ಬಾಗಲಕೋಟೆ: ಪೊಲೀಸ್ ಅಧಿಕಾರಿ ಅಂತ ಹೇಳಿ ಒಂದು ಕೋಟಿ ರೂ. ಅಽಕ ವಸೂಲಿ ಮಾಡಿ ಪ್ರಕರಣ ಬೇಽಸಲಾಗಿದ್ದು, ಹಣ, ಕಾರು ಜಪ್ತಿ ಮಾಡಲಾಗಿದೆ. ಆರೋಪಿ ಪ್ರಕಾಶ ಮುಧೋಳ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಬೆಳಗಾವಿ ಉತ್ತರ ವಲಯದ ಐಜಿಪಿ ವಿಕಾಸಕುಮಾರ ವಿಕಾಸ ಹೇಳಿದರು.
ನಗರದ ಎಸ್ಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಗಲಕೋಟೆ ತಾಲೂಕಿನ ಸೀಮಿಕೇರಿ ಪು.ಕೇ ರಾಮಾರೂಢ ಮಠದ ಪರಮರಾಮಾರೂಢ ಸ್ವಾಮೀಜಿ ಅವರಿಗೆ ಮುಧೋಳ ತಾಲೂಕಿನ ಮಿರ್ಜಿ ಗ್ರಾಮದ ಪ್ರಕಾಶ ಮುಧೋಳ ಎನ್ನುವ ವ್ಯಕ್ತಿ ತಾನು ಪೊಲೀಸ್ ಅಧಿಕಾರಿ ಅಂತ ಹೇಳಿ ವಂಚನೆ ಮಾಡಿದ್ದಾನೆ. ದೂರು ದಾಖಲಾಗಿ ೨೪ ಗಂಟೆ ಯೊಳಗೆ ಪ್ರಕರಣ ಬೇಽಸಲಾಗಿದೆ ಎಂದರು.
ಪರಮ ಹಂಸ ಪರಮರಾಮರೂಢ ಸ್ವಾಮೀಜಿ ಅವರಿಗೆ ಅನಾಮಿಕನಾಗಿ ಕರೆ ಮಾಡಿದ್ದಾನೆ. ಮೊದಲು ಎರಡು ದಿನ ಶ್ರೀಗಳು ಮೊಬೈಲ್ ಕರೆಗೆ ಸಿಕ್ಕಿರಲಿಲ್ಲ. ನಂತರ ಕಲಾದಗಿ ಪೊಲೀಸ್ ಠಾಣೆಗೆ ಕರೆ ಮಾಡಿ ಪೊಲೀಸ್ ಅಧಿಕಾರಿ ಅಂತ ಹೇಳಿ ಶ್ರೀಗಳಿಗೆ ಸಂಪರ್ಕ ಮಾಡಿದ್ದಾನೆ. ನಂತರ ತಮ್ಮ ಮೇಲೆ ಬೆಂಗಳೂರಿನಲ್ಲಿ ಪ್ರಮುಖ ಪ್ರಕರಣ ಇದೇ, ಇದರಿಂದ ತಮಗೆ ಸಮಸ್ಯೆ ಉಂಟಾಗಲಿದೆ ಅಂತ ಒಳ ಸಂಚು ರೂಪಿಸಿದ್ದಾನೆ. ಇದರಿಂದ ಆತಂಕಗೊಂಡ ಸ್ವಾಮೀಜಿ ತಮ್ಮ ಭಕ್ತರಿಂದ ಹಣ ಸಂಗ್ರಹಿಸಿ ಸೆ.೧೬ ರಂದು ಬೆಂಗಳೂರಿಗೆ ತೆರಳಿ ೬೧ ಲಕ್ಷ ರೂ. ಹಸ್ತಾಂತರ ಮಾಡಿದ್ದಾರೆ. ನಂತರ ಸ್ವಾಮೀಜಿ ಬಾಗಲಕೋಟೆ ತಾಲೂಕಿನಲ್ಲಿರುವ ತಮ್ಮ ಮಠಕ್ಕೆ ಆಗಮಿಸಿದ್ದಾರೆ.
ಅಂದೇ ಇನ್ನು ಬಾಕಿ ಹಣ ನೀಡಲು ಆರೋಪಿ ಪ್ರಕಾಶ ಶ್ರೀಗಳಿಗೆ ಕರೆ ಮಾಡಿ ಹೆದರಿಸಿದ್ದಾನೆ. ಮತ್ತೆ ಶ್ರೀಗಳು ಹಣ ಸಂಗ್ರಹಿಸಿ ೩೯ ಲಕ್ಷ ರೂ. ಸೆ.೨೦ ರಂದು ಹುಬ್ಬಳ್ಳಿಗೆ ತೆರಳಿ ನೀಡಿದ್ದಾರೆ. ಇಷ್ಟಕ್ಕೆ ಪ್ರಕರಣ ಮುಗಿದಿಲ್ಲ. ಮತ್ತೆ ಮತ್ತೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಇದನ್ನು ಅನುಮಾನಗೊಂಡ ಸ್ವಾಮೀಜಿ ಅವರು ಆರೋಪಿ ಕಾರು, ಮೊಬೈಲ್ ನಂಬರ್ ಪರಿಶೀಲನೆ ಮಾಡಿದ್ದಾರೆ. ಪೊಲೀಸ್ ಇಲಾಖೆ ಸೇರಿದ ವ್ಯಕ್ತಿಯಲ್ಲ ಅಂತ ಖಚಿತ ಪಡಿಸಿಕೊಂಡಿದ್ದಾರೆ. ನಂತರ ಸಿಇಎನ್ ಬಾಗಲಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ವಿಚಾರಣೆ ಆರಂಭಿಸಿದ ಪೊಲೀಸ್ ಇಲಾಖೆ ಆರೋಪಿತನ ಮನೆಯಿಂದ ೮೨.೧೯,೫೦೦ ನಗದು ಹಣ ಜಪ್ತಿ ಮಾಡಿದ್ದಾರೆ. ಇನೋವಾ ಕಾರು, ವಿವೋ , ಸ್ಯಾಮಸಂಗ, ಎನ್ ಪ್ಲಸ್ ಕಂಪನಿಯ ತಲಾ ಒಂದು ಒಟ್ಟು ಮೂರು ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಇನ್ನು ಆರೋಪಿತ ಪ್ರಕಾಶ ಶ್ರೀಗಳ ಕಡೆಯಿಂದ ಎರಡು ಖಾಲಿ ಹಾಳೆಯಲ್ಲಿ ಸಹಿ, ಎರಡು ಖಾಲಿ ಚಕ್, ಎರಡು ಬಾಂಡ, ಎರಡು ವಕಾಲತ್ತು ಸಹಿ ಫಾರ್ಮ ಪಡೆದುಕೊಂಡಿದ್ದ, ಅವುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ಆರೋಪಿ ಪ್ರಕಾಶ ಮುಧೋಳ ಇತನು ಮುಧೋಳ ತಾಲೂಕಿನ ಮಿರ್ಜಿ ಗ್ರಾಮದವನು. ರಾಮದುರ್ಗ ವಿಧಾನಸಭೆ ಕ್ಷೇತ್ರಕ್ಕೆ ೨೦೨೩ ರ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದನು. ವಂಚನೆ, ಮೋಸ ಸೇರಿದಂತೆ ವಿವಿಧೆಡೆ ೧೨ ಪ್ರಕರಣದಲ್ಲಿ ಇತನು ಭಾಗಿಯಾಗಿದ್ದು, ಪ್ರಕರಣ ದಾಖಲಾಗಿವೆ. ಇನ್ನು ಶ್ರೀಗಳಿಂದ ಪಡೆದುಕೊಂಡಿದ್ದ ಹಣದಲ್ಲಿ ತಾನು ಸಾಲದ ರೂಪದಲ್ಲಿ ಹುಬ್ಭಳ್ಳಿಯ ಕಾಂತಿದಾಸ ಕಿರಣ ವೈಷ್ಣವ ಎಂಬುವವನಿಂದ ಪಡೆದಿದ್ದ ೫ ಲಕ್ಷ ರೂ. ವಾಪಸ್ ನೀಡಿದ್ದನು. ಅವರಿಂದ ಕೂಡಾ ಹಣ ವಾಪಸ್ ಪಡೆದುಕೊಳ್ಳಲಾಗಿದೆ. ಕೃತ್ಯಕ್ಕೆ ಬಳಸಿದ ಕೆ.ಎ.೬೩ ಎನ್.೪೬೭೦ ಹುಂಡೈ ಕಾರು ಕೂಡಾ ಜಪ್ತಿ ಮಾಡಲಾಗಿದೆ. ಪ್ರಕರಣ ದಾಖಲಾಗಿ ೨೪ ಗಂಟೆ ಯೊಳಗೆ ಆರೋಪಿತನಿಂದ ೮೭೧೯೫೦೦ ಹಣ ಜಪ್ತಿ ಮಾಡಿ ಬಂಽಸಲಾಗಿದೆ. ನಮ್ಮ ಇಲಾಖೆ ಅಽಕಾರಿಗಳು, ಸಿಬ್ಬಂದಿಗಳು ಈ ಕಾರ್ಯಾಚರಣೆ ಚುರುಕಾಗಿ ಮಾಡಿದ್ದು ಸಂತೋಷ ತಂದಿದೆ ಎಂದು ಹೇಳಿದರು.
ಯಾವ ಕಾರಣಕ್ಕೆ ಸ್ವಾಮೀಜಿ ಹಣ ನೀಡಿದರು ಎನ್ನುವುದು ಪ್ರಕರಣ ವಿಚಾರಣೆ ಬಳಿಕ ಬೆಳಕಿಗೆ ಬರಲಿದೆ. ಆರೋಪಿ ಪ್ರಕಾಶ ಅನಽಕೃತವಾಗಿ ತನ್ನ ಕಾರು ಬದಲಾಯಿಸಿರುವುದು ಬರಲಿದೆ. ಕಾನೂನು ಪ್ರಕ್ರಿಯೆ ಅನುಸಾರ ಶ್ರೀಗಳಿಗೆ ಹಣ ತಲುಪಲಿದೆ. ಹನಿ ಟ್ರ‍್ಯಾಪ್, ಆಸ್ತಿ ಸೇರಿದಂತೆ ಯಾವುದೇ ವಿಷಯ ಖಚಿತವಾಗಿಲ್ಲ ಎಂದು ತಿಳಿಸಿದರು.
ಎಸ್ಪಿ ಅಮರನಾಥ ರೆಡ್ಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಪ್ರಸನ್ನ ದೇಸಾಯಿ, ಮಹಾಂತೇಶ ಜಿದ್ದಿ ಇತರರು ಇದ್ದರು.