ರಿಪ್ಪನ್‌ಪೇಟೆ: ಶಿವಮೊಗ್ಗ ಜಿಲ್ಲಾ ಪೊಲೀಸ್ ಕಾನೂನು ಸುವ್ಯವಸ್ಥೆ ಕಾಪಾಡುವ ಜತೆಗೆ, ಸಾಮಾಜಿಕ ಸೇವಾ ಕಾರ್ಯದಲ್ಲೂ ತೊಡಗಿಕೊಂಡಿದೆ ಎಂದು ಪಿಎಸ್‌ಐ ರಾಜುರೆಡ್ಡಿ ಹೇಳಿದರು.
ಶಿವಮೊಗ್ಗ ಜಿಲ್ಲಾ ಪೊಲೀಸ್, ಕಸ್ತೂರಿ ಕನ್ನಡ ಸಂಘ, ಕಟ್ಟಡ ಕಾರ್ಮಿಕರ ಸಂಘದಿಂದ ಪಟ್ಟಣದ ಹಿಂದು ಮಹಾಸಭಾ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ರಕ್ತದಾನ ಶಿಬಿರದ ಮೂಲಕ ರೋಗಿಗಳಿಗೆ ರಕ್ತದ ಕೊರತೆ ನೀಗಿಸುವ ಕೆಲಸ ಮಾಡುತ್ತಿದೆ. ಇಲಾಖೆಯ ಹಿರಿಯ ಅಕಾರಿಗಳ ಮಾರ್ಗದರ್ಶನದಲ್ಲಿ 2023ರಲ್ಲಿ ಆರಂಭವಾದ ಯೋಜನೆಯಲ್ಲಿ ಇದು 49ನೇ ಶಿಬಿರವಾಗಿದೆ. ಮನುಷ್ಯರಿಗೆ ತುರ್ತು ಸಂದರ್ಭಗಳಲ್ಲಿ ರಕ್ತ ಅಮೂಲ್ಯ. ದಾನಗಳಲ್ಲಿ ರಕ್ತದಾನ ಶ್ರೇಷ್ಠವಾಗಿದೆ. ಯುವಕರು ಇನ್ನೊಂದು ಜೀವಕ್ಕೆ ಸಹಕರಿಸುವ ಭಾವನೆದಿಂದ ರಕ್ತದಾನಕ್ಕೆ ಮುಂದಾಗಬೇಕು ಎಂದರು.
ಶಿಬಿರ ಆಯೋಜಕ ಮುಖ್ಯಪೇದೆ ಹಾಲೇಶಪ್ಪ, ಸೋಮಶೇಖರ್, ಪರಮೇಶ್, ಮುಖಂಡರಾದ ಸಂಜಯ್‌ಕುಮಾರ್, ಸುಂದರ್ ಬಾಬು, ಹಸನಬ್ಬ, ಶ್ರೀಧರ, ಆರ್.ಡಿ.ಶೀಲಾ, ಮಹಮ್ಮದ್ ಹುಸೇನ್, ಉಬೇದುಲ್ಲಾ ಷರೀಫ್, ಆನಂದ ಇತರರಿದ್ದರು.