ಜಿಲ್ಲೆ

ಪೊಳ್ಳು ಆಶ್ವಾಸನೆ

ಮಂಜುನಾಥ ಅಂಗಡಿ

ಧಾರವಾಡ: ಹಿಂದಿನ ಸಾಲಿನ ಬಜೆಟ್‌ನಲ್ಲಿ ಬಿಜೆಪಿ ಘೋಷಿಸಿದ್ದ 20 ಅಂಶಗಳನ್ನು ಅನುಷ್ಠಾನ ಮಾಡಿಲ್ಲ. ಹೀಗಾಗಿ ಹಿಂದಿನ ವರ್ಷದ ಬಜೆಟ್ ಮೇಲೆ ಚರ್ಚೆಗೆ ಅವಕಾಶ ಕೇಳಿದೆವು. ಚರ್ಚೆಗಾಗಿ ಪಟ್ಟು ಹಿಡಿದಾಗ ಕಾಂಗ್ರೆಸ್ ಸದಸ್ಯರಿಗೆ ಅಸಂವಿಧಾನಿಕ ಪದ ಬಳಸಿದರು. ಪ್ರತಿಪಕ್ಷದವರು ಹೋರಾಟ ಮಾಡುತ್ತಿದ್ದರೂ ಈ ವರ್ಷದ ಬಜೆಟ್ ಪ್ರತಿ ಓದಿದರು. ಚರ್ಚೆಗೆ ಅವಕಾಶ ನೀಡದಿರುವುದು ಸಮಂಜಸವಲ್ಲ. ಅವಳಿನಗರದ ಅಭಿವೃದ್ಧಿಗೆ ಪೂರಕವಾಗಬೇಕಿದ್ದ ಬಜೆಟ್ ಕೇವಲ ಪೊಳ್ಳು ಆಶ್ವಾಸನೆಯಾಗಿದೆ ಎಂದು ಪಾಲಿಕೆ ಪ್ರತಿಪಕ್ಷ ನಾಯಕ ರಾಜಶೇಖರ ಕಮತಿ ಪ್ರತಿಕ್ರಿಯಿಸಿದ್ದಾರೆ.