ಚಿತ್ರದುರ್ಗ: ಒಂದೇ ಕಡೆ 5 ವರ್ಷಕ್ಕೂ ಮೇಲ್ಪಟ್ಟು ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರು, ಎಲ್ಲ ಅಂಗರಕ್ಷಕರನ್ನು ಸರ್ಕಾರದ ಆದೇಶದಂತೆ ವರ್ಗಾಯಿಸಬೇಕು ಎಂದು ಜಿಲ್ಲಾ ಪೊಲೀಸ್ ಇಲಾಖೆಗೆ ಒತ್ತಾಯಿಸಿ ಕರುನಾಡ ವಿಜಯಸೇನೆ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.
ಜಿಲ್ಲೆಯ ಅನೇಕ ಠಾಣೆಗಳಲ್ಲಿ 5 ವರ್ಷಗಳಿಗೂ ಹೆಚ್ಚು ಕಾಲದಿಂದ ವರ್ಗಾವಣೆಯಾಗದೆ, ಹಲವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಗೃಹ ಇಲಾಖೆ ಆದೇಶದನ್ವಯ ಜಿಲ್ಲೆಯಲ್ಲಿ ಕೆಲವರನ್ನು ವರ್ಗಾಯಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ವರ್ಗಾವಣೆ ವಿಚಾರ ಬಂದಾಗ ನಿಯಮ ಪಾಲಿಸಬೇಕು. ಜಿಲ್ಲೆಯ ಎಲ್ಲ ಠಾಣೆಗಳಿಗೂ ಇದು ಅನ್ವಯಿಸಬೇಕು. ತಾರತಮ್ಯ ಮಾಡಬಾರದು ಎಂದು ಕೋರಿದರು.
ವಿಜಯಸೇನೆ ಅಧ್ಯಕ್ಷ ಕೆ.ಟಿ.ಶಿವಕುಮಾರ್, ಮಹಿಳಾ ಅಧ್ಯಕ್ಷೆ ವೀಣಾಗೌರಣ್ಣ, ಪದಾಧಿಕಾರಿಗಳಾದ ಗೋಪಿನಾಥ್, ಅಣ್ಣಪ್ಪ, ಸಿ.ಜಗದೀಶ್, ಮುಜಾಹಿದ್, ಪಿ.ಅವಿನಾಶ್, ಪಾಂಡು, ನಾಗರಾಜ್ ಮುತ್ತು, ಮಧುಸೂದನ್, ಸುರೇಶ್ ಇತರರಿದ್ದರು.