ಹಗರಿಬೊಮ್ಮನಹಳ್ಳಿ: ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಮಹರ್ಷಿ ವಾಲ್ಮೀಕಿ ಮಹಾಸಭಾ ತಾಲೂಕು ಘಟಕದಿಂದ ಗುರುವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಆರ್.ಕವಿತಾಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಸಮುದಾಯದ ಪ್ರಮುಖ ಚಿಂತ್ರಪಳ್ಳಿ ದೇವೇಂದ್ರ ಮಾತನಾಡಿ, ವಾಲ್ಮೀಕಿ ಸಮುದಾಯ ದೊಡ್ಡದಿದ್ದು, ಈಗಿರುವ ಮೀಸಲಾತಿಯೇ ಸಾಲುತ್ತಿಲ್ಲ. ಬೇರೆ ಬಹುದೊಡ್ಡ ಸಮುದಾಯವನ್ನು ನಮ್ಮೊಂದಿಗೆ ಸೇರಿಸುವುದರಿಂದ ನಮಗೆ ಅನ್ಯಾಯವಾಗುತ್ತದೆ. ನಮ್ಮಲ್ಲಿಯೇ ಪೈಪೋಟಿ ನಡೆಯುವ ಸಂದರ್ಭ ಸೃಷ್ಟಿ ಮಾಡಬಾರದು ಎಂದು ಒತ್ತಾಯಿಸಿದರು.
ವಾಲ್ಮೀಕಿ ವೃತ್ತದಿಂದ ತಾಲೂಕು ಆಡಳಿತ ಸೌಧದವರೆಗೆ ಬೈಕ್‌ರ‌್ಯಾಲಿ ನಡೆಸಲಾಯಿತು. ಪ್ರಮುಖರಾದ ಬಂಟರ ಕುಬೇರ, ಡಿಶ್ ಮಂಜುನಾಥ, ಎಸ್.ಹುಚ್ಚಪ್ಪ, ಉಮಾಪತಿ, ಸುರೇಶ, ಸಿ.ಮಲ್ಲಿಕಾರ್ಜುನ, ಸೆರೆಗಾರ ಹುಚ್ಚಪ್ಪ, ಚಿಂತ್ರಪಳ್ಳಿ ನಾಗರಾಜ, ತಳವಾರ ಕೊಟ್ರೇಶ, ದೇವೇಂದ್ರ, ಕೋಗಳಿ ಹನುಮಂತಪ್ಪ, ಡಾ.ಬಾಲಪ್ಪ, ಶಿವಕುಮಾರ್, ವಿಶ್ವನಾಥ, ವಕೀಲ ಮಂಜುನಾಥ, ಆರ್.ಎಸ್‌ಎಸ್‌ಎನ್ ಅಧ್ಯಕ್ಷ ಬಸವರಾಜ, ನಾಗರಾಜಪ್ಪ, ಉದಯ, ನೀಲಪ್ಪ, ಬ್ಯಾಟಿ ಸಂದೀಪ ಇತರರಿದ್ದರು.