ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಮದಿಹಾಳದ ಶ್ರೀ ಯಾಜ್ಞವಲ್ಕ್ಯ ಸೇವಾ ಸಂಘದ ವತಿಯಿಂದ ಜೂ. 6ರಂದು ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಮಹಷಿರ್ಗಳ ಜಯಂತಿ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಏ. 10ರಂದು ಸಂಜೆ 6 ಗಂಟೆಗೆ ಮದಿಹಾಳದ ಶ್ರೀ ಚಿದಂಬರ ಸೇವಾ ಸಮಿತಿ ಕಚೇರಿಯಲ್ಲಿ ಪೂರ್ವಭಾವಿ ಸಭೆ ಏರ್ಪಡಿಸಲಾಗಿದೆ. ಎಲ್ಲ ಭಕ್ತರು ಹಾಜರಾಗಬೇಕು ಎಂದು ಸಂದ ಅಧ್ಯಕ್ಷ ಪ್ರಕಾಶ ಕುಲಕರ್ಣಿ ತಿಳಿಸಿದ್ದಾರೆ.