ಜಿಲ್ಲೆ

ಪೌರ ಕಾರ್ಮಿಕರದು ಗೌರವ ವೃತ್ತಿ : ಗೌರವಿಸುವಂತೆ ಸಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಶಿವಣ್ಣ ಮನವಿ

ರಾಮನಗರ: ಪೌರಕಾರ್ಮಿಕರದು ಗೌರವಯುತವಾದ ವೃತ್ತಿಯಾಗಿದ್ದು, ಅವರನ್ನು ಗೌರವಿಸುವ ಕೆಲಸವನ್ನು ಅಧಿಕಾರಿಗಳು ಮತ್ತು ಪ್ರತಿಯೊಬ್ಬ ನಾಗರಿಕರು ಮಾಡಬೇಕು ಎಂದು ರಾಜ್ಯ ಸಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಮನವಿ ಮಾಡಿದರು.

ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ಪೌರಕಾರ್ಮಿಕರೊಂದಿಗೆ ನೇರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಪೌರ ಕಾರ್ಮಿಕರು ಒಂದು ದಿನ ಸ್ವಚ್ಛತಾಕಾರ್ಯ ನಿಲ್ಲಿಸಿದರೆ ಎಲ್ಲರಿಗೂ ತೊಂದರೆ ತಿಳಿಯುತ್ತದೆ. ಪೌರಕಾರ್ಮಿಕರನ್ನು ಅಮಾನವೀಯವಾಗಿ ನಡೆಸಿಕೊಂಡು ದೂರು ದಾಖಲಾದರೆ ಅಂತಹವರ ವಿರುದ್ಧ ಕ್ರಮ ಕೆಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ನೇರಪಾವತಿ ಪೌರಕಾರ್ಮಿಕರಿಗೆ ವೇತನದಲ್ಲಿ ಪಿಎ್​ ಹಾಗೂ ಇತರ ಸೌಲಭ್ಯಗಳು ಪಾವತಿಯಾಗುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಂಡ ನಂತರ ಏಜೆನ್ಸಿಗಳಿಗೆ ಬಿಲ್​ ಪಾವತಿ ಮಾಡಬೇಕು. ಪ್ರತಿ ತಿಂಗಳು ನೀಡುತ್ತಿರುವ ವೇತನದ ವಿವರದ ಒಂದು ಪ್ರತಿಯನ್ನು ಒದಗಿಸುವಂತೆ ತಿಳಿಸಿದರು.

ಸಂವಾದ ಕುರಿತಂತೆ ಮಾತನಾಡಿದ ಶಿವಣ್ಣ, ಪೌರಕಾರ್ಮಿಕರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಉದ್ದೇಶದಿಂದ ಆಯೋಗ ವತಿಯಿಂದ ನೇರ ಸಂವಾದ ನಡೆಸಲಾಗುತ್ತಿದ್ದು, ಪೌರಕಾರ್ಮಿಕರು ತಮ್ಮ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚಿಸುವಂತೆ ಮನವಿ ಮಾಡಿದರು. ಮಹಿಳಾ ಪೌರಕಾರ್ಮಿಕರೂ ತಮ್ಮ ಸಮಸ್ಯೆಗಳನ್ನು ತಿಳಿಸಬೇಕು. ಕೆಲಸ ಮಾಡುವ ಸಂದರ್ಭದಲ್ಲಿ ವಿಶ್ರಾಂತಿ ಗಹ, ಹಬ್ಬದ ದಿನಗಳಲ್ಲಿ ರಜೆ ಸೇರಿ ಹಲವಾರು ಸಮಸ್ಯೆಗಳು ಇರುತ್ತದೆ. ಅವುಗಳನ್ನು ಆಯೋಗದ ಗಮನಕ್ಕೆ ತರಬೇಕು ಎಂದರು.

ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ನಾಗರಾಜು ಮಾತನಾಡಿ, ಪೌರಕಾರ್ಮಿಕರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಸೌಲಭ್ಯಗಳನ್ನು ಒದಗಿಸಬೇಕು. ಪೊಲೀಸ್​ ಇಲಾಖೆಯಲ್ಲಿರುವಂತೆ ಪೌರಕಾರ್ಮಿಕರಿಗೆ ಹೆಲ್ತ್​ ಕಾರ್ಡ್​ ನೀಡಬೇಕು. ಅವರ ಕುಟುಂಬಕ್ಕೂ ಆರೋಗ್ಯ ವಿಮೆ ಒದಗಿಸಬೇಕು. ಪೌರಕಾರ್ಮಿಕರಿಗೆ ಜಿ1, ಜಿ2 ರೀತಿ ಮನೆ ನೀಡುವ ಬದಲು 30/40 ಅಡಿ ನಿವೇಶನ ನೀಡಬೇಕು. ಇದರಿಂದ ಅವರು ಭೂ ಮಾಲೀಕರಾಗುತ್ತಾರೆ. ಪೌರಕಾರ್ಮಿಕರಿಗೆ ಕೌಶಲಾಭಿವದ್ಧಿ ತರಬೇತಿ ನೀಡುವಂತೆ ಮನವಿ ಸಲ್ಲಿಸಿದರು.

ಉಪಾಹಾರ ಭತ್ಯೆ 50 ರೂ.ಗೆ ಹೆಚ್ಚಿಸಿ: ನೇರಪಾವತಿ ಪೌರಕಾರ್ಮಿಕ ಜಿಲ್ಲಾಧ್ಯ ಚಲಪತಿ ಮಾತನಾಡಿ, 2ನೇ ಹಂತದ ನೇರ ಪಾವತಿ ಪೌರಕಾರ್ಮಿಕರನ್ನು ಕಾಯಂ ಮಾಡಬೇಕು. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಲಭ್ಯವಿರುವ ಸರ್ಕಾರಿ ಭೂಮಿ ಗುರುತಿಸಿ ನೇರ ವೇತನ ಪೌರಕಾರ್ಮಿಕರಿಗೆ ನಿವೇಶನ ಹಂಚಿಕೆ ಮಾಡಬೇಕು. ಈ ಕಾರ್ಮಿಕರ ಬೆಳಗಿನ ಉಪಾಹಾರಕ್ಕೆ ನಿಗ-ದಿಪಡಿಸಿರುವ ರೂ. 20ನ್ನು 50 ರೂ.ಗಳಿಗೆ ಹೆಚ್ಚಳ ಮಾಡಬೇಕು ಎಂದು ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯರು ಪೌರಕಾರ್ಮಿಕರಿಗೆ ಇರುವ ನಿವೇಶನ ಹಂಚಿಕೆ, ಆರೋಗ್ಯ ವಿಮೆ, ವೆದ್ಯಕಿಯ ವೆಚ್ಚ ಮರುಪಾವತಿ, ತರಬೇತಿ ಕಾರ್ಯಕ್ರಮಗಳ ಆಯೋಜನೆಯ ಸಮಸ್ಯೆಗಳನ್ನು ಜಿಲ್ಲಾಧಿ-ಕಾರಿಗಳ ಹಂತದಲ್ಲಿ ಪರಿಹರಿಸಿಕೊಳ್ಳಬಹುದು. ಪೌರಕಾರ್ಮಿಕರ ಹುದ್ದೆ ಕಾಯಂಗೊಳಿಸುವ ಬಗ್ಗೆ, ಉಪಾಹಾರ ಭತ್ಯೆ ಹೆಚ್ಚಳದ ಬಗ್ಗೆ ರಾಜ್ಯಮಟ್ಟದಲ್ಲಿ ಮುಖ್ಯಮಂತ್ರಿಯೊಂದಿಗೆ ಚರ್ಚಿಸಲಾಗುವುದು ಎಂದರು.

ನಿಯಮ ತಿಳಿದುಕೊಳ್ಳಿ: 

ಮ್ಯಾನುಯಲ್​ ಸ್ಕಾವೆಂಜರ್​ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಅಧಿ-ನಿಯಮ 2013ರ ಕಾಯ್ದೆ ಹಾಗೂ ನಿಯಮಗಳನ್ನು ಅಧಿ-ಕಾರಿಗಳು ತಿಳಿದುಕೊಂಡು ಕಾರ್ಯನಿರ್ವಹಿಸಬೇಕು. ಇದನ್ನು ಲುವಾಗಿ ಪರಿಗಣಿಸಿ ಕಾಯ್ದೆ ಉಲ್ಲಂಘಿಸಿದಲ್ಲಿ ದಂಡ ಹಾಗೂ ಜೆಲು ಶಿೆ ವಿಧಿ-ಸಲು ಅವಕಾಶವಿದೆ ಚಲಪತಿ ತಿಳಿಸಿದರು.

ವಿಶ್ರಾಂತಿ ಕೊಠಡಿ: ಪೌರಕಾರ್ಮಿಕರು ಬೆಳಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಕಾರ್ಯನಿರ್ವಹಿಸುತ್ತಾರೆ. ಅವರಿಗೆ ವಿಶ್ರಾಂತಿ ಕೊಠಡಿಯ ಅವಶ್ಯಕತೆ ಇದ್ದು, ಪೌರಕಾರ್ಮಿಕರ ಸಂಖ್ಯೆಯ ಆಧಾರದ ಮೇಲೆ ವಿಶ್ರಾಂತಿ ಕೊಠಡಿಗಳನ್ನು ಆದ್ಯತೆ ಮೇಲೆ ಒದಗಿಸಬೇಕು. ವಿಶ್ರಾಂತಿ ಕೊಠಡಿಯಲ್ಲಿ ಕುಡಿಯುವ ನೀರು, ಶೌಚಗೃಹ ಮತ್ತಿತರ ಮೂಲಸೌಕರ್ಯ ಕಲ್ಪಿಸಬೇಕು ಎಂದು ನಗರ ಸ್ಥಳಿಯ ಸಂಸ್ಥೆಗಳ ಮುಖ್ಯಸ್ಥರಿಗೆ ಚಲಪತಿ ತಿಳಿಸಿದರು.

ಭೂಮಿ ಗುರುತಿಸುವ ಕಾರ್ಯ ಪ್ರಗತಿಯಲ್ಲಿ: ಜಿಲ್ಲಾ-ಧಿಕಾರಿ ಡಾ. ಕೆ. ರಾಕೇಶ್​ ಕುಮಾರ್​ ಮಾತನಾಡಿ, ಪೌರಕಾರ್ಮಿಕರಿಗೆ ವಸತಿ ಸೌಲಭ್ಯ ಒದಗಿಸಲು ಸರ್ಕಾರಿ ಭೂಮಿ ಗುರುತಿಸುವ ಕೆಲಸ ಪ್ರಗತಿಯಲ್ಲಿದೆ. ಮಾಸ್ಟರ್​ ಹೆಲ್ತ್​ ಚೆಕ್​ ಅಪ್​ ಮಾಡಿಸುವಾಗ ಬಿಪಿ, ಸಕ್ಕರೆ ಕಾಯಿಲೆ ಪರೀೆಯೊಂದಿಗೆ ಎಕೋ& ಕಾರ್ಡಿಯೋಗ್ರಾಮ್​, ಟಿಎಂಟಿಯಂತಹ ಪರೀೆಯನ್ನು ಕೆಗೊಳ್ಳಲು ಕ್ರಮ ವಹಿಸಲಾಗುವುದು ಎಂದರು. ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಾಗಿ ಎ್​ಐಆರ್​ ಆಗುವ ಕೇಸ್​ಗಳ ವಿವರವನ್ನು ಪೊಲೀಸ್​ ಇಲಾಖೆಯವರು ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸಬೇಕು. ಇದರಿಂದ ಅವರಿಗೆ ನೀಡಬೇಕಿರುವ ಪರಿಹಾರದ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಕ್ರಮ ವಹಿಸಲಿದೆ ಎಂದರು.

ಕರ್ನಾಟಕ ಸಾಯಿ ಕರ್ಮಚಾರಿ ಆಯೋಗದ ಕಾರ್ಯದರ್ಶಿ ರಮಾ, ಜಿಪಂ ಸಿಇಒ ಇಕ್ರಂ, ಜಿಲ್ಲಾ ಜಾಗತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಶಿವಕುಮಾರ ಸ್ವಾಮಿ, ಉಪವಿಭಾಗಾಧಿ-ಕಾರಿ ಮಂಜುನಾಥ್​, ಜಿಪಂ ಉಪಕಾರ್ಯದರ್ಶಿ ರಮೇಶ್​, ರಾಮನಗರ ನಗರಸಭೆ ಆಯುಕ್ತ ನಂದ ಕುಮಾರ್​, ಜಿಲ್ಲಾ ಸಮಾಜ ಕಲ್ಯಾಣಾ-ಕಾರಿ ಲಲಿತಾ ಬಾಯಿ ಮುಂತಾದವರು ಇದ್ದರು.