ಕಲಬುರಗಿ: ಬಿದ್ದಾಪುರ ಕಾಲನಿಯ ಪೊಲೀಸ್ ಪೇದೆಯೊಬ್ಬರ ಮನೆಯ ಎದುರು ನಿಲ್ಲಿಸಿದ ಬೈಕ್ ಕಳ್ಳತನ ಮಾಡಿದ ಘಟನೆ ನಡೆದಿದೆ. ಸಿಎಆರ್ ಪೊಲೀಸ್ ಪೇದೆ ಬೈಲಪ್ಪ ಬೊಬಚಿ ಬೈಕ್ ಕಳೆದುಕೊಂಡವರು. ಬಿದ್ದಾಪುರ ಕಾಲನಿಯ ಆಂಜನೇಯ ಗುಡಿ ಹತ್ತಿರದ ಮನೆಯಲ್ಲಿ ವಾಸಿಸುತ್ತಿದ್ದು, ಸ್ವಗ್ರಾಮ ಬಸವಪಟ್ಟಣಕ್ಕೆ ಹೋಗುವ ವೇಳೆ ಮನೆ ಎದುರು ಬೈಕ್ ನಿಲ್ಲಿಸಿ ಹೋಗಿದ್ದಾರೆ. ಆದರೆ ವಾಪಸ್ ಬರುವ ಹೊತ್ತಿಗೆ ಬೈಕ್ ಕಳ್ಳತನವಾಗಿದೆ ಎಂದು ಪೇದೆ ಬೈಲಪ್ಪ ಬೊಬಚಿ ದೂರಿನಂತೆ ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.