ಬಾಳೆಹೊನ್ನೂರು ಸಮೀಪದ ಮಹಲ್ಗೋಡು ಸೇತುವೆ ಅಡಿ ಸಿಲುಕಿದ್ದ ಕಸಕಡ್ಡಿಯನ್ನು ಸ್ವಯಂ ಸೇವಕರು ಸ್ವಚ್ಛಗೊಳಿಸಿದರು. 
ಜಿಲ್ಲೆ

ಪೊಲೀಸರು, ಸ್ವಯಂಸೇವಕರಿಂದ ಸೇತುವೆ ಸ್ವಚ್ಛತೆ

ಬಾಳೆಹೊನ್ನೂರು: ಮಾಗುಂಡಿ ಗ್ರಾಪಂ ವ್ಯಾಪ್ತಿಯ ಮಹಲ್ಗೋಡು ಸೇತುವೆಯ ಅಡಿಯಲ್ಲಿದ್ದ ಕಸಕಡ್ಡಿಯನ್ನು ಪೊಲೀಸ್ ಇಲಾಖೆ ಹಾಗೂ ಸ್ವಯಂ ಸೇವಕರಿಂದ ಸ್ವಚ್ಛಗೊಳಿಸಲಾಯಿತು.

ಪ್ರತಿವರ್ಷ ಮಳೆಗಾಲದಲ್ಲಿ ಮಹಲ್ಗೋಡು ಸೇತುವೆ ಅಡಿ ಕಸಕಡ್ಡಿ ತುಂಬಿಕೊಂಡು ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ರಸ್ತೆ ಮೇಲೆ ಹರಿದು ವಾಹನ ಸಂಚಾರ ಕಡಿತಗೊಳ್ಳುತಿತ್ತು. ಇದರಿಂದ ಕಳಸ, ಬಾಳೆಹೊನ್ನೂರು ನಡುವಿನ ಸಂಪರ್ಕ ಕಡಿತಗೊಂಡು ವಾಹನ ಸವಾರರು, ಪ್ರಯಾಣಿಕರು ತೀವ್ರ ತೊಂದರೆಗೆ ಒಳಗಾಗುತ್ತಿದ್ದರು. ಈ ಬಗ್ಗೆ ಸ್ಥಳೀಯರು ಪಿಎಸ್‌ಐ ವಿ.ಟಿ.ದಿಲೀಪ್‌ಕುಮಾರ್ ಗಮನ ಸೆಳೆದ ಹಿನ್ನೆಲೆಯಲ್ಲಿ ಸ್ವಯಂ ಸೇವರು, ಜೆಸಿಬಿ ನೆರವಿನಿಂದ ಸೇತುವೆ ಅಡಿ ಕಟ್ಟಿಕೊಂಡಿದ್ದ ಕಸಕಡ್ಡಿಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಿದರು.