ಕಲಬುರಗಿ: ಜಿಲ್ಲೆಯಲ್ಲಿ ಪಹಣಿಗೆ ಆಧಾರ್ ಜೋಡಣೆ ಮತ್ತು ದರಖಾಸ್ತು ಪೋಡಿ ವಿತರಣೆಗೆ ವೇಗ ನೀಡಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ರ‍್ಪಡಿಸಿದ್ದ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಸಭೆ, ಏ.೨೪ರಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯ ಪರ‍್ವಭಾವಿ ಸಭೆ ನಡೆಸಿ ಮಾತನಾಡಿ, ಪಹಣಿಗೆ ಆಧಾರ್ ಜೋಡಣೆ ಕರ‍್ಯ ಶೇ.೧೦೦ ಸಾಧಿಸಿದಲ್ಲಿ ರ‍್ಕಾರದಿಂದ ರೈತರಿಗೆ ಬೆಳೆ ಪರಿಹಾರ, ಬೆಳೆ ವಿಮೆ ಸೇರಿ ಇತರ ರ‍್ಕಾರಿ ಸವಲತ್ತು ಪಡೆಯಲು ಅನುಕೂಲವಾಗಲಿದೆ. ರ‍್ಕಾರದಿಂದ ಭೂಮಿ ಮಂಜೂರಾದರು ರೈತರ ಹೆಸರಿಗೆ ಇಲ್ಲದ ಪಹಣಿ ದರಖಾಸ್ತು ಪೋಡಿಯಡಿ ಸರಿಪಡಿಸಿ ವಿತರಿಸುವ ಕೆಲಸವಾಗಬೇಕು ಎಂದು ಹೇಳಿದರು.
ರ‍್ಕಾರಿ ಜಮೀನು ಸಂರಕ್ಷಿಸುವ ಲ್ಯಾಂಡ್ ಬೀಟ್ ಕರ‍್ಯಕ್ಕೆ ಚುರುಕು ನೀಡಬೇಕು. ಕಂದಾಯ ನ್ಯಾಯಾಲಯದಲ್ಲಿರುವ ಬಾಕಿ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂದು ತಹಸೀಲ್ದಾರ್ಗೆ ಡಿ.ಸಿ.ಸೂಚಿಸಿದರು. ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತ ಸಾಹಿತ್ಯ, ಪ್ರಭುರೆಡ್ಡಿ ಇತರರಿದ್ದರು.