ಜಿಲ್ಲೆ

ಪೋಕ್ಸೋ ಬಗ್ಗೆ ಅರಿವು ಅಗತ್ಯ

ಯಾದಗಿರಿ : ಮಕ್ಕಳಿಗೆ ಕಾನೂನಿನ ಬಗ್ಗೆ ಶಾಲಾ ಹಂತದಲ್ಲೇ ತಿಳಿವಳಿಕೆ ನೀಡುವ ಅಗತ್ಯವಿದೆ ಎಂದು ಹಿರಿಯ ಸಿವಿಲï ನ್ಯಾಯಾಧೀಶ ಸಾಹೀಲï ಅಹ್ಮದ್ ಎಸ್.ಕುನ್ನಿಭಾವಿ ಹೇಳಿದರು.

ನಗರದ ಕೋಲಿವಾಡ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿ¯್ಲÁ ಕಾನೂನು ಸೇವೆಗಳ ಪ್ರಾಧಿಕಾರ, ಜಿ¯್ಲÁ ವಕೀಲರ ಸಂಘ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಡಿ ಮಂಗಳವಾರ ಏರ್ಪಡಿಸಿದ್ದ ಕಾನೂನು ಅರಿವು-ನೆರವು ಕರ‍್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರೀತಿ-ಪ್ರೇಮದ ಮೋಹಕ್ಕೆ ಬಿದ್ದು ಇತ್ತೀಚಿನ ದಿನಗಳಲ್ಲಿ ಬಾಲ್ಯವಿವಾಹ ಮತ್ತು ಲೈಂಗಿಕ ಕಿರುಕುಳದಂಥ ಪ್ರಕರಣ ಹೆಚ್ಚಾಗುತ್ತಿವೆ. ಅದಕ್ಕಾಗಿ ಪೋಕ್ಸೋ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವುದು ಬಹಳ ಮುಖ್ಯವಾಗಿದೆ ಎಂದರು.

ಹಿರಿಯ ಸಿವಿಲï ನ್ಯಾಯಾಧೀಶ ರವೀಂದ್ರ ಹೊನೋಲೆ ಮಾತನಾಡಿ, ಭಾರತದ ಪ್ರಜೆಗಳಾದ ನಮಗೆ ಸಂವಿಧಾನ ಮೂಲಭೂತ ಹಕ್ಕು ನೀಡಿದೆ. ಮೂಲಭೂತ ಕರ್ತವ್ಯ ಪಾಲಿಸುವ ಮತ್ತು ಗೌರವಿಸುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ. ಕಾನೂನಿನ ಬಗ್ಗೆ ಮಕ್ಕಳಲ್ಲಿ ಪ್ರಜ್ಞೆ, ಕಡ್ಡಾಯ ಶಿP್ಷÀಣ ಜನ್ಮಸಿದ್ಧ ಹಕ್ಕುಗಳಾಗಿವೆ. ಉತ್ತಮ ರಾಷ್ಟç ನಿರ್ಮಾಣ ಮತ್ತು ದೇಶದ ಪ್ರಗತಿ ಮಕ್ಕಳ ಮೇಲೆ ಅವಲಂಬಿಸಿದೆ ಎಂದು ಹೇಳಿದರು.

ನ್ಯಾಯವಾದಿ ಬಿ.ಜಿ.ಪಾಟೀಲï ಮಾತನಾಡಿ, ಭಾರತದ ಸಂವಿಧಾನ ಎಲ್ಲ ಕಾನೂನುಗಳಿಗೆ ಮೂಲವಾಗಿದೆ. ಎಲ್ಲರೂ ಸಂವಿಧಾನದ ಮೌಲ್ಯವನ್ನು ಎತ್ತಿ ಹಿಡಿದು ಗೌರವಿಸಬೇಕು. ಜನನ ಮತ್ತು ಮರಣ ಕಾಯ್ದೆಯ ಮಹತ್ವ, ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ನಮ್ಮ ಆದ್ಯತೆಯಾಗಿದೆ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ ಪೂಜಾರಿ, ನ್ಯಾಯವಾದಿ ಅನಂತರಡ್ಡಿ, ಮುಖ್ಯಗುರು ಸುರೇಶ ಪೊಲೀಸ್, ಮಲ್ಲಿಕಾರ್ಜುನ ಮನಗನಾಳ ಇದ್ದರು.