ಜಿಲ್ಲೆ

ಪೊಲೀಸ್​ ರ‍್ತವ್ಯಕ್ಕೆ ಅಡ್ಡಿ ಜಾಮೀನು ನಿರಾಕರಣೆ

ಕಲಬುರಗಿ: ವೈದ್ಯರ ರ‍್ನಿಲ$್ಯಕ್ಕೆ ಬಾಣಂತಿ ಮೃತಪಟ್ಟ ಟನೆ ಖಂಡಿಸಿ, ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುವ ವೇಳೆ ಪೊಲೀಸರ ರ‍್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪಿಗಳಿಗೆ ೫ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ನಿರಾಕರಣೆ ಮಾಡಿದೆ. ಏ.೧ರಂದು ನಗರ ಪೊಲೀಸ್​ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಲು ಮಾದಿಗ ಸಮಾಜ ಹೋರಾಟ ಸಮಿತಿಯಿಂದ ದಶರಥ ಕಲಗರ‍್ತಿ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ರಾಜು ಕಟ್ಟಿಮನಿ, ಪೊಲೀಸ್​ ಸಿಬ್ಬಂದಿ, ನಗರ ಪೊಲೀಸ್​ ಆಯುಕ್ತರು, ಜಿಲ್ಲಾಧಿಕಾರಿ ಬಗ್ಗೆ ಅವಾಚ್ಯವಾಗಿ ನಿಂದಿಸಿದ್ದಲ್ಲದೇ ಆರಕ ನಿರೀಕ ಸೋಮಲಿಂಗ ಕಿರದಳ್ಳಿ ವಿರುದ್ಧವೂ ವೈಯಕ್ತಿಕ ನಿಂದನೆ ಮಾಡಿದ್ದ. ಅಲ್ಲದೇ ಪೊಲೀಸರನ್ನು ತಳ್ಳಾಡಿ ರ‍್ತವ್ಯಕ್ಕೆ ಅಡ್ಡಿಪಡಿಸಿದ್ದ ಎಂದು ಬ್ರಹ್ಮಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿತ ರಾಜು ವಕಟ್ಟಿಮನಿ, ದಶರಥ ಕಲಗರ‍್ತಿ, ಪ್ರವಿಣ ಜಾಮೀನು ಕೋರಿ ರ‍್ಜಿ ಸಲ್ಲಿಸಿದ್ದರು. ವಾದ ವಿವಾದ ಆಲಿಸಿದ ನ್ಯಾಯಾಧೀಶ ಚಂದ್ರಶೇಖರ ಕರೋಶಿ ಅವರು ಜಾಮೀನು ತಿರಸ್ಕರಿಸಿದ್ದರು. ರ‍್ಕಾರದ ಪರ ಹಯ್ಯಾಳಪ್ಪ ಬಳಬಟ್ಟಿ ವಾದಿಸಿದ್ದರು.