ಜಿಲ್ಲೆ

ಪೋಷಕಾಂಶದಿಂದ ಉತ್ತಮ ಇಳುವರಿ

ಮಾಂಜರಿ: ಕಬ್ಬು ಬೆಳೆಯುವ ವಿಧಾನ, ರೋಗ ಬಾಧೆ ಹತೋಟಿಯಲ್ಲಿರಿಸುವಿಕೆ, ನಾಟಿ ಮಾಡುವುದು ಹಾಗೂ ಯಾವ ಪೋಷಕಾಂಶ ನೀಡಬೇಕು ಎಂಬ ವಿಷಯದ ಕುರಿತು ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಆರ್.ಬಿ.ಖಂಡಗಾವೆ ರೈತರಿಗೆ ಮಾಹಿತಿ ನೀಡಿದರು.

ಸಮೀಪದ ನಂದಿಕುರಳಿ ಗ್ರಾಮದಲ್ಲಿ ಮಲ್ಲಿಕಾರ್ಜುನ ಹಿರೇಮಠ ಅವರ ತೋಟದಲ್ಲಿ ಶಿವಶಕ್ತಿ ಶುಗರ್ಸ್ ಹಾಗೂ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಬ್ಬು ಬೆಳೆಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಕಾರ್ಖಾನೆ ಹಿರಿಯ ಪ್ರಧಾನ ವ್ಯವಸ್ಥಾಪಕ ಎನ್.ಎಸ್.ಹಿರೇಮಠ ಮಾತನಾಡಿ, ಆಧುನಿಕ ಕಬ್ಬಿನ ಕೃಷಿಯಲ್ಲಿ ಹೆಚ್ಚು ಇಳುವರಿ ಪಡೆಯುವ ಮತ್ತು ಅದರ ಮಹತ್ವ ಕುರಿತು ರೈತರಿಗೆ ತಿಳಿಸಿಕೊಟ್ಟರು.

ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಕಬ್ಬು ಮೇಲ್ವಿಚಾರಕ ಎನ್.ಐ. ಪಾಟೀಲ, ಕಬ್ಬು ಅಭಿವೃದ್ಧಿ ಮೇಲ್ವಿಚಾರಕ ರಾಹುಲ ಇಚಲಕರಂಜೆ, ಸಚಿನ ಮೋಪಗಾರ ಇತರರಿದ್ದರು.