ಜಿಲ್ಲೆ

ಪೋಕ್ಸೋ ಕಾಯ್ದೆ ಕುರಿತು ಕಾನೂನು ಅರಿವು

ಚಿತ್ರದುರ್ಗ: ನಮ್ಮ ಎಕ್ಸ್‌ಪರ್ಟ್ಸ್ ಪಿಯು ಕಾಲೇಜಿನಲ್ಲಿ ಬುಧವಾರ ಸೈಬರ್ ಲಾ ಮತ್ತು ಪೋಕ್ಸೋ ಕಾಯ್ದೆ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ನಡೆಯಿತು.

ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಉದ್ಘಾಟಿಸಿದರು. ಪ್ಯಾನಲ್ ವಕೀಲ ಮೊಹಮ್ಮದ್ ಷಂಶೇರ್ ಅಲಿ ಉಪನ್ಯಾಸ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ, ಉಪಾಧ್ಯಕ್ಷ ಬಿ.ಎಂ.ಅನಿಲ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಗಂಗಾಧರ್, ಕಾಲೇಜಿನ ಪ್ರಾಂಶುಪಾಲ ಶ್ರೀನಿವಾಸ್ ಪದೋರ್ತಿ, ಅಕಾಡೆಮಿಕ್ ಪ್ರಾಂಶುಪಾಲ ವಾಹಿದ್ ಖಾನ್, ಉಪನ್ಯಾಸಕರಾದ ಮಮತಾ, ಪದ್ಮಾ ಆರ್.ಜೈನ್ ಇತರರಿದ್ದರು.