ಬಾಗಲಕೋಟೆ: ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಹಾಗೂ ಅಭ್ಯರ್ಥಿಗಳ ಪ್ರಚಾರದ ಕರಪತ್ರ, ಪೋಸ್ಟರ್ ಹಾಗೂ ಕಿರುಹೊತ್ತಿಗೆ ಸೇರಿದಂತೆ ಇತ್ಯಾದಿಗಳನ್ನು ಮುದ್ರಿಸುವ ಪೂರ್ವದಲ್ಲಿ ಮುದ್ರಕರು ಅನುಮತಿ ಪಡೆಯುವದು ಕಡ್ಡಾಯವಾಗಿದೆ ಎಂದು ಜಿಲ್ಲಾಽಕಾರಿಗಳು ಆಗಿರುವ ಜಿಲ್ಲಾ ಚುನಾವಣಾಽಕಾರಿ ಪಿ.ಸುನೀಲ್‌ಕುಮಾರ ಹೇಳಿದರು.
ಜಿಲ್ಲಾಽಕಾರಿಗಳ ಸಭಾಂಗಣದಲ್ಲಿ ಸೋಮವಾರ ಮುದ್ರಕರ, ಹೋಟೆಲ್, ಕಲ್ಯಾಣ ಮಂಟಪ, ಕೇಬಲ್ ಮಾಲಿಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುದ್ರಕರ ಮತ್ತು ಪ್ರಕಾಶಕರ ಹೆಸರನ್ನು ಹೊಂದಿರದ ಯಾವುದೇ ಚುನಾವಣೆಯ ಪೋಸ್ಟರ ಅಥವಾ ಬಿತ್ತಿಪತ್ರಗಳ್ನು ಮುದ್ರಿಸಿ ಪ್ರಕಟಿಸುವಂತಿಲ್ಲ. ಪ್ರಿಂಟ್ ಮಾಡಿಸುವವರಿಂದ ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿಸಿಕೊಳ್ಳತಕ್ಕದ್ದು. ಪ್ರಕಟಿಸಿದ ಕರಪತ್ರ ಮತ್ತು ನಮೂನೆಯ ಪ್ರತಿಯನ್ನು ಜಿಲ್ಲಾ ಚುನಾವಣಾಽಕಾರಿಗಳಿಗೆ ಸಲ್ಲಿಸಬೇಕು. ನಿಬಂಧನೆಗಳನ್ನು ಉಲ್ಲಂಘಿಸಿದಲ್ಲಿ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಹೋಟೆಲ್‌ಗಳ ಮೇಲೆ ನಿಗಾ
ಚುನಾವಣಾ ನೀತಿ ಸಂಹಿತೆ ಪಾಲನೆಗೆ ಹೆಚ್ಚಿನ ನಿಗಾ ವಹಿಸಲಾಗುತ್ತಿದ್ದು, ಹೋಟಲ್‌ನಲ್ಲಿ ಉಳಿದುಕೊಳ್ಳುವ ಪ್ರತಿಯೊಬ್ಬ ವ್ಯಕ್ತಿಗಳ ಮೇಲೆ ಮಾಲೀಕರು ನಿಗಾವಹಿಸುವ ಅಗತ್ಯವಿದೆ. ಲಾಡ್ಜನಲ್ಲಿ ಉಳಿದಿಕೊಂಡ ವ್ಯಕ್ತಿಗಳ ಪ್ರತಿಯೊಂದು ಚಟುವಟಿಕೆಗಳನ್ನು ಗಮನಿಸಬೇಕು. ಯಾವುದೇ ರೀತಿಯ ಹಣ ಸಂಗ್ರಹ, ಗಿಪ್ಟ ವಸ್ತುಗಳನ್ನು ಸಂಗ್ರಹಿಸುವ ಸಾಧ್ಯತೆ ಇರುತ್ತದೆ. ಇವುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಕಾಲಕಾಲಕ್ಕೆ ಪ್ಲಾಯಿಂಗ್ ಸ್ಕಾ÷್ವಡ್‌ಗಳು ಪರಿಶೀಲಿಸಲಿದ್ದು, ಉಲ್ಲಂಘನೆ ಕಂಡುಬಂದಲ್ಲಿ ಮಾಲಿP್ಪರ ಸಮೇಲ ಉಲ್ಲಂಘಿಸಿದ ವ್ಯಕ್ತಿಗಳ ಮೇಲೆ ಕ್ರಮ ಜರುಗಿಸಲಾಗುತ್ತದೆ. ಲಾಡ್ಜನಲ್ಲಿ ಉಳಿದುಕೊಂಡವರ ಮಾಹಿತಿಯನ್ನು ವಾರಕ್ಕೊಮ್ಮೆ ಮಾಹಿತಿ ನೀಡಲು ಸೂಚಿಸಿದರು.
ಸರಾಪ ಅಂಗಡಿಗಳ ಮೇಲೆ ಕಣ್ಗಾವಲು
ಜಿಲ್ಲೆಯಲ್ಲಿರುವ ಸರಾಪ ಅಂಗಡಿ ಮಾಲಿಕರು ತಮ್ಮ ವ್ಯವಹಾರದಲ್ಲಿ ದುರ್ಬಳಕೆ ಆಗಬಾರದು. ಚುನಾವಣೆಯಲ್ಲಿ ಬಂಗಾರ, ಬೆಳ್ಳಿ ಕೊಡುವ ಮೂಲಕ ಆಶೆ ಆಮಿಷಗಳನ್ನು ಒಡ್ಡುವ ಸಂಭವವಿದ್ದು, ಖರೀದಿಗಾಗಿ ಇಲ್ಲವೇ ಟೋಕಲ್ ವ್ಯವಸ್ಥೆ ಮೂಲಕ ಜನರಿಗೆ ತಲುಪಿಸುವ ಕಾರ್ಯ ನಡೆಯುವ ಸಂಭವವಿದ್ದು, ಈ ಬಗ್ಗೆ ಸರಾಪ ಅಂಗಡಿಯ ಮಾಲಿಕರು ಎಚ್ಚರಿಕೆಯಿಂದ ವ್ಯವಹಾರ ಮಾಡಬೇಕು. ವ್ಯವಹಾರದಲ್ಲಿ ಲೋಪ ಕಂಡಲ್ಲಿ ಸೂಕ್ತ ಕ್ರಮ ಜರುಗಿಸಲಾಗುತ್ತದೆ. ಸಂಶಯ ಕಂಡುಬಂದಲ್ಲಿ ಸರಾಪ ಅಂಗಡಿಗಳ ಪ್ರತಿಯೊಂದು ಹಂತದ ವ್ಯವಹಾರವನ್ನು ಪರಿಶೀಲನೆ ನಡೆಸಲಾಗುತ್ತಿದ್ದು, ಯಾವ್ಯದೇ ರೀತಿಯ ದುರ್ಬಳಕೆಗೆ ಅವಕಾಶ ನೀಡಬಾರದು ಎಂದರು.
ಹಣದ ವ್ಯವಹಾರ ಮೇಲೆ ನಿಗಾ
ಬ್ಯಾಂಕ್ ಮತ್ತು ವಿವಿಧ ಪತ್ತಿನ ಸಹಕಾರಿ ಸಂಘಗಳ ಮೇಲೆ ನಿಗಾ ವಹಿಸುವ ಅಗತ್ಯವಿದ್ದು, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಮತ್ತು ಸಹಕಾರ ಇಲಾಖೆಯ ಉಪ ನಿಬಂಧಕರು ಹಣದ ವ್ಯವಹಾರದ ಪ್ರತಿಯೊಂದು ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಜಿಲ್ಲಾಽಕಾರಿಗಳು ಸೂಚಿಸಿದರು. ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣದ ವ್ಯವಹಾರದ ಮಾಹಿತಿಯನ್ನು ಸಲ್ಲಿಸಬೇಕು. ದಾಖಲೆ ಇಲ್ಲದೇ ಸಹಕಾರಿ ಸಂಘಗಳಲ್ಲಿ ಹಣದ ವ್ಯವಹಾರಗಳು ನಡೆಯದಂತೆ ನಿಗಾವಹಿಸಲು ಸೂಚಿಸಿದರು.
ಮದುವೆಗೂ ಅನುಮತಿ
ಕಲ್ಯಾಣ ಮಂಟಪಗಳನ್ನು ಸಹ ದುರ್ಬಳಕೆಯಾಗದಂತೆ ನಿಗಾವಹಿಸಲು ಕಲ್ಯಾಣ ಮಂಟಪಗಳಲ್ಲಿ ಮದುವೆ, ರಾಜಕೀಯ ಪಕ್ಷಗಳ ಸಭೆ ನಡೆಸಲು ಕಡ್ಡಾಯವಾಗಿ ಆಯಾ ಮತಕ್ಷೇತ್ರದ ಚುನಾವಣಾಽಕಾರಿಗಳಿಂದ ಅನುಮತಿ ಪಡೆದುಕೊಳ್ಳತಕ್ಕದ್ದು, ಅನುಮತಿ ಪಡೆಯದವರಿಗೆ ಕಲ್ಯಾಣ ಮಂಟಪ ಬಾಡಿಗೆ ಕೊಡದಂತೆ ಮಾಲಿಕರಿಗೆ ಸೂಚಿಸಿದರು. ಮಂಟಪಗಳಲ್ಲಿ ಉಲ್ಲಂಘನೆ ಕಂಡುಬಂದಲ್ಲಿ ಮಾಲಿಕರ ಮೇಲೆ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೇಬಲ್ ಚಾನೆಲ್ ಮಾಲಕರು ಚಾನಲ್‌ನಲ್ಲಿ ಪ್ರದರ್ಶನಗೊಳ್ಳುವ ಎಲ್ಲ ಜಾಹಿರಾತುಗಳನ್ನು ಪ್ರಕಟಿಸುವ ಮೊದಲು ಮಾಧ್ಯಮ ದೃಢೀಕರಣ ಹಾಗೂ ವೀಕ್ಷಣಾ ಸಮಿತಿ (ಎಂ.ಸಿ.ಎಂ.ಸಿ) ಗಮನಕ್ಕೆ ತರುವಂತೆ ಸೂಚಿಸಲಾಯಿತು. ಅನುಮತಿ ಇದ್ದರೆ ಮಾತ್ರ ಕೇಬಲ್ ಚಾನಲ್‌ನಲ್ಲಿ ಪ್ರಕಟಿಸಲು ತಿಳಿಸಿದರು. ವಾಣಿಜ್ಯ ತೆರಿಗೆ ಇಲಾಖೆಯವರು ವಸ್ತುಗಳ ಖರೀದಿ ಮೇಲೆ ನಿಗಾ ವಹಿಸಲು ತಿಳಿಸಿದರು.
ಸಭೆಯಲ್ಲಿ ಜಿ.ಪಂ ಸಿಇಒ ಟಿ.ಭೂಬಾಲನ್, ಪ್ರೊಬೇಷನರಿ ಐ.ಎ.ಎಸ್ ಅಽಕಾರಿ ಕನಿಷ್ಕ, ಅಪರ ಜಿಲ್ಲಾಽಕಾರಿ ರಮೇಶ ಕಳಸದ ಸೇರಿದಂತೆ ಮುದ್ರಕರ, ಹೋಟೆಲ್, ಕಲ್ಯಾಣ ಮಂಟಪ, ಕೇಬಲ್ ಮಾಲಿಕರು ಉಪಸ್ಥಿತರಿದ್ದರು.