ಚಿಟಗುಪ್ಪ ಪುರಸಭೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಮಿಕರ ದಿನಾಚರಣೆಯಲ್ಲಿ ಎಲ್ಲ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಬಿಎಸ್‌ಎಸ್‌ಕೆ ನಿರ್ದೇಶಕ ಮಲ್ಲಿಕಾರ್ಜುನ ಪಾಟೀಲ್, ಡಿಜೆ ವಿಷ್ಣುಕಾಂತ, ರವಿ ಸ್ವಾಮಿ, ನಸೀರ್ ಖಾನಸಾಬ್, ಸುರೇಶ ಚನ್ನಶೆಟ್ಟಿ, ಅನಿಲಕುಮಾರ ಸಿಂಧೆ, ಸೋಮಶೇಖರ ಬಿರಾದಾರ, ಗೌತಮ ಚಿಂತಲಗೇರಾ, ದೇವಪ್ಪ ಚಾಂಬೋಳೆ, ಹುಸಾಮುದ್ದೀನ್ ಬಾಬಾ ಇತರರಿದ್ದರು. 
ಜಿಲ್ಲೆ

ಪೌರಕಾರ್ಮಿಕರನ್ನು ಗೌರವದಿಂದ ಕಾಣಿ

ಚಿಟಗುಪ್ಪ: ಸ್ವಚ್ಛತೆಗಾಗಿ ಸದಾ ಶ್ರಮಿಸುವ ಪೌರ ಕಾರ್ಮಿಕರನ್ನು ಪ್ರತಿಯೊಬ್ಬರೂ ಗೌರವದಿಂದ ಕಾಣಬೇಕೆಂದು ಬಿಎಸ್‌ಎಸ್‌ಕೆ ನಿರ್ದೇಶಕ ಮಲ್ಲಿಕಾರ್ಜುನ ಪಾಟೀಲ್ ಹೇಳಿದರು.

ಕಾರ್ಮಿಕರ ದಿನಾಚರಣೆ ನಿಮಿತ್ತ ಪಟ್ಟಣದ ಪುರಸಭೆ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶನಿವಾರ ಆಯೋಜಿಸಿದ್ದ ಪುರಸಭೆ ಪೌರ, ಕಂದಾಯ, ಆರೋಗ್ಯ ಇಲಾಖೆಯ ಡಿ ಗ್ರುಪ್ ನೌಕರರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಸಾಪ ಕನ್ನಡ ನಾಡು, ನುಡಿ ಜತೆಗೆ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ, ಬಸವಣ್ಣನವರ ವಚನದಂತೆ ಕಾಯಕವೇ ಕೈಲಾಸ ಎಂದು ಶ್ರಮಿಸುತ್ತಿರುವ ಪೌರ ಕಾರ್ಮಿಕ ಕಾರ್ಯ ಅತ್ಯಂತ ಮಹತ್ವದಾಗಿದೆ. ಪೌರ ಕಾರ್ಮಿಕರಿಗೆ ಸರ್ಕಾರ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದರು.

ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಜಯಕುಮಾರ ಸಿಂಧೆ ಮಾತನಾಡಿ, ಪೌರ ಕಾರ್ಮಿಕರು ನೈಜ ಕಾಯಕ ಯೋಗಿಗಳು, ಸ್ವಚ್ಛತಾ ರೂವಾರಿಗಳು. ಯಾವುದೇ ಪರಿಸ್ಥಿತಿಯಲ್ಲಿಯೂ ಬಿಡುವಿಲ್ಲದ ನೈರ್ಮಲೀಕರಣ ಕಾರ್ಯ ಕೈಗೊಳ್ಳುತ್ತಿರುವ ಅವರ ಸೇವೆ ಅನನ್ಯವಾಗಿದೆ ಎಂದರು.

ನಟ ಡಿಜೆ ವಿಷ್ಣುಕಾಂತ, ಕನ್ನಡ ಸೇನೆ ರಾಜ್ಯ ಉಪಾಧ್ಯಕ್ಷ ರವಿ ಸ್ವಾಮಿ ಮಾತನಾಡಿದರು. ಪುರಸಭೆ ಉಪಾಧ್ಯಕ್ಷ ನಸೀರ್ ಖಾನಸಾಬ್ ಕಾರ್ಯಕ್ರಮ ಉದ್ಘಾಟಿಸಿದರು. ಕಸಾಪ ತಾಲೂಕಾಧ್ಯಕ್ಷ ಅನಿಲಕುಮಾರ ಸಿಂಧೆ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ, ಸೋಮಶೇಖರ ಬಿರಾದಾರ, ಉಪಾಧ್ಯಕ್ಷ ಗೌತಮ ಚಿಂತಲಗೇರಾ, ಖಜಾಂಚಿ ದೇವಪ್ಪ ಚಾಂಬೋಳೆ, ಪುರಸಭೆ ಮುಖ್ಯಾಧಿಕಾರಿ ಹುಸಾಮುದ್ದೀನ್ ಬಾಬಾ, ಸದಸ್ಯರಾದ ಬಾಬಾ, ರೇವಣಪ್ಪ ಭುತ್ತಾಳೆ, ವಿಶಾಲ ಬೋರಳೆ, ವೈದ್ಯಧಿಕಾರಿ ಡಾ.ವಿಜಯ ಹಿರಸ್ಕರ, ಪ್ರಮುಖರಾದ ರಾಜಕುಮಾರ ಬೇಲೂರೆ, ರಾಜಶೇಖರ ಉಪ್ಪಿನ, ಅಶೋಕಕುಮಾರ ಮಹಿಂದ್ರಕರ, ರಾಜಪ್ಪ ಜಮಾದಾರ, ಪ್ರೇಮಿಳಾ ರೆಡ್ಡಿ, ಅಶೋಕ ಸ್ವಾಮಿ, ಷರೀಫ್, ಶಾಮರಾವ ಭುತ್ತಾಳೆ, ಸಚಿನ ಮಠಪತಿ ಇದ್ದರು. ಪಟ್ಟಣ ಘಟಕ ಅಧ್ಯಕ್ಷ ರಾಜಕುಮಾರ ಹಡಪದ ಸ್ವಾಗತಿಸಿದರು. ಚಂದ್ರಕಾಂತ ನಾರಾಯಣಪುರ ನಿರೂಪಣೆ ಮಾಡಿದರು.