ಜಿಲ್ಲೆ

ಪೊಮ್ಮಕ್ಕಡ ಒಕ್ಕೂಟದ ವಾರ್ಷಿಕ ಸಭೆ

ವಿರಾಜಪೇಟೆ: ಕೊಡವ ಪೊಮ್ಮಕ್ಕಡ ಒಕ್ಕೂಟ ಕೊಡವ ಸಮಾಜದ 2025-2026 ನೇ ಸಾಲಿನ ವಾರ್ಷಿಕ ಸಭೆ ವಿರಾಜಪೇಟೆ ಕೊಡವ ಸಮಾಜದ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿತು.

ಒಕ್ಕೂಟದ ಕಾರ್ಯದರ್ಶಿ ಚಿತ್ರ ಚರ್ಮಣ ಮಾತನಾಡಿ, ಸಭೆಯ ಕ್ರಿಯಾ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಖಜಾಂಚಿ ತಾತಂಡ ಯಶು ಕಬೀರ್ ಲೆಕ್ಕ ಪತ್ರವನ್ನು ಸಭೆಯಲ್ಲಿ ಮಂಡಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ವಿರಾಜಪೇಟೆ ಕೊಡವ ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷರಾದ ತಾತಂಡ ಜ್ಯೋತಿ ಪ್ರಕಾಶ್ ಮಾತನಾಡಿ, ಕೊಡವ ಪೊಮ್ಮಕ್ಕಡ ಒಕ್ಕೂಟವು ಇನ್ನು ಮುಂದೆ ವಿರಾಜಪೇಟೆ ಕೊಡವ ಸಮಾಜದ ಅಂಗ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದ್ದು ಕೊಡವ ಸಮಾಜದ ಆಡಳಿತ ಮಂಡಳಿಯವರು ಸಹಕಾರ ನೀಡುತ್ತಾ ಬಂದಿದ್ದಾರೆ ಎಂದರು.

ಒಕ್ಕೂಟದ ಬೈಲಾದಂತೆ ಕಾರ್ಯನಿರ್ವಹಣೆಯನ್ನು ಮಾಡಲಾಗುವುದು. ಈ ವರ್ಷದಲ್ಲಿ ಒಕ್ಕೂಟದ ವತಿಯಿಂದ ಪ್ರಮುಖ ಹಬ್ಬಗಳು ಹಾಗೂ ದಿನಾಚರಣೆಯನ್ನು ಆಚರಿಸಲಾಗುವುದು. ಸಮಾಜಮುಖಿ ಕಾರ್ಯಚಟುವಟಿಕೆಗಳಿಗೂ ಒತ್ತು ನೀಡಲಾಗುವುದು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯರನ್ನು ಸನ್ಮಾನಿಸಲಾಗುವುದು ಎಂದರು.

ಕಳೆದ ಬಾರಿ ಆಡಳಿತ ಮಂಡಳಿಯ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು. ಒಕ್ಕೂಟದ ಜಂಟಿ ಕಾರ್ಯದರ್ಶಿ ಮೂಕೊಂಡ ಪ್ರೀತ್ ಈರಪ್ಪ, ಯಶು ಕಬೀರ್, ಮುರುವಂಡ ಉಷಾ ನೀಲಕಂಠ, ಪೊಮ್ಮಕ್ಕಡ ಒಕ್ಕೂಟದ ಸದಸ್ಯರು ಇದ್ದರು.