ಬಂಗಾರಪೇಟೆ: ಕರ್ತವ್ಯ ರ್ನಿಲಕ್ಷ$್ಯ ಆರೋಪದಲ್ಲಿ ಪಟ್ಟಣದ ಪೊಲೀಸ್ ಇನ್ಸ್ಪೆಕ್ಟರ್ ನಂಜಪ್ಪ ಹಾಗೂ ಎಎಸ್ಐ ಶಿವಶಂಕರರೆಡ್ಡಿ ಅವರನ್ನು ಅಮಾನತು ಮಾಡಿ ಕೇಂದ್ರ ವಲಯ ಪೊಲೀಸ್ ಮಹಾ ನಿರೀಕ್ಷಕ ಲಾಭುರಾಮ್ ಆದೇಶ ಹೊರಡಿಸಿದ್ದಾರೆ.
ಪಟ್ಟಣದ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಎಂ.ನಂಜಪ್ಪ ಅವರು, ಅ.1ರಂದು ಠಾಣೆ ವ್ಯಾಪ್ತಿಯ ಎಚ್.ಪಿ.ನಗರದ 5ನೇ ಕ್ರಾಸ್ ಬಳಿ ವಯೋವೃದ್ಧ ಮಹಿಳೆ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದರು. ಈ ಬಗ್ಗೆ ಪೊಲೀಸ್ ಉಪಾಧೀಕ್ಷಕರಿಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸದರಿ ಕೃತ್ಯದ ಬಗ್ಗೆ ಬಂಗಾರಪೇಟೆ ಠಾಣಾಧಿಕಾರಿ ನಂಜಪ್ಪಗೆ ಪ್ರಕರಣ ದಾಖಲಿಸಲು ಸೂಚಿಸಿದ್ದರೂ ಸಹ ಹಿರಿಯ ಅಧಿಕಾರಿಗಳ ಆದೇಶ ಪಾಲಿಸದೆ ಕಡೆಗಣಿಸಿದ್ದರು.
ಅ.28ರ ರಾತ್ರಿ ಹೊರರಾಜ್ಯದ ಆರೋಪಿಯೊಬ್ಬನು ಗಾಂಜಾ ಮತ್ತಿನಲ್ಲಿದ್ದಾಗ ಅವರನ್ನು ರಾತ್ರಿ ಗಸ್ತಿನಲ್ಲಿದ್ದ ಪೇದೆ ಸಂತೋಷ್ ಎಂಬಾತ ಎಎಸ್ಐ ಶಿವಶಂಕರರೆಡ್ಡಿ ಮುಂದೆ ಹಾಜರುಪಡಿಸಿದ್ದು, ಅವರು ಹಾಗೂ ಇನ್ಸ್ಪೆಕ್ಟರ್ ನಂಜಪ್ಪ ಸೂಕ್ತ ವಿಚಾರಣೆ ಮಾಡದೆ ರ್ನಿಲಕ್ಷ$್ಯ ಮಾಡಿ ಆರೋಪಿಯನ್ನು ಬಿಟ್ಟು ಕಳುಹಿಸಿದ್ದರಿಂದ ಮರುದಿನ ಗಸ್ತಿನಲ್ಲಿದ್ದ ಮಹಿಳಾ ಎಎಸ್ಐ ಫರೀದಾಬಾನು ಮೇಲೆ ಆರೋಪಿ ಅಜಯ್ಸಿಂಗ್ ಚಾಕುವಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದರು.
ಈ ಮೂಲಕ ಕರ್ತವ್ಯದಲ್ಲಿ ರ್ನಿಲಕ್ಷ$್ಯ, ಬೇಜವಾಬ್ದಾರಿ ಮತ್ತು ದುರ್ನಡತೆ ತೋರಿರುವುದು ಕಂಡು ಬಂದಿದೆ ಎಂದು ಕೆಜಿಎಫ್ ಎಸ್ಪಿ ಕೇಂದ್ರ ವಲಯ ಪೊಲೀಸ್ ಮಹಾ ನಿರೀಕ್ಷಕರಿಗೆ ಇಬ್ಬರ ಮೇಲೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದ್ದು, ಅದರಂತೆ ಇಬ್ಬರನ್ನೂ ಸಹ ಕರ್ತವ್ಯ ರ್ನಿಲಕ್ಷ$್ಯದ ಆರೋಪದ ಮೇಲೆ ಅಮಾನತು ಮಾಡಲಾಗಿದೆ.