ಕಲಬುರಗಿ: ಜಿಲ್ಲೆಯಲ್ಲಿ ನಡೆಯುತ್ತಿರುವ ಅನ್ಯಾಯ, ಅಕ್ರಮದ ಬಗ್ಗೆ ಮುಖ್ಯಮಂತ್ರಿಗೆ ಮನವಿ ಕೊಡಲು ಮುಂದಾದ ಹೋರಾಟಗಾರ, ಕೋಲಿ-ಕಬ್ಬಲಿಗ ಸಮಾಜದ ಸಮನ್ವಯ ಸಮಿತಿ ಮುಖಂಡ ಅವ್ವಣ್ಣ ಮ್ಯಾಕೇರಿ ಅವರ ಮೇಲೆ ಪೊಲೀಸರು ದರ‍್ಜನ್ಯ ನಡೆಸಿ, ಬಂಧಿಸಿದ್ದು, ಖಂಡನೀಯ ಎಂದು ಸಮಿತಿ ಮುಖಂಡರಾದ ಬಸವರಾಜ ಸಪ್ಪನಗೋಳ, ಬಸವರಾಜ ಬೂದಿಹಾಳ ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಅವರು ಬುಧವಾರ ನಗರಕ್ಕೆ ಆಗಮಿಸಿದ ವೇಳೆ ನಿಯೋಗದೊಂದಿಗೆ ಭೇಟಿ ಮಾಡಲು ನಗರದ ಐವಾ-ನ್ ಇ ಶಾಹಿ ಅತಿಥಿ ಗೃಹ ಪ್ರವೇಶದ ವೇಳೆ ವಿನಾಕಾರಣ ತಡೆದು, ವಾಗ್ವಾದ ನಡೆಸಿ, ದರ‍್ಜನ್ಯ ಎಸಗಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿ ತಳ್ಳಾಡಿ ಅಮಾನುಷವಾಗಿ ಪೊಲೀಸ್ ವಾಹನದಲ್ಲಿ ಎತ್ತಿಹಾಕಿಕೊಂಡು ಅಪಮಾನ ಎಸಗಿದ್ದು, ಕೂಡಲೇ ದರ‍್ಜನ್ಯ ಎಸಗಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಮುಖ್ಯಮಂತ್ರಿಗೆ ಮನವಿ ನೀಡಲು ಪೊಲೀಸ್ ಇಲಾಖೆ ಅನುಮತಿ ನೀಡಿತ್ತು. ಮನವಿ ನೀಡುವ ಬಗ್ಗೆ ಮಾಹಿತಿ ನೀಡಿದ್ದರೂ ಯಾರದ್ದೋ ಕಿವಿ ಮಾತಿಗೆ ಮಣಿದು, ಹೋರಾಟಗಾರರನ್ನು ಅವಮಾನ ಮಾಡಿದ್ದು, ಸರಿಯಲ್ಲ. ಇದು ಮಾನವ ಹಕ್ಕುಗಳ ಉಲ್ಲಂನೆಯಾಗಿದೆ. ತಣ ಅಲ್ಲಿ ಕರ‍್ಯನರ‍್ವಹಿಸಿದ್ದ ಪೊಲೀಸ್ ಅಧಿಕಾರಿ, ಸಿಬ್ಬಂದಿಯನ್ನು ತಣ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ತಮ್ಮಮ್ಮ ಡಿಗ್ಗಿ, ಸಂತೋಷ ತಳವಾರ, ಬಸವರಾಜ ಗುಂಡಲಗಿರಿ, ಚಂದ್ರಕಾಂತ ಕಿರಸಾವಳಗಿ, ಸಾಯಬಣ್ಣ ಜಾಲಗಾರ, ಮಹಾದೇವ ಕಲ್ಲೂರ, ಪ್ರೇಮ ಕೋಲಿ, ಜಯಪ್ರಕಾಶ ಇತರರಿದ್ದರು.