ಪೋಲಿಯೊ ಲಸಿಕೆಗೆ ಎರಡು ತಿಂಗಳ ಮಗು ಸಾವು!ಕುಟುಂಬಸ್ಥರ ಆಕ್ರಂದನ
ಅಥಣಿ ಗ್ರಾಮೀಣ: ಪೋಲಿಯೋ ಲಸಿಕೆ ಹಾಗು ಇಂಜೆಕ್ಷನ್ ನೀಡಿದ್ದ ಒಂದೂವರೆ ತಿಂಗಳ ಹಸುಗೂಸು ಬಲಿಯಾಗಿರುವ ಘಟನೆ ಅಥಣಿ ತಾಲೂಕಿನ ಭರಮಖೋಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ದುಂಡಪ್ಪ ಬೇವನೂರ ಎಂಬುವವರಿಗೆ ಸೇರಿದ್ದ ಒಂದುವರೆ ತಿಂಗಳ ಮಗುವಿಗೆ ಗುರುವಾರ ನಡೆದ ಲಸಿಕಾ ಶಿಬಿರದಲ್ಲಿ ಮಗುವಿಗೆ 3 ಪೊಲೀಯೋ ಲಸಿಕೆ ನೀಡಲಾಗಿತ್ತು. ಆದರೆ ಏಕಾಏಕಿ ರಾತ್ರಿ ಮಗುವಿನಲ್ಲಿ ಜ್ವರ ಕಾಣಿಸಿಕೊಂಡಿದ್ದು,
ಮಗುವಿಗೆ ಜ್ವರ ಬಂದ ಹಿನ್ನೆಲೆ ಚಿಕಿತ್ಸೆಗೆಂದು ಅಥಣಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ನಂತರ
ಅಥಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುವಂತೆ ಖಾಸಗಿ ಆಸ್ಪತ್ರೆ ವೈದ್ಯರಿಂದ ಸೂಚಿಸಿದ್ದರು.ಸಾರ್ವಜನಿಕ ಆಸ್ಪತ್ರೆ ತಲುಪುವುದರೊಳಗಾಗಿ ಮಗು ಮೃತ ಪಟ್ಟಿದೆ.
ಮಗುವಿನ ಸಾವಿಗೆ ವ್ಯಾಕ್ಸಿನ್ ನೀಡಿದ ನರ್ಸ್ ಕಾರಣ ಎಂದು ಮೃತ ಮಗುವಿನ ಕುಟುಂಬಸ್ಥರು ಆರೋಪಿಸಿದ್ದಾರೆ
ನರ್ಸ್ ವಿರುದ್ಧ ಅಥಣಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲು.