ಚಿಕ್ಕಬಳ್ಳಾಪುರ: ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಸದಾ ಕೆಲಸದ ಒತ್ತಡದಲ್ಲಿರುವ ಪೊಲೀಸರು ವಿವಿಧ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸುವ ಮೂಲಕ ಗಮನ ಸೆಳೆದರು. ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೆಡಾಕೂಟದಲ್ಲಿ ಹಿರಿಯ ಕಿರಿಯ ಸಿಬ್ಬಂದಿ ಎನ್ನದೇ ಪರಸ್ಪರ ಪೈಪೋಟಿಯಲ್ಲಿ ಗೆಲವು ಸಾಧಿಸಲು ಕಸರತ್ತು ನಡೆಸಿದರು.
ಕ್ರೆಡಾಕೂಟಕ್ಕೆ ಜಿಲ್ಲಾಧಿಕಾರಿ ಆರ್.ಲತಾ ಗುಂಡು ಎಸೆಯುವ ಮೂಲಕ ಚಾಲನೆ ನೀಡಿದರು. ಇದಕ್ಕೂ ಮೊದಲು ಜಿಲ್ಲೆಯ ವಿವಿಧ ಪೋಲೀಸ್ ತುಕಡಿಗಳಿಂದ ಪಥ ಸಂಚಲನದ ಮೂಲಕ ಗೌರವ ವಂದನೆ ಸ್ವೀಕರಿಸಿ ಮಾತನಾಡಿ, ಶಿಸ್ತುಬದ್ಧ ಪೊಲೀಸ್ ಇಲಾಖೆ ಎ್ಲ ಇಲಾಖೆಗಳಿಗೂ ಮಾತೃಇಲಾಖೆ ಎನ್ನಬಹುದು. ಪೊಲೀಸರ ಕರ್ತವ್ಯನಿಷ್ಠೆ ಸಮಾಜದ ಸುಸ್ಥಿತಿಗೆ ಕಾರಣವಾಗಿದೆ. ಇಂತಹ ಇಲಾಖೆಯಲ್ಲಿ ಕೆಲಸ ಮಾಡುವುದೇ ಪುಣ್ಯ. ದೊಂಬಿ ಗಲಾಟೆ ನಿಗ್ರಹ ಸೇರಿ ಶಾಂತಿ ಪರಿಪಾಲನೆ ಮಾಡುವ ಪೊಲೀಸರ ಸೇವಾ ಕಾರ್ಯಕ್ಕೆ ಬೆಲೆಕಟ್ಟಲಾಗದು ಎಂದರು.
ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದಾಗಿ ಹೇಳಿಕೊಳ್ಳುವುದು ಹೆಮ್ಮೆಯ ವಿಚಾರ ಎಂದು ಡಿಸಿ ತಿಳಿಸಿದರು. ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ದೈಹಿಕ ಹಾಗೂ ಮಾನಸಿಕ ಅಸಮತೋಲನವನ್ನು ದೂರ ಮಾಡಬಹುದಾಗಿದೆ ಎಂದರು.
ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕಾದರೆ ಮಾನಸಿಕ ಸಾಮರ್ಥ್ಯ ಜತೆಗೆ ದಹಿಕ ಸಾಮರ್ಥ್ಯವೂ ಮುಖ್ಯವಾಗಿರುತ್ತದೆ. ಇದಕ್ಕೆ ಕ್ರೆಡೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಜಿ.ಪಂ.ಸಿಇಒ ಪಿ.ಶಿವಶಂಕರ್, ಡಿವೈಎಸ್ಪಿ ವಾಸುದೇವ್ ಇನ್ನಿತರರು ಇದ್ದರು.