ಜಿಲ್ಲೆ

ಪೊಲೀಸರನ್ನು ನಿಂದಿಸಿದವರ ಬಂಧನ

ತುಮಕೂರು: ಹೆಲ್ಮೆಟ್​ ಧರಿಸದೆ ಒಂದೇ ದ್ವಿಚಕ್ರ ವಾಹನದಲ್ಲಿ ನಾಲ್ವರು ತೆರಳುತ್ತಿದ್ದುದ್ದನ್ನು ಪ್ರಶ್ನಿಸಿದ ಪೊಲೀಸರನ್ನೇ ಅವಾಚ್ಯವಾಗಿ ನಿಂದಿಸಿದ್ದಲ್ಲದೆ ಕೆಳಗೆ ತಳ್ಳಿ ಬೀಳಿಸಿ ದುರ್ನಡತೆ ತೋರಿದ್ದ ನಾಲ್ವರನ್ನು ಬಂಧಿಸಲಾಗಿದೆ. ಸದಾಶಿವನಗರದ ನಿವಾಸಿಗಳಾದ ಮೊಹಮ್ಮದ್​ ಇಸ್ಮಾಯಿಲ್​ (20), ಮೊಹಮ್ಮದ್​ ಅಬ್ಬಾಸ್​ (21), ಅದ್ನಾನ್​ ಅಹ್ಮದ್​ (22), ಮೊಹಮ್ಮದ್​ ಅಲಿ (19) ಬಂಧಿತರು. ಮಂಗಳವಾರ ಸಂಜೆ ರಿಂಗ್​ ರಸ್ತೆಯಲ್ಲಿ ಬೈಕಿನಲ್ಲಿ ನಾಲ್ವರು ತೆರಳುತ್ತಿದ್ದುದನ್ನು ತಡೆದು ಪ್ರಶ್ನಿಸಿದ ಪೊಲೀಸರನ್ನು ಅವಾಚ್ಯವಾಗಿ ನಿಂದಿಸಿದ್ದಲ್ಲದೆ, ನೂಕಿ ಕೆಳಗೆ ಬೀಳಿಸಿದ್ದಾರೆ. ಪೊಲೀಸರ ಮೇಲೆ ಹಲ್ಲೆ ನಡೆಸಿರುವಂತೆ ಮೊಬೈಲ್​ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಮಾಡಿದ್ದಾರೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ನಾಲ್ವರನ್ನು ನ್ಯಾಯಾಲಯ ಮುಂದೆ ಹಾಜರುಪಡಿಸಲಾಗಿದ್ದು ಬೈಕ್​ ವಶಕ್ಕೆ ಪಡೆಯಲಾಗಿದೆ.