ಜಿಲ್ಲೆ

ಪೊಲೀಸ್ ವಶದಲ್ಲಿದ್ದ ವ್ಯಕ್ತಿ ಸಾವು : ಇಲಾಖೆ ಅಂತರಿಕ ತನಿಖಾ ವರದಿ ಬಳಿಕ ಕ್ರಮ

ಕಲಬುರಗಿ

ಇಲ್ಲಿನ ಅಶೋಕ ನಗರ ಪೊಲೀಸರು ವಿಚಾರಣೆಗೆ ಕರೆ ತರುವಾಗ ಕಸ್ಟಡಿಯಲ್ಲಿದ್ದ ಉದಯಕುಮಾರ ಸಾವಿನ ಘಟನೆ ಕುರಿತು ಇಲಾಖಾ ತನಿಖೆಯನ್ನು ಸಹ ನಡೆಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತರಾದ. ಚೇತನ್ ಆರ್ ತಿಳಿಸಿದ್ದಾರೆ.

ಅದಕ್ಕಾಗಿ ಹಿರಿಯ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ತನಿಖಾ ರಚನೆ‌‌ ಮಾಡಿ ಜವಾಬ್ದಾರಿ ವಹಿಸಲಾಗುವುದು. ತನಿಖಾ ವರದಿಯನ್ನು ಸಲ್ಲಿಸಿದ ನಂತರ ಮುಂದಿನ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಚೇತನ ಆರ್. ಪತ್ರಕರ್ತರಿಗೆ ತಿಳಿಸಿದ್ದಾರೆ. ಈಗಾಗಲೇ ಪ್ರಕರಣವನ್ನು ತನಿಖೆಗಾಗಿ ಸಿಐಡಿಗೆ ವಹಿಸಿಕೊಡಲಾಗಿದೆ. ಮುಂದಿನ ತನಿಖೆ ಅವರೇ ನಡೆಸಿ ಚಾರ್ಜ್ ಶೀಟ್ ಸಲ್ಲಿಸುವರು ಎಂದರು.