filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 46; 
ಜಿಲ್ಲೆ

ಪೌರ ಕಾರ್ಮಿಕರ ಮನೆ ನಿರ್ಮಾಣಕ್ಕೆ ಸಹಕರಿಸಿ

ಕೊಳ್ಳೇಗಾಲ: ತಾಂತ್ರಿಕ ಸಮಸ್ಯೆಯಿಂದ ಹಣ ಬಿಡುಗಡೆಯಾಗದೆ ಪೌರ ಕಾರ್ಮಿಕರ ಮನೆ ನಿರ್ಮಾಣಕ್ಕೆ ತೊಂದರೆಯಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ ಮಹದೇವಪ್ಪ ಅವರ ಬಳಿ ನಗರಸಭೆ ಸದಸ್ಯ ರಾಘವೇಂದ್ರ ಸೇರಿದಂತೆ ಸಂತ್ರಸ್ತರು ಅಳಲು ತೋಡಿಕೊಂಡರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನ ವೀಕ್ಷಣೆಗೆ ಶನಿವಾರ ಸಚಿವ ಎಚ್.ಸಿ.ಮಹದೇವಪ್ಪ ಅವರು ಭೇಟಿ ನೀಡಿದ್ದ ವೇಳೆ ನಗರಸಭೆ ಸದಸ್ಯ ರಾಘವೇಂದ್ರ ಮನೆ ನಿರ್ಮಾಣದ ವಿಚಾರವಾಗಿ ಪೌರ ಕಾರ್ಮಿಕರ ಕಾಲನಿ ಜನರಿಗೆ ಆಗಿರುವ ಸಮಸ್ಯೆ ಬಗ್ಗೆ ಗಮನ ಸೆಳೆದರು.

2018ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಆವಾಸ್ ಯೋಜನೆ ಯಡಿ ಕಾಲನಿಯ ಸುಮಾರು 40 ಜನರಿಗೆ ಮನೆ ಮಂಜೂರಾಗಿತ್ತು. ಅಂತೆಯೇ, ಈ ಯೋಜನೆಯಡಿ ಮೂರುವರೆ ಲಕ್ಷ ರೂ. ಬಿಡುಗಡೆಯಾಗಿ 27 ಜನರು ಮನೆ ಕಟ್ಟಿಕೊಂಡಿದ್ದಾರೆ. ಆದರೆ, ಉಳಿದ 13 ಫಲಾನುಭವಿಗಳಿಗೆ ಮನೆ ನಿರ್ಮಾಣ ಸಂಬಂಧ ಜಿಪಿಎಸ್ ಕೂಡ ಮಾಡಲಾಗಿದೆ. ಬಳಿಕ ಬಂದ ಕೋವಿಡ್ ಸಂದರ್ಭದಲ್ಲಿ ಹಣ ಬಿಡುಗಡೆ ಆಗಿಲ್ಲ. ಸ್ವಂತ ಹಣದಲ್ಲಿ ಕಷ್ಟ ಪಟ್ಟು ಮನೆ ನಿರ್ಮಾಣಕ್ಕೆ ಅಡಿಪಾಯ ಹಾಕಿ ಕೊಂಡಿದ್ದಾರೆ. ಇಲ್ಲಿಯವರೆಗೂ ಹಣ ಬಿಡುಗಡೆಯಾಗಲಿದೆ ಎಂದು ಕಾದು ಕುಳಿತಿದ್ದಾರೆ. ಆದರೆ, ಯೋಜನೆಗೆ ಸಂಬಂಧಿಸಿದ ಆನ್‌ಲೈನ್ ಪರಿಶೀಲಿಸಿದರೆ ಒಪನ್ ಆಗುತ್ತಿಲ್ಲ ಇದ್ದರಿಂದ ಪೌರಕಾರ್ಮಿಕರಿಗೆ ಮನೆ ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಇವರಿಗೆ ನೂತನವಾಗಿ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ಮಾಡಿಕೊಡಬೇಕು. ಇಲ್ಲವಾದರೆ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಿ ಮನೆ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಿಸಿಕೊಡಬೇಕೆಂದು ಮನವಿ ಮಾಡಿದರು.

ಪೌರ ಕಾರ್ಮಿಕರ ಸಮಸ್ಯೆ ಆಲಿಸಿದ ಬಳಿಕ ಸಚಿವ ಎಚ್.ಸಿ.ಮಹದೇವಪ್ಪ ಪ್ರತಿಕ್ರಿಯಿಸಿ, ಬೆಂಗಳೂರಿನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಆವಾಜ್ ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳ ಜತೆ ಮಾತನಾಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಪೌರ ಕಾರ್ಮಿಕರ ಕಾಲನಿಯ ಯಜಮಾನರಾದ ರಾಜು, ಬಣ್ಣಾರಿ, ಶಿವಕುಮಾರ್ ಮುಖಂಡರಾದ ರಂಗಸ್ವಾಮಿ, ಆರು ಮುಗಂ, ಜಗನಾಥ್, ವಿಕ್ರಮ್, ತಗಂ, ಕವಿತಾ, ಮರಿಯಮ್ಮ, ಹರೀಶ್, ಪೊನ್ನಮ್ಮ ಇತರರು ಇದ್ದರು.

13 ಫಲಾನುಭವಿಗಳಿಗೆ ಮನೆ ಕಟ್ಟಲು ಹಣ ಬಿಡುಗಡೆಯಾಗದೆ ತೊಂದರೆಗೆ ಸಿಲುಕಿದ್ದಾರೆ. ಹೊಸದಾಗಿ ಅರ್ಜಿ ಹಾಕಿದರೆ ಈಗಾಗಲೇ ಮನೆ ಮಂಜೂರಾಗಿದೆ ಎಂದು ತೋರಿಸುತ್ತಿದೆ. ಪೌರ ಕಾರ್ಮಿಕರಿಗೆ ಬಾಡಿಗೆ ಮನೆಗಳನ್ನು ಕೊಡುವುದಿಲ್ಲ. ಅಡಿಪಾಯಕ್ಕೆ ಶೆಡ್ ಹಾಕಿಕೊಂಡು ಜೀವಿಸುತ್ತಿದ್ದಾರೆ. ವಾಸಿಸಲು ಯೋಗ್ಯವಲ್ಲದ ಶೆಡ್ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಮಳೆಗಾಲದಲ್ಲಿ ಬಹಳ ಕಷ್ಟವಾಗುತ್ತದೆ. ಆಗಾಗಿ ಸಚಿವರ ಗಮನ ಸೆಳೆದಿದ್ದೇವೆ. ರಾಘವೇಂದ್ರ ನಗರಸಭೆ ಸದಸ್ಯ