ಹುಳಿಯಾರು: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ದೊಡ್ಡಬಿದರೆ ಹೊಸಹಟ್ಟಿ ತಾಂಡಾದ ದರ್ಶನ್ಗೆ 20 ವರ್ಷಗಳ ಜೈಲು ಶಿಕ್ಷೆ ಹಾಗೂ 2,50,000 ರೂ. ದಂಡ ವಿಧಿಸಿ ತುಮಕೂರು ಜಿಲ್ಲಾ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. 2022ರಲ್ಲಿ ತಾಂಡಾದ ಅಶೋಕ್ ನಾಯ್ಕ ಅಲಿಯಾಸ್ ಗಣೇಶ (24) ಹಾಗೂ ವರದಾ ಪುರದ ಕಟ್ಟೆ ದರ್ಶನ(26) ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎನ್ನಲಾಗಿತ್ತು. ಈ ಬಗ್ಗೆ ಹುಳಿಯಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ 1ನೇ ಆರೋಪಿ ಅಶೋಕ್ ನಾಯ್ಕ ವಿರುದ್ಧದ ಆರೋಪಕ್ಕೆ ಸಾಗಳ ಕೊರತೆಯಾಗಿದ್ದು,
2ನೇ ಆರೋಪಿ ದರ್ಶನ್ ವಿರುದ್ಧದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ತೀರ್ಪು ನೀಡಿದೆ. ಪೊಲೀಸ್ ವೃತ್ತ ನಿರೀಕ್ಷಕಿ ವಿ.ನಿರ್ಮಲಾ ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಿದ್ದರು. ವಿಶೇಷ ಸರ್ಕಾರಿ ಅಭಿಯೋಜಕಿ ಕೆ.ಎಸ್.ಆಶಾ ಕೆ.ಎಸ್ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.