ಹಾಸನ: ಹಸಮಣೆ ಏರಲು ಅಣಿಯಾಗಿದ್ದ ಪೊಲೀಸ್ ಕಾನ್ಸ್‌ಟೇಬಲ್‌ನ್ನು ಮಾರಕಾಸತ್ರಗಳಿಂದ ದುಷ್ಕರ್ಮಿಗಳು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ತಾಲೂಕಿನ ದುದ್ದ ಬಳಿ ಕಳೆದ ಸೋಮವಾರ ರಾತ್ರಿ ನಡೆದಿದೆ.
ಅರಸೀಕೆರೆ ತಾಲೂಕು ಬಾಗೇಶಪುರ ಗ್ರಾಮದ ವಿಜಯಕುಮಾರ್ ಎಂಬುವರ ಪುತ್ರ ಬಿ.ವಿ.ಹರೀಶ್(32) ಕೊಲೆಯಾದ ಹರೀಶ್ ಬೆಂಗಳೂರಿನ ಕೆಎಸ್‌ಐಎಸ್‌ಎಫ್‌ನಲ್ಲಿ ಕಾನ್ಸ್‌ಟೇಬಲ್‌ಆಗಿ ಸೇವೆ ಸಲ್ಲಿಸುತ್ತಿದ್ದ ಅವರನ್ನು ದುದ್ದ ಗ್ರಾಮದ ಹೊರವಲಯದಲ್ಲಿರುವ ಡಾಬಾ ಸರ್ಕಲ್‌ನ ರೈಲ್ವೆ ಬ್ರಿಡ್ಜ್ ಹತ್ತಿರ ಏಕಾಏಕಿ ಅಟ್ಯಾಕ್ ಮಾಡಿರುವ ದುಷ್ಕರ್ಮಿಗಳು ಕಣ್ಣಿಗೆ ಖಾರದಪುಡಿ ಎರಚಿ ಮನಸೋ ಇಚ್ಛೆ ಮಾರಣಾಂತಿಕ ಹಲ್ಲೆ ಮಾಡಿ ಜೀವ ತೆಗೆದು ಪರಾರಿಯಾಗಿದ್ದಾರೆ.ಸ್ಥಳಕ್ಕೆ ಎಸ್ಪಿ ಮಹಮ್ಮದ್ ಸುಜೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.
11 ಕ್ಕೆ ಮದುವೆ ನಿಶ್ವಯ:
ಹರೀಶ್‌ಗೆ ಇದೇ ತಿಂಗಳ 11 ರಂದು ಗಂಡಸಿ ಹೋಬಳಿಯ ಯುವತಿಯೊಂದಿಗೆ ಹಾಸನದ ಸಾಲಗಾಮೆ ರಸ್ತೆಯಲ್ಲಿರುವ ಆರ್.ಸಿ.ಕಲ್ಯಾಣ ಮಂಟಪದಲ್ಲಿ ವಿವಾಹ ಮಹೋತ್ಸವ ಮದುವೆ ನಿಶ್ಚಯ ಆಗಿತ್ತು.
ಮದುವೆ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ರಜೆ ಹಾಕಿ ನ.3 ರಂದು ಸ್ವಗ್ರಾಮಕ್ಕೆ ಬಂದಿದ್ದ ಮಧುಮಗ ಹರೀಶ್, ಸ್ನೇಹಿತರು, ಸಂಬಂಧಿಗಳಿಗೆ ಸೋಮವಾರ ತಮ್ಮ ಬೈಕಿನಲ್ಲಿ ಲಗ್ನ ಪತ್ರಿಕೆ ಹಂಚಿ ಮನೆಗೆ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ರಾತ್ರಿ 9.30 ರಿಂದ 10.20ರ ಸಮಯದಲ್ಲಿ ದುದ್ದ ಗ್ರಾಮದ ಡಾಬಾ ಸರ್ಕಲ್‌ನ ರೈಲ್ವೆ ಬ್ರಿಡ್ಜ್ ಹತ್ತಿರ ದುಷ್ಕರ್ಮಿಗಳು ಮಾರಕಾಸತ್ರಗಳಿಂದ ಕೊಲೆ ಪರಾರಿಯಾಗಿದ್ದಾರೆ.
ಮದುಮಗ ಹರೀಶ್ ಇನ್ನೊಂದು ವಾರದಲ್ಲಿ ತಮ್ಮ ವೈವಾಹಿಕ ಜೀವನಕ್ಕೆ ಕಾಲ ಇಡಬೇಕಾದ ಈತ ಈಗ ಸ್ಮಶಾನ ಸೇರುವಂಥಗಿರುವುದು ನಿಜಕ್ಕೂ ದುರ್ದೈವ.
ರಾತ್ರಿ 10.30 ರ ಸುಮಾರಿಗೆ ಹರೀಶ್ ಅವರ ಚಿಕ್ಕಪ್ಪನ ಮಗ ಮಂಜುನಾಥ್‌ಗೆ ದುದ್ದ-ಅರಸೀಕೆರೆ ರಸ್ತೆಯ ರೈಲ್ವೆ ಬ್ರಿಡ್ಜ್ ಹತ್ತಿರ ಹರೀಶ್ ಅವರನ್ನು ಯಾರೊ? ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎಂಬ ಮಾಹಿತಿ ತಿಳಿದಿದೆ.
ಕೂಡಲೇ ಗ್ರಾಮದ ಇತರರೊಂದಿಗೆ ಸ್ಥಳಕ್ಕೆ ಹೋಗಿ ನೋಡಿದಾಗ ಮೃತನ ಶವ ರಕ್ತಸಿಕ್ತವಾಗಿ ರೈಲ್ವೆ ಬ್ರಿಡ್ಜ್ ಸಮೀಪವಿರುವ ಕಾಯರ್ ಫ್ಯಾಕ್ಟರಿ ಮುಂಭಾಗ ರಸ್ತೆ ಮೇಲೆ ಬಿದ್ದಿತ್ತು.
ತಲೆಯ ಎಡಭಾಗ, ಹಿಂಭಾಗ ಹಾಗೂ ಮುಖಕ್ಕೆ ಹರಿತವಾದ ಆಯುಧದಿಂದ ಕೊಚ್ಚಿ ಕೊಲೆ ಮಾಡಿರುವುದು ಕಂಡು ಬಂದಿದ್ದು, ಮೃತದೇಹದ ಪಕ್ಕದಲ್ಲಿಯೇ ಬೈಕ್ ಹಾಗೂ ಖಾರದ ಪುಡಿ ಇರುವ ಪ್ಲಾಸ್ಟಿಕ್ ಕವರ್ ಸಹ ಬಿದ್ದಿದೆ. ಅಲ್ಲಿಗೆ ಯಾವುದೇ ದುರುದ್ದೇಶದಿಂದಲ್ಲೇ ಕೊಲೆ ನಡೆದಿದೆ ಎಂಬುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಕೊಲೆಗೆ ಅಕ್ರಮ ಸಂಬಂಧ ಕಾರಣ ಹೇಳಲಾಗುತ್ತಿದ್ದು,ಈ ಬಗ್ಗೆ ತನಿಖೆ ನಡೆಯುತ್ತಿದೆ.ಈ ಸಂಬಂಧ ದುದ್ದ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಶೀಘ್ರದಲ್ಲಿ ಆರೋಪಿಗಳ ಬಂಧನ:ಎಸ್‌ಪಿ
ತಾಲೂಕಿನ ದುದ್ದ ಗ್ರಾಮದಲ್ಲಿ ತಡರಾತ್ರಿ ಬೆಂಗಳೂರಿನ ಕೆಎಸ್‌ಐಎಸ್‌ಎಫ್ ನಲ್ಲಿ ಕಾನ್ಸ್‌ಟೇಬಲ್‌ಆಗಿದ್ದ ಹರೀಶ್ ಎಂಬತನನ್ನು ದುಷ್ಕರ್ಮಿಗಳು ಕೊಲೆ ಮಾಡಿ ಪದಾರಿ ಆಗಿದ್ದು, ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಎಸ್‌ಪಿ.ಮೊಹಮ್ಮದ್ ಸುಜಿತಾ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದುದ್ದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ನಡೆದಿದ್ದು, ಮೃತನ ಸಂಬಂಧಿಕರು ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುತ್ತಿದೆ. ಅಕ್ರಮ ಸಂಬಂಧವೂ ಅಥವಾ ಬೇರೆ ಯಾವುದೇ ಕಾರಣದಿಂದ ಕೊಲೆ ನಡೆದಿರಬಹುದು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.