ಕೋಲಾರ: ಪ್ರೀತಿಸಿದ ಹುಡುಗಿಯನ್ನು ವಿವಾಹವಾಗಲು ಹುಡುಗ ಒಪ್ಪದ ಕಾರಣಕ್ಕೆ ಕಾನೂನು ಕೈಗೆತ್ತಿಕೊಂಡು ಪೊಲೀಸರ ಸೋಗಿನಲ್ಲಿ ಹುಡುಗನನ್ನು ಅಪಹರಣ ಮಾಡಿದ ಆರೋಪದ ಮೇಲೆ ಕೋಲಾರದ ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಸಂದೇಶ್ ಹಾಗೂ ಕಾರು ಚಾಲಕ ಅನಿಲ್ ಎಂಬುವರನ್ನು ಬೆಂಗಳೂರಿನ ರಾಜಾನುಕುಂಟೆ ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್ ತಿಳಿಸಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ರುನಾಥಪುರ ನಿವಾಸಿ ಸಂತೋಷ್ (25) ಹಾಗೂ ಕೋಲಾರ ತಾಲೂಕಿನ ನರಸಾಪುರ ಬಳಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಪ್ರೀತಿಸುತ್ತಿದ್ದರು. ಈ ಇಬ್ಬರೂ ಮೂಲತ@ ಬಾಗಲಕೋಟೆ ಜಿಲ್ಲೆಯವರು. ಮದುವೆ ವಿಚಾರವನ್ನು ಯುವತಿ ಪ್ರಸ್ತಾಪಿಸಿದಾಗ ಸಂತೋಷ್ ನಿರಾಕರಿಸಿದ್ದ. ನಂತರ ಆಕೆ ನಗರದ ಅಂಬೇಡ್ಕರ್ ನಗರದ ವಾಸಿ ಕೆ.ಎಂ.ಸಂದೇಶ್ ಎಂಬುವವರನ್ನು ಸಂರ್ಪಕಿಸಿ ಮದುವೆ ಮಾಡಿಸುವಂತೆ ಸಹಾಯ ಕೋರಿದ್ದಳು.
ೆ.12ರಂದು ಕೆಲಸಕ್ಕೆ ರಜೆ ಇರುವುದರಿಂದ ಸಂತೋಷ್ ತನ್ನ ಸ್ನೇಹಿತರೊಂದಿಗೆ ಬಟ್ಟೆ ಖರೀದಿಗೆ ರಾಜಾನುಕುಂಟೆಗೆ ಹೋಗಿದ್ದ. ರಾಜಾನುಕುಂಟೆಯ ಪಿ.ಕೆ.ಮೆನ್ಸ್ ವೇರ್ ಬಳಿಯಿದ್ದ ಸಂತೋಷ್ ಬಳಿ ಬಂದ ಆರೋಪಿಗಳು ನಾವು ದೊಡ್ಡಬಳ್ಳಾಪುರ ಪೊಲೀಸರು ಎಂದು ಪರಿಚಯ ಮಾಡಿಕೊಂಡು ನಿನ್ನನ್ನು ವಿಚಾರಣೆ ಮಾಡಬೇಕಾಗಿದೆ ಬಾ ಎಂದು ಬಲವಂತವಾಗಿ ಕಾರಿನಲ್ಲಿ ಹತ್ತಿಸಿಕೊಂಡು ಅಪಹರಣ ಮಾಡಿದ್ದರು. ಬಳಿಕ ಸಂತೋಷ್ನನ್ನು ಕೋಲಾರಕ್ಕೆ ಕರೆತಂದ ಸಂದೇಶ್ ತನ್ನ ಮನೆಯಲ್ಲಿ ಇರಿಸಿಕೊಂಡಿದ್ದ. ಇತ್ತ ಸಂತೋಷ್ ಮನೆಗೆ ಬಾರದ ಕಾರಣ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿತ್ತು.
ರಾಜಾನಕುಂಟೆ ಪೊಲೀಸರು ಸಂದೇಶ್ ಸುಳಿವನ್ನು ಪತ್ತೆ ಹಚ್ಚಿದಾಗ ಕೋಲಾರದಲ್ಲಿ ಇರುವ ಮಾಹಿತಿ ಲಭ್ಯವಾಯಿತು. ನಂತರ ರಾಜಾನುಕುಂಟೆ ಪೊಲೀಸರು ಕೋಲಾರ ನಗರ ಪೊಲೀಸರ ಸಹಕಾರದಿಂದ ಸಂದೇಶ್ ಮನೆಮೇಲೆ ದಾಳಿ ಮಾಡಿ ಸಂತೋಷ್ನನ್ನು ರಸಿ ಅಪಹರಣ ಕೃತ್ಯಕ್ಕೆ ಬಳಸಲಾಗಿದ್ದ ಕಾರನ್ನು ವಶಕ್ಕೆ ಪಡೆದುಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಎಸ್ಪಿ ವಿವರಿಸಿದರು.
ಅಪಹರಣದ ಆರೋಪಿ ಸಂದೇಶ್, ಅಂಬೇಡ್ಕರ್ ಸೇವಾ ಸಮಿತಿ ಎಂಬ ಸಂವನ್ನು ಸ್ಥಾಪನೆ ಮಾಡಿ ಅದರ ಅಧ್ಯಕ್ಷನೆಂದು ಹೇಳಿಕೊಂಡು ಭೂ ಒತ್ತುವರಿ ಅಥವಾ ಇನ್ನಿತರ ಕಾರಣ ಹುಡುಕಿಕೊಂಡು ಸಾರ್ವಜನಿಕರು ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಬೆದರಿಸಿ ಅವರ ವಿರುದ್ಧ ಪ್ರತಿಭಟನೆ ಮಾಡುವುದಾಗಿ ಹೆದರಿಸಿ ಹಣವನ್ನು ವಸೂಲಿ ಮಾಡುವುದನ್ನೇ ಚಾಳಿಯನ್ನಾಗಿ ಮಾಡಿಕೊಂಡಿದ್ದ. ಖಾಸಗಿ ಆಸ್ಪತ್ರೆಗಳಲ್ಲಿ ದಲಿತ ಸಮುದಾಯದ ರೋಗಿಗಳು ಮೃತಪಟ್ಟಾಗ ಆಸ್ಪತ್ರೆಯ ಎದುರು ಪ್ರತಿಭಟನೆಯನ್ನು ನಡೆಸಿ ಆಸ್ಪತ್ರೆಯ ವೈದ್ಯರನ್ನು, ವ್ಯವಸ್ಥಾಪಕರನ್ನು ಬೆದರಿಸಿ ಅವರಿಂದ ಹಣ ವಸೂಲಿ ಮಾಡುತ್ತಿದ್ದ. ಈ ಹಿಂದೆ ಕೋಲಾರ ಮತ್ತು ಕೆಜಿಎಫ್ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಪ್ರಕರಣಗಳು ದಾಖಲಾಗಿವೆ ಎಂದರು.
112ಕ್ಕೆ ಕರೆ ಮಾಡಿ: ಪೊಲೀಸರ ಹೆಸರಿನಲ್ಲಿ ಯಾರೇ ಆದರೂ ಕಾನೂನು ಕೈಗೆತ್ತಿಕೊಂಡಲ್ಲಿ ಇದೇ ರೀತಿ ಶಿೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿರುವ ಎಸ್ಪಿ ನಾರಾಯಣ್ ಅವರು ತಪ್ಪು ಮಾಡಿ ಸಂಟನೆಗಳನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಸಮಾಜದ್ರೋಹಿ ಕೃತ್ಯಗಳಲ್ಲಿ ಭಾಗವಹಿಸಬಾರದು. ಸಾರ್ವಜನಿಕರು ಯಾವುದೇ ರೀತಿಯ ತುರ್ತು ಸಂದರ್ಭದಲ್ಲಿ 112 ಗೆ ಕರೆ ಮಾಡಿದರೆ ಪೊಲೀಸರು ತಕ್ಷಣ ಧಾವಿಸುತ್ತಾರೆ ಎಂದು ಎಸ್ಪಿ ನಾರಾಯಣ್ ತಿಳಿಸಿದರು.