ಜಿಲ್ಲೆ

ಪೌರ ಕಾರ್ವಿುಕರಿಗೆ ಉಚಿತ ಮಾಸ್ಕ್ ವಿತರಣೆ

ದಾಂಡೇಲಿ: ನಗರಸಭೆಯ ಪೌರ ಕಾರ್ವಿುಕರಿಗೆ ವೆಸ್ಟ್ ಕೋಸ್ಟ್ ಪೇಪರ್ ಮಿಲ್​ನಿಂದ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಜ್ಯೆನ ಅವರ ನಿರ್ದೇಶನದಂತೆ ಉಚಿತವಾಗಿ ಮಾಸ್ಕ್ ಗಳನ್ನು ಶನಿವಾರ ನಗರಸಭೆಯಲ್ಲಿ ವಿತರಿಸಲಾಯಿತು.

ನಗರಸಭೆಯ ಇಂಜಿನಿಯರ್ ಜಿ.ಬಿ. ಹಿರೇಮಠ, ನಗರಸಭೆ ಸದಸ್ಯರಾದ ಆದಂ ದೇಸೂರ, ಮೋಹನ ಹಲವಾಯಿ, ನರೇಂದ್ರ ಚವ್ಹಾಣ, ಸರಸ್ವತಿ ರಜಪೂತ, ಪ್ರೀತಿ ನಾಯರ, ಸಂಜು ನಂದ್ಯಾಳಕರ, ದಶರಥ ಬಂಡಿವಡ್ಡರ, ಪೌರಕಾರ್ವಿುಕರ ಸಂಘದ ಜಿಲ್ಲಾ ಅಧ್ಯಕ್ಷ ಡಿ. ಸ್ಯಾಮಸನ್, ಪ್ರೆಸ್ ಕ್ಲಬ್ ಅಧ್ಯಕ್ಷ ಬಿ.ಎನ್. ವಾಸರೆ, ಉಪಾಧ್ಯಕ್ಷ ಯು.ಎಸ್. ಪಾಟೀಲ, ಕಾರ್ಯದರ್ಶಿ ಸಂದೇಶ ಜ್ಯೆನ, ರವಿಂದ್ರ ಭಟ, ಕಾಗದ ಕಾರ್ಖಾನೆಯ ಸಿಬ್ಬಂದಿ ಉಪಸ್ಥಿತರಿದ್ದರು. 300ಕ್ಕೂ ಹೆಚ್ಚು ಮಾಸ್ಕ್​ಗಳನ್ನು ವಿತರಿಸಲಾಯಿತು.