ಜಿಲ್ಲೆ

ಪೊಲೀಸರ ಸಂಚಾರಕ್ಕೆ ವಾಹನಗಳಿಲ್ಲ

ಕೊಳ್ಳೇಗಾಲ: ಕೊಳ್ಳೇಗಾಲ ಉಪವಿಭಾಗದ ವಿವಿಧ ಪೊಲೀಸ್ ಠಾಣೆಗಳಲ್ಲಿ ಇಲಾಖೆ ವಾಹನಗಳಿಲ್ಲದೆ ಆರಕ್ಷಕ ಉಪ ನಿರೀಕ್ಷಕರು ಸ್ವಂತ ಹಾಗೂ ಬಾಡಿಗೆ ವಾಹನಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯ ಕಾನೂನು ಸುವ್ಯವಸ್ಥೆಯ ವಿಭಾಗದ ಆರಕ್ಷಕ ಉಪ ನಿರೀಕ್ಷಕರು, ಯಳಂದೂರು ಪಟ್ಟಣ ಪೊಲೀಸ್ ಠಾಣೆಯ ಉಉ ಆರೀಕ್ಷಕರು, ಹನೂರು ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರು ಹಾಗೂ ರಾಮಾಪುರ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರಿಗೆ ಇಲಾಖೆ ವಾಹನಗಳಿಲ್ಲ.

ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಬಿ.ವಿ ವರ್ಷಾ ಅವರು ಕಳೆದ ಒಂದೂವರೆ ತಿಂಗಳಿನಿಂದ ಖಾಸಗಿ ಕಾರನ್ನು ಬಾಡಿಗೆ ಪಡೆದು ಇಲಾಖೆಯ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಾಮಾಪುರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಎಂ.ಎನ್.ಈಶ್ವರ್, ಹನೂರು ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಿ.ಮಂಜುನಾಥ್ ಪ್ರಸಾದ್, ಯಳಂದೂರು ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಆಕಾಶ್ ಅವರಿಗೆ ಇಲಾಖೆ ವಾಹನಗಳ ಲಭ್ಯತೆ ಇಲ್ಲದೆ ಸ್ವಂತ ಕಾರನ್ನು ಪೊಲೀಸ್ ಕೆಲಸಕ್ಕೆ ಬಳಕೆ ಮಾಡುತ್ತಿದ್ದಾರೆ. ಕೆಲವು ವೇಳೆ ಇಲಾಖೆಯ ದ್ವಿಚಕ್ರ ವಾಹನ ಹಾಗೂ ಪೊಲೀಸ್ ಹೆದ್ದಾರಿ ಗಸ್ತು ವಾಹನಗಳನ್ನು ಬಳಕೆ ಮಾಡಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಬಾಡಿಗೆ ಕಾರಿನಲ್ಲಿಯೇ ಎಸ್ಕಾರ್ಟ್ ಸೇವೆ:

ರಾಜಕಾರಣಿಗಳು, ಅತಿ ಗಣ್ಯರು ಪೊಲೀಸ್ ಠಾಣಾ ವ್ಯಾಪ್ತಿಗೆ ಆಗಮಿಸಿದರೆ ಪೊಲೀಸರು ಸೂಕ್ತ ಬಂದೋಬಸ್ತ್ ವ್ಯವಸ್ಥೆ ನೀಡುವ ಜತೆಗೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಹಾಗದ ರೀತಿ ನೋಡಿಕೊಳ್ಳುವ ಜವಾಬ್ದಾರಿ ಹೊಂದಿರುತ್ತಾರೆ. ಆಯಾ ಪೊಲೀಸ್ ಠಾಣೆಯ ಸರಹದ್ದಿಗೆ ಸಚಿವರು, ಸಂಸದರು, ಶಾಸಕರು ಇನ್ನಿತರ ಗಣ್ಯರು ವಿವಿಧ ಕಾರ್ಯ ನಿಮಿತ್ತ ಆಗಮಿಸಿದರ್ೆ ಎಸ್ಕ ರ್ಟ್ ್ನೀಡಬೇಕಿದೆ. ಈ ವೇಳೆ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯ ಕಾನೂನು ಸುವ್ಯವಸ್ಥೆ ವಿಭಾಗದ ಸಬ್ ಇನ್ಸ್‌ಪೆಕ್ಟರ್ ಬಾಡಿಗೆ ಕಾರಿನಲ್ಲಿಯೇ ಎಸ್ಕಾರ್ಟ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಅಂತೆಯೇ, ಯಳಂದೂರು ಪಟ್ಟ ಣ ಪೊಲೀಸ್ ಠಾಣೆ, ರಾಮಾಪುರ ಪೊಲೀಸ್ ಠಾಣೆ, ಹನೂರು ಪಟ್ಟಣ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್‌ಗಳು ಸ್ವಂತ ಕಾರಿನಲ್ಲಿ ಅಥವಾ ಹಿರಿಯ ಅಧಿಕಾರಿಗಳ ವಾಹನಗಳಲ್ಲಿ ಬೆಂಗಾವಲು ಕರ್ತವ್ಯ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ವಾಹನಗಳು ಲಭ್ಯವಿಲ್ಲ:

ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಇತ್ತೀಚೆಗೆ ಬಳಕೆ ಮಾಡುತ್ತಿದ್ದ ಇಲಾಖೆ ವಾಹನಕ್ಕೆ 15 ವರ್ಷದ ಎಪ್.ಸಿ ಅವಧಿ ಪೂರ್ಣಗೊಂಡು ವಾಹನ ಸಧೃಡತೆ ಕಳೆದು ಕೊಂಡ ಹಿನ್ನಲೆ ಇಲಾಖೆಯು ಹಿಂಪಡೆದಿದೆ. ಪೊಲೀಸ್ ಇಲಾಖೆಯಲ್ಲಿ 15 ವರ್ಷ ವಾಹನ ಬಳಕೆಯಾದ ಬಳಿಕ ಎ್.ಸಿ ನವೀಕರಣಕ್ಕೆ ಅವಕಾಶ ವಿರುವುದಿಲ್ಲ. ಇನ್ನು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ವಾಹನ ಲಭ್ಯತೆಯಿಲ್ಲದ ಕಾರಣ ಕೊಳ್ಳೇಗಾಲ ಪಟ್ಟಣ ಠಾಣೆ, ಹನೂರು ಪಟ್ಟಣ ಪೊಲೀಸ್ ಠಾಣೆ, ರಾಮಾಪುರ ಪೊಲೀಸ್ ಠಾಣೆ, ಯಳಂದೂರು ಪೊಲೀಸ ಠಾಣೆ ಸಬ್ ಇನ್ಸ್‌ಪೆಕ್ಟರ್‌ಗಳಿಗೆ ಕರ್ತವ್ಯ ನಿರ್ವಹಿಸಲು ಇಲಾಖೆ ವಾಹನಗಳನ್ನು ನಿಯೋಜನೆ ಮಾಡಿಲ್ಲ.

ರಾತ್ರಿ ಗಸ್ತಿಗೆ ಸಮಸ್ಯೆ: ಇಲಾಖೆ ವಾಹನವಿಲ್ಲದೆ ಆರಕ್ಷಕ ಉಪನಿರೀಕ್ಷಕರಿಗೆ ರಾತ್ರಿಗಸ್ತು ನಡೆಸುವುದು ಕಷ್ಟಕರವಾಗಿದೆ. ರಾಮಾ ಪುರ ಪೊಲೀಸ್ ಠಾಣೆ, ಹನೂರು ಪೊಲೀಸ್ ಠಾಣೆ, ಯಳಂದೂರು ಪೊಲೀಸ್ ಠಾಣೆ ಸರಹದ್ದು ವ್ಯಾಪ್ತಿ ದೊಡ್ಡದಾಗಿರುತ್ತದೆ. ನೂರಾರು ಹಳ್ಳಿಗಳಿವೆ. ಅಲ್ಲದೆ ಕಾಡಂಚಿನ ಪ್ರದೇಶವಿರುವುದ್ದರಿಂದ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿರುವುದರಿಂದ ರಕ್ಷಣೆ ನೀಡುವ ಪೊಲೀಸರಿಗೂ ಜೀವ ಭಯವಿದೆ. ದ್ವಿಚಕ್ರ ವಾಹನ ಗಳಲ್ಲಿ ಗಸ್ತು ಮಾಡಲು ಸಾಧ್ಯವಿಲ್ಲ. ಜನ ನಿಬಿಡವಾದ ಪ್ರದೇಶಗಳಲ್ಲಿ ರಾತ್ರಿ ಗಸ್ತು ಮಾಡ ಬೇಕಾ ಗಿರುವುದರಿಂದ ಕಳ್ಳರು, ದಂಧೆಕೋರರ ಚಟುವಟಿಕೆಗಳನ್ನು ತಡೆಗಟ್ಟಲು ಸುರಕ್ಷಿತವಾದ ಇಲಾಖೆ ವಾಹನಗಳು ಅತ್ಯಗತ್ಯದೆ. ಅಂತೆಯೇ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಮುಖವಾಗಿ ಟ್ರಾಫಿಕ್ ಸಮಸ್ಯೆ ನಿವಾರಿಸಲು ಹಾಗು ರಾತ್ರಿಗಸ್ತು ಮಾಡಲು ವಾಹನಬೇಕಾಗಿದೆ. ಪೊಲೀಸ್ ವಾಹನ ರಾತ್ರಿ ವೇಳೆ ಗಸ್ತು ಮಾಡಿದರೆ ವಿವಿಧ ಕ್ರಿಮಿನಿಲ್ ಪ್ರಕರಣಗಳಿಗೆ ಕಡಿವಾಣ ಹಾಕಬಹುದಾಗಿದೆ. ಖಾಸಗಿ ವಾಹನಗಳು ಗಸ್ತಿಗೆ ಬಳಸುವಾಗ ದುಷ್ಕರ್ಮಿಗಳು, ಕಳ್ಳರಿಂದ ತೊಂ ದರೆಗೊಳಗಾಗುವ ಸಂಭವ ಹೆಚ್ಚಿರುತ್ತದೆ. ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳು ಎಚ್ಚತ್ತು ಕಿರಿಯ ಅಧಿಕಾರಿಗಳು ದಕ್ಷತೆ ಹಾಗೂ ಆತಂಕ ರಹಿತವಾಗಿ ಕೆಲಸ ನಿರ್ವಹಿಸಲು ವಾಹನಗಳನ್ನು ನೀಡಬೇಕಿದೆ.

ವಿವಿಧೆ ಠಾಣೆಯ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗಳಿಗೆ ಇಲಾಖೆ ವಾಹನ ಇಲ್ಲದಿರುವುದು ಗಮನದಲ್ಲಿದೆ. ಈ ಸಂಬಂಧ ಸರ್ಕಾರಕ್ಕೆ ವಾಹನ ಲಭ್ಯತೆ ಇಲ್ಲದಿರುವ ಬಗ್ಗೆ ಮನವಿ ಸಲ್ಲಿಸಲಾಗಿದೆ. ಅಲ್ಲದೆ, ವಾಹನಗಳಿಗಾಗಿ ಶಾಸಕರ ನೆರವು ಪಡೆಯಲು ಮುಂದಾಗಿದ್ದೇವೆ. ಈಗಾಗಲೇ ಹನೂರು ಶಾಸಕರು 2 ವಾಹನ ನೀಡುವ ಭರವಸೆಯನ್ನು ನೀಡಿದ್ದಾರೆ. ಇಲಾಖೆ ಮೂಲಕವೂ ಕ್ರಮ ವಹಿಸಲಾಗಿದೆ. ಜರೂರಾಗಿ ಸಬ್ ಇನ್ಸ್‌ಪೆಕ್ಟರ್‌ಗಳ ಕರ್ತವ್ಯಕ್ಕೆ ವಾಹನ ನಿಯೋಜನೆ ಮಾಡಲಾಗುವುದು. ಡಾ.ಬಿ.ಟಿ.ಕವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಾಮರಾಜನಗರ