ಚಿಕ್ಕಮಗಳೂರು ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್‌ ಅವರಿಗೆ ಮನವಿ ಸಲ್ಲಿಸಿದ ಪೌರಕಾರ್ಮಿಕರ ಜಿಲ್ಲಾ ಮಹಾಸಂಘದ ಕಾರ್ಯಕರ್ತರು ಪೌರಕಾರ್ಮಿಕರ ಮೂಲ ಬೇಡಿಕೆಗಳನ್ನು ಈಡೇರಿಸಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿರು. ಮುರುಗೇಶ್‌, ನಾಗರಾಜ್‌, ಸಿ.ಬಿ.ನಾಗರಾಜ್‌, ಕರಣ್‌ ಕುಮಾರ್‌ ಮತ್ತಿತರರಿದ್ದರು.  
ಜಿಲ್ಲೆ

ಪೌರಕಾರ್ಮಿಕರ ಮೂಲ ಬೇಡಿಕೆಗಳನ್ನು ಈಡೇರಿಸಲು ಮನವಿ

ಚಿಕ್ಕಮಗಳೂರು: ಹಲವಾರು ವರ್ಷಗಳಿಂದ ದುಡಿಯುತ್ತಿರುವ ಪೌರಕಾರ್ಮಿಕರ ಮೂಲ ಬೇಡಿಕೆಗಳನ್ನು ಈಡೇರಿಸಲು ಕ್ರಮ ವಹಿಸಬೇಕು ಎಂದು ಪೌರಕಾರ್ಮಿಕರ ಜಿಲ್ಲಾ ಮಹಾಸಂಘದ ಕಾರ್ಯಕರ್ತರು ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಅವರಿಗೆ ಸಲ್ಲಿಸಿ ಒತ್ತಾಯಿಸಿದರು.

ಈ ಕುರಿತು ಮಾತನಾಡಿದ ಸಂಘದ ಅಧ್ಯಕ್ಷ ಮುರುಗೇಶ್, ಪೌರಕಾರ್ಮಿಕರಿಗೆ ಅನೇಕ ಸಮಸ್ಯೆಗಳಿವೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿ ವರ್ಗಕ್ಕೆ ಮನವಿ ಸಲ್ಲಿಸಿ ಬಗೆಹರಿಸಲು ತಿಳಿಸಿದ್ದರೂ ಸಹ ಇದುವರೆಗೂ ಅವಶ್ಯಕವಾಗಿರುವ ಯಾವುದೇ ಸವಲತ್ತನ್ನು ಪೂರೈಸುತ್ತಿಲ್ಲ ಎಂದು ಹೇಳಿದರು.

ಪೌರಕಾರ್ಮಿಕರಿಗೆ ಮತ್ತು ಆಸ್ಪತ್ರೆ ಸಫಾಯಿ ಕರ್ಮಚಾರಿಗಳಿಗೆ ಪ್ರತಿ ತಿಂಗಳು ವೇತನ ಪಾವತಿಸುವು ದು, ಸಂಕಷ್ಟ ಭತ್ಯೆ, ಟೈಮ್‌ಬಾಂಡ್ ನೀಡುವುದು, ಖಾಯಂ ಕಾರ್ಮಿಕರಿಗೆ ಎಸ್.ಆರ್. ಬುಕ್ ಮಾಡಿಕೊ ಡುವುದು. ನೇರಪಾವತಿ ಮತ್ತು ಹೊರಗುತ್ತಿಗೆ ಕಾರ್ಮಿಕರಿಗೆ ಪ್ರತಿ ವರ್ಷ ಏಪ್ರಿಲ್‌ನಲ್ಲಿ ಸಂಬಳ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಪ್ರತಿ ತಿಂಗಳ ಸಂಬಳ ತಡವಾಗಿ ಬರುತ್ತಿರುವ ಕಾರಣ ಕಾರ್ಮಿಕರು ಕೈಸಾಲ ಮಾಡಿಕೊಂಡು ಜೀವನ ನಡೆಸುವಂತಾಗಿದೆ. ಈ ಜೊತೆಗೆ ಬ್ಯಾಂಕ್‌ಗಳಲ್ಲಿ ಸಾಲ ಹಾಗೂ ಇನ್ನಿತರೆ ಸಹಾಯಧನಕ್ಕೆ ಅರ್ಜಿ ಸಲ್ಲಿಸಿದರೆ ಸಂಬಳ ಪ್ರಮಾಣಪತ್ರ ಬೇಕಾದಾಗ ನಗರಸಭೆಗೆ ಕೇಳಿದರೆ ಸಕಾಲದಲ್ಲಿ ಕೊಡುತ್ತಿಲ್ಲ. ಇದರಿಂದ ಬಹಳಷ್ಟು ತೊಂದರೆಯಾಗುತ್ತಿದೆ ಎಂದರು.

ಬಯೋಮೆಟ್ರಿಕ್‌ನ್ನು ಒಂದೆಡೆ ಅಳವಡಿಸಿದ ಕಾರಣ ಪೌರಕಾರ್ಮಿಕರು ಎಲ್ಲಿಯೇ ಕೆಲಸ ನಿರ್ವಹಿಸುತ್ತಿ ದ್ದರೂ ಆ ಸ್ಥಳಕ್ಕೆ ಬರಬೇಕಾದ ಸ್ಥಿತಿಯಿದೆ. ಮಳೆಗಾಲದಲ್ಲಿ ಕೆಲಸ ನಿರ್ವಹಿಸಿ ಒದ್ದಾಡಿಕೊಂಡು ಬಯೋ ಮೆಟ್ರಿಕ್ ಹಾಕಿದರೂ ಕೆಲವೊಮ್ಮೆ ಗೈರೆಂದು ತೋರಿಸುತ್ತಿದ್ದು ಇದರಿಂದ ವೇತನವು ಕಡಿತಗೊಂಡು ಮಾನಸಿ ಕವಾಗಿ ಸಾಲದ ಸುಳಿಯಲ್ಲಿ ಸಿಲುಕುತ್ತಿದ್ದೇವೆ ಎಂದು ಹೇಳಿದರು.

ವಾರವೀಡಿ ಪೌರಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ಮೊಟ್ಟೆ ವಿತರಿಸಲು ಸರ್ಕಾರದ ಆದೇಶವಿದ್ದ ರೂ ಸಹ ಕಾರಣಗಳನ್ನು ಹೇಳಿ ಮೊಟ್ಟೆ ವಿತರಿಸದೇ ಪೌರಕಾರ್ಮಿಕರಿಗೆ ತೊಂದರೆ ನೀಡುತ್ತಿದೆ. ಅಲ್ಲದೇ ಮೊಟ್ಟೆ ನೀಡಿದರೂ ಸಹ ಆ ಮೊಟ್ಟೆಗಳು ಕಾರ್ಮಿಕರಿಗೆ ತಲುಪುವ ವೇಳೆಗೆ ಹೊಡೆದು ಹೋಗಿ ಅವುಗಳನ್ನು ತಿನ್ನಲು ಸಾಧ್ಯವಾಗದ ಸ್ಥಿತಿಯಿದೆ ಎಂದರು.

ಪ್ರತಿನಿತ್ಯವು ಕಸ, ಕೊಳಚೆ ಮಧ್ಯೆಯೇ ಜೀವದ ಹಂಗು ತೊರೆದು ಕೆಲಸ ಮಾಡುವ ಪೌರಕಾರ್ಮಿಕರಿಗೆ ಸರಿಯಾದ ಸುರಕ್ಷಾ ಕವಚಗಳು ನೀಡುತ್ತಿಲ್ಲ. ಇದರಿಂದ ರೋಗ ರುಜಿನಗಳು ಹೆಚ್ಚಾಗಿ ಕಡಿಮೆ ವಯಸ್ಸಿನಲ್ಲಿ ಪೌರಕಾರ್ಮಿಕರು ಸಾವಿಗೀಡಾಗಿ ಕುಟುಂಬವು ಅನಾಥವಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ನಾಗರಾಜ್, ಗೌ.ಅಧ್ಯಕ್ಷ ಸಿ.ಬಿ.ನಾಗರಾಜ್, ಸದಸ್ಯರಾದ ಕರ ಣ್‌ಕುಮಾರ್, ಬಿ.ಭರತ್, ಶಾಮು, ಮಂಜು, ಗೀತಾ, ಶೈಲಾ, ಸುನೀತಾ, ಆನಂದ್ ಮತ್ತಿತರರಿದ್ದರು.