ಅಧ್ಯಕ್ಷ ಬಿ.ಜಯವರ್ಧನ ಚಾಲನೆ ನೀಡಿದರು.
ಪೌರಕಾರ್ಮಿಕರ ಶ್ರಮದಿಂದ ಕುಶಾಲನಗರ ಸ್ವಚ್ಛವಾಗಿದ್ದು, ಇವರ ಸೇವೆ ಅನನ್ಯವಾದದ್ದು. ಅಂತಹ ಕಾರ್ಮಿಕರ ರಕ್ತ ಪರೀಕ್ಷೆ ನಡೆಸಿ ಅವರ ಆರೋಗ್ಯ ಕಾಳಜಿಯ ಸದುದ್ದೇಶದಿಂದ ವಿಜಯವಾಣಿ ಪತ್ರಿಕೆಯು ನಮಗೆ ಈ ಅವಕಾಶ ನೀಡಿದೆ ಎಂದು ಪತ್ರಿಕೆಯ ಕಾಳಜಿಯನ್ನು ಜೀವಿತ ಡಯಾಗ್ನೋಸ್ಟಿಕ್ ಲ್ಯಾಬ್ ಮಾಲೀಕರಾದ ಆಶಾ ಶ್ಲಾಘಿಸಿದರು.
ಪಪಂ ಅಧ್ಯಕ್ಷ ಬಿ.ಜಯವರ್ಧನ ಮಾತನಾಡಿ, ಪೌರಕಾರ್ಮಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ವಿಜಯವಾಣಿ ಪತ್ರಿಕೆ ಮತ್ತು ಜೀವಿತ ಡಯಾಗ್ನೋಸ್ಟಿಕ್ ಲ್ಯಾಬ್ ಜಂಟಿಯಾಗಿ ರಕ್ತ ಪರೀಕ್ಷೆ ನಡೆಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು. ಪಪಂ ಆರೋಗ್ಯಾಧಿಕಾರಿ ಉದಯ, ಪೌರ ಕಾರ್ಮಿಕರಾದ ಸುರೇಶ್, ಗಣೇಶ್ ಇತರರು ಇದ್ದರು.